ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಮೋದಿ-ಶಾ ಜತೆ ‘ಕೈ’ ಕುಲುಕುತ್ತಿರುವ ಸಿಂಧಿಯಾ!

ಡಿಜಿಟಲ್ ಕನ್ನಡ ಟೀಮ್:

ಮಧ್ಯ ಪ್ರದೇಶ ಕಾಂಗ್ರೆಸ್ ನಲ್ಲಿನ ಬಂಡಾಯ ಈಗ ಸ್ಫೋಟಗೊಂಡಿದೆ. ತಮಗೆ ಸೂಕ್ತ ಸ್ಥಾನಮಾನ ಸಿಗದ ಕಾರಣಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಈಗ ಪಕ್ಷದ ವಿರುದ್ಧ ಸಿಡಿದಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾತನಾಡಿರುವ ಸಿಂಧಿಯಾ ಅಲ್ಲಿಂದ ಗೃಹ ಸಚಿವ ಅಮಿತ್ ಶಾ ಜತೆ ಅವರ ನಿವಾಸಕ್ಕೆ ತೆರಳಿದ್ದಾರೆ. ಇದು ಸಿಂಧಿಯಾ ಕಮಲ ಹಿಡಿಯುವ ಸೂಚನೆ ಕೊಟ್ಟಿದ್ದಾರೆ.

ಇತ್ತ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಅಹಮದ್ ಪಟೇಲ್ ಸೇರಿದಂತೆ ಪ್ರಮುಖ ನಾಯಕರ ಜತೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಇನ್ನು ಸಿಂಧಿಯಾ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರ ಹೀಗಿದೆ…

ಈಗಾಗಲೇ 17 ಬಂಡಾಯ ಶಾಸಕರು ಬೆಂಗಳೂರಿಗೆ ಬಂದಿಳಿದಿದ್ದು, ಇವರು ರಾಜೀನಾಮೆ ಅಂಗೀಕಾರವಾದರೆ ಕರ್ನಾಟಕ ಮಾದರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಸದ್ಯ 230 ಸದಸ್ಯರ ಬಲದ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 107, ಇತರೆ 07 ಹಾಗೂ 2 ಸ್ಥಾನ ಖಾಲಿ ಇದೆ. ಸದ್ಯ ಬಹುಮತಕ್ಕೆ 115 ಅಗತ್ಯವಿದೆ. ಒಂದು ವೇಳೆ 17 ಶಾಸಕರು ರಾಜೀನಾಮೆ ಪೂರ್ಣಗೊಂಡರೆ ಬಹುಮತ ಸಂಖ್ಯೆ 106ಕ್ಕೆ ಕುಸಿಯಲಿದೆ. ಆಗ 107 ಸ್ಥಾನ ಪಡೆದಿರುವ ಬಿಜೆಪಿ ಸರ್ಕಾರ ರಚಿಸಬಹುದಾಗಿದೆ.

ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗಲೇ ಸಿಂಧಿಯಾ ಸಿಎಂ ಆಕಾಂಕ್ಷಿಯಾಗಿದ್ದರು. ಆದರೆ ಹಿರಿತನಕ್ಕೆ ಮಣೆ ಹಾಕಿ ಕಾಂಗ್ರೆಸ್ ಹೈಕಮಾಂಡ್ ಸಿಂಧಿಯಾರನ್ನು ಪಕ್ಕಕ್ಕೆ ತಳ್ಳಿತು. ಆಗಿನಿಂದಲೂ ಮಧ್ಯ ಪ್ರದೇಶ ಕಾಂಗ್ರೆಸ್ ನಲ್ಲಿ ಆಗಾಗ್ಗೆ ಭಿನ್ನಮತ ಕಾಣಿಸಿಕೊಳ್ಳುತ್ತಲೇ ಇತ್ತು ಕಳೆದ ತಿಂಗಳು ಕೂಡ ಈ ಬಿರುಕಿಗೆ ತೇಪೆ ಹಚ್ಚಲು ಹೈ ಕಮಾಂಡ್ ಪ್ರಯತ್ನಿಸಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಶಾಕ್ ಕೊಟ್ಟಿರುವ ಸಿಂಧಿಯಾ ಈಗ ಬಿಜೆಪಿ ನಾಯಕರ ಜತೆ ಕೈ ಮಿಲಾಯಿಸಿ ಕಾಂಗ್ರೆಸ್ ಸರ್ಕಾರ ಅಲ್ಲಾಡಿಸುತ್ತಿದ್ದಾರೆ.

ಇಷ್ಟು ದಿನಗಳ ಕಾಲ ಅಸಮಾಧಾನಕ್ಕೆ ಪರಿಹಾರ ಹುದುಕದೇ ನಿರ್ಲಕ್ಷ್ಯ ತೋರಿದ್ದ ಕಾಂಗ್ರೆಸ್ ಈಗ ಕೈ ಹಿಸಿಕಿಕೊಂಡು ಸಭೆ ನಡೆಸಲು ಮುಂದಾಗಿದೆ. ಒಟ್ಟಿನಲ್ಲಿ ದಿನೇ ದಿನೇ ತನ್ನ ನೆಲೆ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರದೇಶದಲ್ಲಿ ಸಿಕ್ಕ ಅಧಿಕಾರವನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗದಿರುವುದು ಪಕ್ಷದಲ್ಲಿನ ದೌರ್ಬಲ್ಯವನ್ನು ಬಹಿರಂಗಪಡಿಸಿದೆ. ಹೀಗಾಗಿ ಈ ಬೆಳವಣಿಗೆಯನ್ನು ಆಪರೇಷನ್ ಕಮಲ ಅನ್ನೋದಕ್ಕಿಂತ

Leave a Reply