ರಾಜ್ಯದ ಜನರಿಗೆ ಬಿಎಸ್ ವೈ ಬಜೆಟ್ ನಲ್ಲಿ ಕೊಟ್ಟ ಗಿಫ್ಟ್ ಗಳೇನು?

ಡಿಜಿಟಲ್ ಕನ್ನಡ ಟೀಮ್:

ನೆರೆಯಿಂದಾಗಿರುವ ನಷ್ಟ, ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು ಕಡಿತ, ಆರ್ಥಿಕ ಹಿಂಜರಿತಗಳಂತಹ ಪ್ರಮುಖ ಸವಾಲುಗಳ ನಡುವೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಯಡಿಯೂರಪ್ಪ ಅವರು ರಾಜ್ಯದ ಜನರಿಗೆ ಕೊಟ್ಟಿರುವ ಪ್ರಮುಖ ಯೋಜನೆಗಳು ಹೀಗಿವೆ…

 • ಭಾಗ್ಯಲಕ್ಷ್ಮಿ, ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆಗಳ ಮುಂದುವರಿಕೆ.
 • ಕೃಷಿ, ನಿರಾವರಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಒತ್ತು.
 • ಹೊಸ ಕೃಷಿ ನೀತಿ. ಕೃಷಿ ಕ್ಷೇತ್ರಕ್ಕೆ 32,259 ಕೋಟಿ ಮೀಸಲು
 • 20 ಲಕ್ಷವರೆಗಿನ ಮನೆ ಖರೀದಿಗೆ ನೋಂದಣಿ ಶುಲ್ಕ ಇಲ್ಲ.
 • ಸಣ್ಣ, ಅತಿ ಸಣ್ಣ ರೈತರಿಗೆ ವಾರ್ಷಿಕ 10 ಸಾವಿರ ರೂ.
 • ಸಂಚಾರಿ ಕೃಷಿ ಹೆಲ್ತ್ ಕ್ಲೀನಿಕ್ ಸ್ಥಾಪನೆ.
 • ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜ, ಕೀಟ ನಾಶಕ, ರಸಗೊಬ್ಬರ.
 • ಮಹದಾಯಿ ಯೋಜನೆಗೆ 500 ಕೋಟಿ,
 • ಎತ್ತಿನ ಹೊಳೆಗೆ 1500 ಕೋಟಿ.
 • ನವಿಲೆ ಬಲಿ ಅಣೆಕಟ್ಟು ನಿರ್ಮಾಣಕ್ಕೆ 20 ಕೋಟಿ.
 • ಬೆಂಗಳೂರು ಭಿವೃದ್ಧಿಗೆ 8,772 ಕೋಟಿ ಶುಭ್ರ ಬೆಂಗಳೂರು ಯೋಜನೆಗೆ 999 ಕೋಟಿ.
 • ಮೀನುಗಾರರಿಗೆ ಕಿಸಾನ್ ಕಾರ್ಡ್.
 • ಮಹಿಳಾ ಮೀನುಗಾರರಿಗೆ ಬೈಕ್.
 • ಕ್ರೈಸ್ತ ಸಮುದಾಯಕ್ಕೆ 200 ಕೋಟಿ.
 • 276 ಪ್ಲಬಿಕ್ ಶಾಲೆಗಳಿಗೆ 100 ಕೋಟಿ.
 • ಶನಿವಾರ ಮಕ್ಕಳಿಗೆ ಬ್ಯಾಗ್ ಹೊರೆ ಇಲ್ಲ.
 • 10 ಲಕ್ಷ ಮನೆಗಳಿಗೆ ಗಂಗೆ ನೀರು ಸೌಲಭ್ಯ.
 • ಉಪ್ಪಾರ ಅಭಿವೃದ್ಧಿಗೆ ನಿಗಮ.
 • ಆರ್ಯ ವೈಶ್ಯ ನಿಗಮಕ್ಕೆ 10 ಕೋಟಿ.
 • ವಿಶ್ವಕರ್ಮ ಸಮುದಾಯಕ್ಕೆ 25 ಕೋಟಿ ಮೀಸಲು.
 • ಬಡವರ ತೀರ್ಥಯಾತ್ರೆಗೆ 20 ಕೋಟಿ.
 • ರಾಮನಗರದಲ್ಲಿ ರಣಹದ್ದುಧಾಮ ನಿರ್ಮಾಣ.
 • ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗೆ ಆರೋಗ್ಯ ಸಂಜೀವಿನಗೆ ನುದಾನ.
 • ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ 500 ಕೋಟಿ.
 • ಬಿಎಂಟಿಸಿ ಅಬಿವೃದ್ಧಿಗೆ 700 ಕೋಟಿ.
 • ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ 66 ಕೋಟಿ.
 • 325 ಅಡಿ ಬಸವೇಶ್ವರರ ಪ್ರತಿಮೆ ನಿರ್ಮಾಣಕ್ಕೆ 20 ಕೋಟಿ.
 • 6,649 ಶಾಲಾ ಕೊಠಡಿ ನಿರ್ಮಾಣ. ಶಾಸಕರಿಂದ ತಲಾ 3 ಶಾಲೆ ದತ್ತು.
 • ಕಲ್ಯಾಮ ಕರ್ನಾಟಕದ 6 ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ.
 • ಹೊಸದಾಗಿ ಸುಮಾರ್ಗ ಯೋಜನೆ ಜಾರಿ ಮೂಲಕ 20 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಗೆ 790 ಕೋಟಿ.
 • ಧಾರವಾಡ ಬೆಳಗಾವಿ ನಡುವೆ ನೂತನ ರೈಲು ಮಾರ್ಗ. 121 ಕಿ.ಮೀ ಅಂತರ 73 ಕಿ.ಮೀಗೆ ಇಳಿಕೆ. ಕೇಂದ್ರ ರಾಜ್ಯ ಪಾಲುದಾರಿಕೆಯಲ್ಲಿ ಯೋಜನೆ.
 • 60 ವರ್ಷ ಮೀರಿದ ಬಿಪಿಎಲ್ ಕಾರ್ಡ್ ದಾರರಿಗೆ ಜೀವನಚೈತ್ರ ಯೋಜನೆ. ಇದಕ್ಕಾಗಿ 20 ಕೋಟಿ ಮೀಸಲು.
 • 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ.

Leave a Reply