ಮತ್ತೆ ಮೂರು ಕೊರೋನಾ ಸೋಂಕು ಪತ್ತೆ! ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

ಲಡಾಖ್ ಹಾಗೂ ತಮಿಳುನಾಡಿನಲ್ಲಿ ಮೂರು ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ದೇಹದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 34ಕ್ಕೇರಿದೆ.

ಈ ಮೂವರಲ್ಲಿ ಇಬ್ಬರು ಲಡಾಖ್ ಮೂಲದವರಾಗಿದ್ದು, ಮತ್ತೊಬ್ಬ ತಮಿಳುನಾಡಿನವರಾಗಿದ್ದಾರೆ. ಇತ್ತೀಚೆಗೆ ಲಡಾಖ್ ಮೂಲದ ವ್ಯಕ್ತಿ ಇರಾನ್ ಗೆ ಭೇಟಿ ಕೊಟ್ಟಿದ್ದಾರೆ, ತಮಿಳುನಾಡಿನ ವ್ಯಕ್ತಿ ಒಮಾನ್ ಗೆ ಭೇಟಿ ನೀಡಿದ್ದ ಎಂಬುದು ತಿಳಿದುಬಂದಿದೆ ಎಂದು ಆರೋಗ್ಯ ಇಲಾಖೆ ವಿಶೇಷ ಕಾರ್ಯದರ್ಶಿ ಸಂಜೀವ ಕುಮಾರ್ ತಿಳಿಸಿದ್ದಾರೆ.

ಇನ್ನು ಕೊರೋನಾ ಸೋಂಕು ತಗುಳಿರುವ ಇಬ್ಬರು ಅಮೆರಿಕನ್ನರ ಜತೆ ಭೂತಾನ್ ನ 150 ಮಂದಿ ಸಂಪರ್ಕ ಬೆಳೆಸಿದ್ದು, ಇವರು ಭಾರತದ ವಿವಿಧ ನಗರಗಳಲ್ಲಿ ಸುತ್ತಾಡಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ಪ್ರಕರಣಗಳ ನಿಯಂತ್ರಣ ಕುರಿತ ಪರಿಶೀಲನಾ ಸಭೆ ನಡೆಸಿದ್ದು, ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವ ಕುರಿತು ಚರ್ಚಿಸಿದ್ದಾರೆ. ಈ ವೇಳೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ಇನ್ನು ಕತಾರ್ ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವನ್ನು ಮುಂದೂಡಲಾಗಿದೆ ಎಂದು ಅಖಿಲ ಭಾರತ ಫುಟ್ಬಾಲ್ ಸಂಸ್ಥೆ ತಿಳಿಸಿದೆ.

Leave a Reply