ಡಿಜಿಟಲ್ ಕನ್ನಡ ಟೀಮ್:
ತಮ್ಮ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಪ್ರಾತಿನಿದ್ಯತೆ ನೀಡಲಾಗುವುದು ಎಂದು ತಿಳಿಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರೈತಾಪಿ ವರ್ಗದ ಜನರಿಗಾಗಿ ಅನೇಕ ಯೋಜನೆಗಳ ಬಜೆಟ್ ಬುತ್ತಿಯನ್ನು ನೀಡಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಸಿಎಂ ಬಜೆಟ್ ವೇಳೆ ಪ್ರಸ್ತಾಪಿಸಿದ ಪ್ರಮುಖ ಅಂಶಗಳಿಷ್ಟು…
- ರೈತರ ಕಲ್ಯಾಣ ಮತ್ತು ಆದಾಯ ವೃದ್ಧಿಗೆ ಸರ್ಕಾರ ಬದ್ಧ.
- ಕೇಂದ್ರ ಸರ್ಕಾರದ ಯೋಜನೆಗಳ ಜತೆಗೆ ರಾಜ್ಯದ ಕೃಷಿ ನಾಯಕರು ಹಾಗೂ ತಜ್ಞರ ಸಲಹೆ ಮೇರೆಗೆ ಹೊಸ ಕೃಷಿ ನೀತಿ ರೂಪಿಸಲಾಗಿದೆ.
- ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ರೈತರಿಗೆ ಪ್ರತಿ ಹೆಕ್ಟೇರ್ ಗೆ ವಾರ್ಷಿಕ 10 ಸಾವಿರ ಸಹಾಯಧನ.
- ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ ವಾರ್ಷಿಕ 6 ಸಾವಿರ ಯೋಜನೆ ಜತೆಗೆ ರಾಜ್ಯ ಸರ್ಕಾರ 4 ಸಾವಿರ ನೀಡಿ ಒಟ್ಟು 10 ಸಾವಿರ ನೀಡಲಾಗುತ್ತಿದೆ. ಇದಕ್ಕಾಗಿ 2600 ಕೋಟಿ ಮೀಸಲು.
- ರೈತರು ಮತ್ತು ಮೀನುಗಾರರಿಗೆ ಕಿಸಾನ್ ಕಾರ್ಡ್ ವಿತರಣೆ.
- ಮತ್ಸ್ಯ ವಿಕಾಸ ಯೋಜನೆಗೆ 1.5 ಕೋಟಿ ಅನುದಾನ ಮೀಸಲು.
- ಕೀಟ ನಾಶಕ, ಬಿತ್ತನೆ ಬೀಜ, ರಸಗೊಬ್ಬರ ರೈತರ ಮನೆ ಬಾಗಿಲಿಗೆ ನೀಡುವ ಸಂಬಂಧ ಹೊಸ ನೀತಿ.
- ಸಿರಿಧಾನ್ಯ ಬೆಳೆಗೆ ಉತ್ತೇಜಿಸಲು 10 ಸಾವಿರ ರೂ. ಪ್ರೋತ್ಸಾಹ ಧನ.
- ಸಂಚಾರಿ ಕೃಷಿ ಹೆಲ್ತ್ ಕೇರ್ ಆರಂಭ.
- ಸಾವಯವ ಕೃಷಿಗೆ ಹೆಚ್ಚಿನ ಒತ್ತು. 200 ಕೋಟಿ ಮೀಸಲು.
- ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ ಮತ್ತು ಪ್ರದೇಶವಾರು ಸೂಕ್ತ ಬೆಳೆಗೆ ಮಾಹಿತಿ.
- ರಾಜ್ಯದಲ್ಲಿ 40 ಪ್ರಾತ್ಯಕ್ಷಿಕೆ ಕೇಂದ್ರ.
- ಆಹಾರ ಸಂಸ್ಕರಣ ವಲಯಕ್ಕೆ ಆದ್ಯತೆ.
- ಸುಜಲಾ ಯೋಜನೆಗೆ ಒತ್ತು ನೀಡಿ ಜಲಾನಯನ ಅಭಿವೃದ್ಧಿಗೆ ಕ್ರಮ.
