ಪ್ಯಾನ್ ಕಾರ್ಡ್- ಆಧಾರ್ ಲಿಂಕ್ ಮಾಡಲು ಮಾ.31 ಕೊನೆ ದಿನ! ಮಾಡದಿದ್ದರೆ ಭಾರಿ ತೊಂದರೆ!

ಡಿಜಿಟಲ್ ಕನ್ನಡ ಟೀಮ್:

ನೀವು ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿದ್ದೀರಾ? ಮಾಡಿಲ್ಲವಾದ್ರೆ ಈ ಕೂಡಲೇ ಮಾಡಿ. ಇಲ್ಲದಿದ್ರೆ ನಿಮಗೆ ಬೀಳುತ್ತೆ ಭಾರಿ ದಂಡ. ಜತೆಗೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತೆ.

ಹೌದು, ಇತ್ತೀಚೆಗೆ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ‘ನಿಗದಿ ಮಾಡಿರುವ ದಿನಾಂಕ ಒಳಗಾಗಿ ಪ್ಯಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಜೋಡಿಸದಿದ್ದರೆ ಆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳಿರುವುದಾಗಿ ಫೈನಾಶಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಹೀಗಾಗಿ 2020ರ ಮಾರ್ಚ್ 31ಕ್ಕೆ ಪ್ಯಾನ್ ಮತ್ತು ಆಧಾರ್ ಜೋಡಣೆಗೆ ಕೊನೆ ದಿನವಾಗಿದ್ದು ನಿಮ್ಮ ಪ್ಯಾನ್ ಕಾರ್ಡ್ ಗೆ ನಿಮ್ಮ ಆಧಾರ್ ಜೋಡಿಸಿ. ಒಂದು ವೇಳೆ ಜೋಡಿಸದಿದ್ದರೆ ಆಗುವ ಪರಿಣಾಮ ಹೀಗಿವೆ…

  • ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಪ್ರಕಾರ 10 ಸಾವಿರ ರೂ. ದಂಡ.
  • ಜೋಡಣೆ ಮಾಡದ ವ್ಯಕ್ತಿ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ.
  • ಆ ವ್ಯಕ್ತಿ ಯಾವುದೇ ಆಸ್ತಿ ಮಾರಲು ಅಥವಾ ಕೊಳ್ಳಲು ಸಾಧ್ಯವಿಲ್ಲ.
  • ನಿಷ್ಕ್ರಿಯ ಪ್ಯಾನ್ ಕಾರ್ಡ, ಪ್ಯಾನ್ ಕಾರ್ಡ್ ಹೊಂದಿಲ್ಲದಿರುವುದಕ್ಕೆ ಸಮ.
  • ಅತಿಯಾದ ಟಿಡಿಎಸ್ ಬೀಳುತ್ತದೆ.

ಅಂದಹಾಗೆ ಕಳೆದ ವರ್ಷ ಮಾರ್ಚ್31ಕ್ಕೆ ಜೋಡಣೆಗೆ ಕಡೇ ದಿನವಾಗಿತ್ತು, ಆದರೆ ಕಾರಣಾಂತರಗಳಿಂದ ಮೊದಲು ಕಳೆದ ವರ್ಷ ಸೆ.31ಕ್ಕೆ ಆನಂತರ ಡಿ.31ಕ್ಕೆ ಮುಂದೂಡಲಾಗಿತ್ತು. ಈ ಬಾರಿಯೂ ಮುಂದೂಡಬಹುದು ಎಂದು ಯಾಮಾರದೆ ನಿಮ್ಮ ಪ್ಯಾನ್ ಹಾಗೂ ಆಧಾರ್ ಜೋಡಿಸಿಕೊಳ್ಳಿ. ಮುಂದೆ ಎದುರಾಗಬಹುದಾದ ಸಮಸ್ಯೆಯಿಂದ ತಪ್ಪಿಸಿಕೊಳ್ಳಿ.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಇಲ್ಲಿ ಒತ್ತಿ…

Leave a Reply