ಭಾರತಕ್ಕೆ ವರವಾಯ್ತು ರಷ್ಯಾ-ಸೌದಿ ನಡುವಣ ತೈಲ ಸಮರ!

ಡಿಜಿಟಲ್ ಕನ್ನಡ ಟೀಮ್:

ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತು ಸದ್ಯ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಸಾಬೀತಾಗಿದೆ. ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಣ ತೈಲ ದರ ಸಮರದ ಪರಿಣಾಮ ಕಳೆದ ಒಂದು ವಾರದಿಂದ ಬೆಲೆ ಕುಸಿಯುತ್ತಿದೆ. ಹೀಗಾಗಿ ಮುಂದಿನ ವಾರದಲ್ಲಿ ತೈಲ ಬೆಲೆಯಲ್ಲಿ ಗಣನೀಯ ಇಳಿಕೆಯಾಗುವ ನಿರೀಕ್ಷೆ ಇದೆ.

ಸದ್ಯ ಇಂದು ಪರಿಷ್ಕೃತ ದರದ ಪ್ರಕಾರ ಪೆಟ್ರೋಲ್ ಬೆಲೆ 2.69 ರೂ. ಹಾಗೂ ಡೀಸೆಲ್ ಬೆಲೆ 2.33 ರೂ. ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 60 ರೂ. ಒಳಗೆ ಬರಲಿದೆಯೇ ಎಂಬ ನಿರೀಕ್ಷೆ ಹುಟ್ಟು ಹಾಕಿದೆ.

ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಉದ್ದಿಮೆಗಳಿಗೆ ಇದು ಟಾನಿಕ್ ಆಗಿ ಪರಿಣಮಿಸುವ ನಿರೀಕ್ಷೆ ಇದ್ದು, ಆರ್ಥಿಕ ಚೇತರಿಕೆಗೆ ಸಹಕಾರಿಯಾಗುವ ಭರವಸೆ ಇದೆ.

ಇನ್ನು ರಷ್ಯಾ ಮತ್ತು ಸೌದಿ ನಡುವೆ ತಿಕ್ಕಾಟ ಯಾಕೆ ಎಂದು ನೋಡುವುದಾದರೆ, ಕೊರೋನಾ ವೈರಸ್ ರೋಗದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ತಗ್ಗಿತ್ತು. ಇದನ್ನು ಎದುರಿಸಲು ರಷ್ಯಾ ದೇಶ ತನ್ನ ತೈಲ ಉತ್ಪಾದನೆಯನ್ನು ತಗ್ಗಿಸುವಂತೆ ಒಪೆಕ್ ರಾಷ್ಟ್ರಗಳು ಮನವಿ ಮಾಡಿಕೊಂಡಿದ್ದವು. ಆದರೆ, ರಷ್ಯಾ ಇದಕ್ಕೆ ಒಪ್ಪಿರಲಿಲ್ಲ. ಸೌದಿ ಅರೇಬಿಯಾ ಮತ್ತು ರಷ್ಯಾ ನಡುವಿನ ಮಾತುಕತೆ ವಿಫಲವಾದ ಪರಿಣಾಮ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇದರಿಂದ ಶೇ.82 ರಷ್ಟು ಇಂಧನ ಆಮದು ಮಾಡಿಕೊಳ್ಳುವ ಭಾರತಕ್ಕೆ ಲಾಭವಾಗಿದೆ.

Leave a Reply