- ಶಿವಮೊಗ್ಗ ಕೃಷಿ ವಿವಿಗೆ ಹೆಚ್ಚಿನ ನೆರವು. ಸಾಗರದಲ್ಲಿ 797 ಎಕರೆ ಭೂಮಿ. ಈ ವರ್ಷದಿಂದ ತರಗತಿ ಆರಂಭ.
- ತೋಟಗಾರಿಕೆ ಬೆಳೆ ವಿಸ್ತರಣೆಗೆ ಕ್ರಮ. 75 ಕೋಟಿ ವೆಚ್ಛದಲ್ಲಿ ಶೀತಲಿಕರಣ ಘಟಕ.
- ಹಾಪ್ ಕಾಮ್ಸ್ ಸಂಸ್ಥೆ ಬಲಪಡಿಸುವಿಕೆ.
- ಕೃಷಿ ಉತ್ಪನ್ನಗಳ ಸಾಗಾಣೆಗೆ ಕೃಷಿ ಸಂಚಾರಿ ರೈಲು ನೆರವು.
- ಅಟಲ್ ಭೂಜಲ ಯೋಜನೆಗೆ ಒತ್ತು. ಐದು ಜಿಲ್ಲೆಗಳಲ್ಲಿ ಯೋಜನೆ. ಕಿಂಡಿ ಅಣೆಕಟ್ಟು ರಚನೆಗೆ ಆದ್ಯತೆ.
- ತುಂಗಾಭದ್ರಾ ಅಣೆಕಟ್ಟು ಅಭಿವೃದ್ಧಿಗೆ 20 ಕೋಟಿ.
- ಏತ ನೀರಾವರಿ ಯೋಜನೆ ಆರಂಭ 5 ಸಾವಿರ ಕೋಟಿ ವೆಚ್ಚದ ಯೋಜನೆ.
- ರೇಷ್ಮೆ ಕೃಷಿಗೆ ಆದ್ಯತೆ, ರೇಷ್ಮೇ ಹುಳು ಸಂಸ್ಕರಣಾ ಘಟಕ.
- ಹೈನುಗಾರಿಕೆ ಕ್ಷೇತ್ರಕ್ಕೆ ಒತ್ತು. ಈ ಕುರಿತು ಸಮೀಕ್ಷೆ.
- ಸಮಗ್ರ ವರಾಹಾಭಿವೃದ್ಧಿ ಯೋಜನೆಯಿಂದ ಹಂದಿ ಸಾಕಾಣೆಗೆ 5 ಕೋಟಿ ರೂ.
- ಹೆಣ್ಣು ಕರುಗಳ ಜನನ ಹೆಚ್ಚಳಕ್ಕೆ ಕ್ರಮ.
- ಮಹಿಳಾ ಮೀನುಗಾರರ ಸಬಲೀಕರಣ, ಬೈಕ್ ಸೌಲಭ್ಯ. ಹಿನ್ನೀರು ಮೀನುಗಾರರಿಗೆ ನೆರವು.
- 12.5 ಕೋಟಿ ವೆಚ್ಚದಲ್ಲಿ ಹೆಜಮಡಿಕೋಡಿಯಲ್ಲಿ ಬಂದರು. ಹಂಗಾರಕಟ್ಟೆ ಬಂದರು ಅಭಿವೃದ್ಧಿ. ಬೈಂದೂರು ಮರವಂತೆ ಅಭಿವೃದ್ಧಿಗೆ 80 ಕೋಟಿ.
- ಕೃಷಿ ಯಂತ್ರೋಪಕರಣ ಸಾಲ ಬಡ್ಡಿ ಮನ್ನಾ.
- ಅಡಿಕೆ ಕೃಷಿ ಸಾಲದ ಶೇ.5ರಷ್ಟು ಬಡ್ಡಿ ಮನ್ನಾ.
- ರೈತರ ಕನಿಷ್ಠ ಬೆಂಬಲ ಬೆಲೆಗೆ ಪ್ರಯತ್ನ.
- ಆವರ್ತ ನಿಧಿ ಮೊತ್ತ 2 ಸಾವಿರ ಕೋಟಿಗೆ ಹೆಚ್ಚಳ.