ನಟ ದರ್ಶನ್‌ಗೆ ಏನಾಗಿತ್ತು? ಹಾಸ್ಪಿಟಲ್‌ಗೆ ದಾಖಲಾಗಿದ್ದು ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮೈಸೂರಿನಲ್ಲಿ ಕೊಲಂಬಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ನಟ ದರ್ಶನ್‌, ಬುಧವಾರ ಮುಂಜಾನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ದರ್ಶನ್ ಆರೋಗ್ಯವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆದಿದ್ದಾರೆ ಕೊಲಂಬಿಯಾ ಆಸ್ಪತ್ರೆ ವೈದ್ಯರು. ಸಾಮಾನ್ಯವಾಗಿ ವಾರದಲ್ಲಿ ಒಂದೆರಡು ದಿನಗಳನ್ನು ಮೈಸೂರಿನಲ್ಲೇ ಕಳೆಯುವ ದರ್ಶನ್‌ ಫಾರ್ಮ್‌ಹೌಸ್‌ನಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಅವುಗಳ ಆರೈಕೆ, ಉಪಚಾರ ಮಾಡುತ್ತಾ ಕಾಲ ಕಳೆಯುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ನಿನ್ನೆ ಮೈಸೂರಿನಲ್ಲಿದ್ದಾಗಲೇ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲಿದ್ದರು ಎನ್ನಲಾಗಿದೆ.

ನಟ ದರ್ಶನ್‌ಗೆ ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರ ತಂಡ ತೀವ್ರ ತರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಒಂದು ದಿನ ಆಸ್ಪತ್ರೆಯಲ್ಲಿ ಉಳಿದು ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲೆ ಉಳಿದಿದ್ದ ನಟ ದರ್ಶನ್, ರಾತ್ರಿ ತನಕ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸ್ಪೇಷಲ್ ವಾರ್ಡ್‌ನಲ್ಲಿ ಇದ್ದರು. ಸ್ಯಾಂಡಲ್‌ವುಡ್‌ನ ಬಾಕ್ಸ್‌ ಆಫೀಸ್‌ ಸುಲ್ತಾನ, ದರ್ಶನ್‌ಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ವೈದ್ಯರ ಸಲಹೆ ಮೇರೆಗೆ ಒಂದು ದಿನ ವಿಶ್ರಾಂತಿ ಪಡೆದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

ಸಂಜೆ ಬಳಿಕ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿದ ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯರು, ದರ್ಶನ್ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್‌ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಹೊಟ್ಟೆ ನೋವಿನ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಸ್ಟ್ರೋ ಎಂಟರಾಲಜಿಸ್ಟ್ ತಜ್ಞ ಡಾ.ಅನೂಪ್ ಆಳ್ವಾ ನಟ ದರ್ಶನ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ದರ್ಶನ್ ಆರೋಗ್ಯ‌ ಸ್ಥಿರವಾಗಿದೆ. ಅವರಿಗೆ ವಿಶೇಷ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದರು.

ರಾತ್ರಿ 8 ಗಂಟೆ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ದರ್ಶನ್, ಮಾಧ್ಯಮಗಳ ಜೊತೆ ಮಾತನಾಡಿ, ನಾನು ಫಸ್ಟ್ ಕ್ಲಾಸ್ ಆಗಿ ಇದ್ದೀನಿ. ಏನು ಆಗಿಲ್ಲ ಸ್ವಲ್ಪ ಗ್ಯಾಸ್ಟ್ರಿಕ್‌ ಆಗಿತ್ತು. ನಮ್ಮದು ಟೈಂ ಇಲ್ಲದ ಟೈಂನಲ್ಲಿ ಊಟ ಮಾಡುತ್ತೇವೆ. ಸರಿಯಾದ ಟೈಂಗೆ ಊಟ ತಿಂಡಿ ನೋಡಿಕೊಂಡಿಲ್ಲ. ನಮ್ಮ ಡಾಕ್ಟರ್ ಅಜೆಯ್ ಹೆಗಡೆ ಇದ್ದಾರೆ ಅವರು ನೋಡಿಕೊಂಡಿದ್ದಾರೆ. ಈಗ ಆರಾಮಾಗಿ ಇದ್ದೀನಿ ಎಂದು ಡಿಸ್ಚಾರ್ಜ್ ಬಳಿಕ ನಟ ದರ್ಶನ್ ತಿಳಿಸಿದ್ದಾರೆ.

ಒಟ್ಟಾರೆ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಹಾಸ್ಪಿಟಲ್‌ಗೆ ದಾಖಲಾಗಿದ್ದರಿಂದ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದ ಡಿ ಬಾಸ್‌ ಅಭಿಮಾನಿಗಳಿಗೆ ಸದ್ಯ ನಿರಾಳ ಭಾವ ಬಂದಂತಾಗಿದೆ. ಅದೂ ಅಲ್ಲದೆ ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್‌ ಆದ ಬಳಿಕ ದರ್ಶನ್‌ ಮಾತನಾಡಿದ್ದನ್ನು ಕೇಳಿ ಇದೀಗ ಸತೃಷ್ಟರಾಗಿದ್ದಾರೆ.

Leave a Reply