ಡಿಜಿಟಲ್ ಕನ್ನಡ ಟೀಮ್:
ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ದೇಶವೇ ನಾಚಿಕೆಪಡುವಂತ ಹಿಂಸಾಚಾರಕ್ಕೆ ಸಾಕ್ಷಿಯಾಯ್ತು. ಫೆಬ್ರವರಿ ತಿಂಗಳ ಹಿಂಸಾಚಾರಕ್ಕೆ 53 ಮಂದಿ ಸಾವನ್ನಪ್ಪಿದ್ದು 654 ಕೇಸ್ಗಳನ್ನು ದಾಖಲಿಸಲಾಗಿದೆ. ಈಶಾನ್ಯ ದೆಹಲಿಯ ಹಿಂಸಾಚಾರದ ಬಗ್ಗೆ ವರದಿ ಮಾಡಿದ್ದ ಮಾಧ್ಯಮಗಳ ಪೈಕಿ, ಕೇರಳದ ಏಷಿಯಾನೆಟ್ ಹಾಗು ಮೀಡಿಯಾ ಒನ್ ಟಿವಿ ಚಾನೆಲ್ಗಳ ಪ್ರಸಾರವನ್ನು 48 ಗಂಟೆಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ನಿನ್ನೆ ಶುಕ್ರವಾರ ಸಂಜೆ 7.30 ರಿಂದ ಭಾನುವಾರ ಸಂಜೆ 7.30ರ ತನಕ ಯಾವುದೇ ವರದಿ ಪ್ರಸಾರ ಮಾಡುವಂತಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಹೊರಡಿಸಿದ್ದ ಆದೇಶಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕೇರಳದಲ್ಲಿ ಮಾಧ್ಯಮ ಸಂಸ್ಥೆಗಳು ಮಾಡಿ ಕೆಲಸದಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ರ್ಯಾಲಿಗಳು ನಡೆಯುತ್ತಿವೆ.
ಮಾಧ್ಯಮಗಳ ಮೇಲಿನ ನಿರ್ಬಂಧಕ್ಕೆ ದೇಶಾದ್ಯಂತ ಆಕ್ರೋಶ ಶುರುವಾಗುತ್ತಿದ್ದ ಹಾಗೆ ನಿರ್ಧಾರದಿಂದ ಹಿಂದೆ ಸರಿದ ಕೇಂದ್ರ ಸರ್ಕಾರ, ಮಧ್ಯರಾತ್ರಿ 1.30ಕ್ಕೆ ಏಷಿಯಾನೆಟ್ ಮೇಲಿನ ಶಿಸ್ತು ಕ್ರಮವನ್ನು ವಾಪಸ್ ತೆಗೆದುಕೊಂಡಿದೆ. ಇನ್ನು ಕೇರಳದ ಮತ್ತೊಂದು ಚಾನೆಲ್ ಮೀಡಿಯಾ ಒನ್ ಸಂಸ್ಥೆಯ ನಿರ್ಬಂಧವನ್ನು ಬೆಳಗ್ಗೆ 9.30ಕ್ಕೆ ವಾಪಸ್ ತೆಗೆದುಕೊಳ್ಳಲಾಗಿದೆ. ಇದಕ್ಕೆ ಮಾಧ್ಯಮ ಸಂಸ್ಥೆಗಳು ಸಲ್ಲಿಸಿದ್ದ ಮನವಿಯೂ ಕಾರಣ ಎಂದು ರಾಷ್ಟ್ರೀಯ ಮಾಧ್ಯಮಗಳು ತಿಳಿಸಿವೆ. ಇದೀಗ ಕೇರಳ ಸೇರಿದಂತೆ ದೇಶದ ವಿವಿಧ ಕಡೆ ಮಾಧ್ಯಮ ಸ್ವಾತಂತ್ರ್ಯ ಹರಣದ ಬಗ್ಗೆ ಚರ್ಚೆಗಳು ಶುರುವಾಗಿದೆ.
ಕಳೆದ ತಿಂಗಳೂ ಫೆಬ್ರವರಿ 25ರಂದು ದೆಹಲಿಯಲ್ಲಿ ನಡೆದ ಘರ್ಷಣೆಯನ್ನು ವರದಿ ಮಾಡಿದ್ದ ಮಾಧ್ಯಮಗಳು ದೆಹಲಿ ಪೊಲೀಸರ ಕ್ರಮವನ್ನು ಕಂಡಿಸಿದ್ದವು. ಹಲ್ಲೆ, ರಕ್ತಪಾತ, ಫೈರಿಂಗ್ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ಷಮವನ್ನು ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದ್ದವು. ಫೆಬ್ರವರಿ 28ರಂದು ಮಾಧ್ಯಮ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ಕೊಟ್ಟಿದ್ದ ಇನ್ಫಾರ್ಮೇಷನ್ ಅಂಡ್ ಬ್ರಾಡ್ಕಾಸ್ಟಿಂಗ್ ಸಚಿವಾಲಯ 1995ರ ಪ್ರಸಾರ ಮಾಧ್ಯಮ ಪ್ರಸಾರ ಕಾಯ್ದೆ ಉಲ್ಲಂಘಟನೆಯಾಗಿದೆ. ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನೆ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ಮಾಧ್ಯಮ ಸಂಸ್ಥೆಗಳು ನಾವು ಯಾವುದೇ ಉತ್ಪ್ರೇಕೆ ಮಾಡಿ ವರದಿ ಮಾಡಿಲ್ಲ. ಸ್ಥಳದಲ್ಲಿ ಕಂಡಿದ್ದನ್ನು ನಮ್ಮ ವರದಿಗಾರರ ಕೊಟ್ಟಿದ್ದನ್ನು ಮಾತ್ರವೇ ಪ್ರಸಾರ ಮಾಡಿದ್ದೇವೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ವಾದಿಸಿದ್ದರು. ಆದರೂ 48 ಗಂಟೆಗಳ ಕಾಲ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿತ್ತು. ಯಾವುದೇ ವೇದಿಕೆಯಲ್ಲೂ ಪ್ರಸಾರ ಆಗದಂತೆ ಸೂಚನೆ ಕಳುಹಿಸಿತ್ತು. ಆ ಬಳಿಕ ಆಕ್ರೋಶ ಜೊತೆಗೆ ಮಾಧಯಮ ಸಂಸ್ಥೆಗಳ ಮನವಿ ಮೇರೆಗೆ ನಿರ್ಬಂಧ ವಾಪಸ್ ಪಡೆಯಲಾಗಿದೆ ಎನ್ನಲಾಗಿದೆ.
ದೆಹಲಿ ಗಲಭೆಗೆ ಇಲ್ಲೀವರೆಗೂ 53 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜಿಟಿಬಿ ಆಸ್ಪತ್ರೆಯಲ್ಲಿ 44 ಮಂದಿ, ರಾಮ್ಮನೋಹರ್ಲೋಹಿಯಾ ಆಸ್ಪತ್ರೆಯಲ್ಲಿ 5 ಮಂದಿ, ಲೋಕ್ನಾಯಕ್ ಆಸ್ಪತ್ರೆಯಲ್ಲಿ ಮೂವರು ಹಾಗೂ ಜಗ್ಪ್ರವೇಶ್ಚಂದ್ರ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಗಲಭೆಗೆ ಕಾರಣರಾದ ಹಾಗು ಗಲಭೆ ಸೃಷ್ಟಿಸಲು ನೆರವಾದವರ ಪತ್ತೆಗೆ ಪೊಲೀಸ್ ಇಲಾಖೆ ಜಾಲ ಬೀಸಿದೆ.