ಭಾರತದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಕನ್ಫರ್ಮ್! ಕರ್ನಾಟಕಕ್ಕೂ ಲಿಂಕ್?

ಡಿಜಿಟಲ್ ಕನ್ನಡ ಟೀಮ್:

ಪ್ರಪಂಚದಾದ್ಯಂತ ಅಬ್ಬರಿಸಿಕೊಂಡು ಸಾವನ್ನೇ ಸ್ವಾಹ ಮಾಡಿಕೊಂಡು ಮುನ್ನುಗ್ಗುತ್ತಿರುವ ಕೊರೊನಾ ವೈರಸ್‌ಗೆ ಭಾರತದಲ್ಲಿ ಇಬ್ಬರು ಬಲಿಯಾಗಿದ್ದಾರೆ. ದೆಹಲಿಯಲ್ಲಿ 68 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ನಡುವೆ ಮತ್ತೊಂದು ಪ್ರಕರಣದಲ್ಲೂ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಈ ಪ್ರಕರಣಕ್ಕೂ ಕರ್ನಾಟಕಕ್ಕೂ ಹನಿಮೂನ್ ಲಿಂಕ್ ಇದೆ.

ಮುಂಬೈ ಮೂಲದ 26 ವರ್ಷದ ಯುವಕ ಗ್ರೀಸ್‌ಗೆ ತೆರಳಿದ್ದರು. ಈ ಯುವಕ ಮಾರ್ಚ್ 6 ರಂದು ಮುಂಬೈಗೆ ಬಂದಿದ್ದರು. ಮುಂಬೈ ನಿಂದ ಮಾರ್ಚ್ 8 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ‌ ಪ್ರಯಾಣ ಮಾಡಿದ್ದರು. ಮಾರ್ಚ್ 9 ರಂದು ಕಚೇರಿಗೆ ತೆರಳಿ ಸ್ನೇಹಿತರ ಜೊತೆ ಕೆಲಸ ಮಾಡಿ ವಾಪಸ್ ಆದ ಬಳಿಕ ಆರೋಗ್ಯದಲ್ಲಿ ಏರುಪೇರಾದ ಕಾರಣ ಸ್ವಯಂ ತಾನೇ ಬಂದು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆ ಯುವಕನ ಪತ್ನಿಗೂ ಕೊರೊನಾ ಅಟ್ಯಾಕ್ ಆಗಿದೆ.

ಬೆಂಗಳೂರಿನಲ್ಲಿ ಸಹೋದರನ ಜೊತೆ ವಾಸವಿದ್ದ ಯುವಕ, ಇತ್ತೀಚಿಗೆ ಮದುವೆಯಾಗಿದ್ದ. ಹನಿಮೂನ್‌ಗಾಗಿ ಗ್ರೀಸ್‌ಗೆ ತೆರಳಿದ್ದ ಈ ಯುವ ಜೋಡಿ ಮಾರ್ಚ್ 6 ರಂದು ವಾಪಸ್‌ ಆಗಿತ್ತು. ಆ ಬಳಿಕ ಆತ ಬೆಂಗಳೂರಿಗೆ ಬಂದಿದ್ದ, ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು. ಅವರ ಪತ್ನಿ ಆಗ್ರಾಕ್ಕೆ ಹೋಗಿದ್ದರು. ಗಂಡನಿಗೆ ಕೊರೊನಾ ಪತ್ತೆಯಾದ ಬಳಿಕ ಅವರನ್ನು ನಿಗಾ ವಹಿಸಲಾಗಿತ್ತು. ಇದೀಗ ರಕ್ತಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ.

ಗ್ರೀಸ್‌ ಪ್ರವಾಸ ಮುಗಿಸಿ ಬಂದಿದ್ದ ಯುವಕನ ತಂದೆ, ತಾಯಿ ಮುಂಬೈನಲ್ಲಿ ‌ಉಳಿದಿದ್ದರೆ, ಪತ್ನಿ ಆಗ್ರಾಗೆ ತೆರಳಿದ್ದರು. ಆದರೆ ಯುವಕನಿಗೆ ಕೊರೊನಾ ವೈರಸ್ ಇರುವುದು ಖಚಿತವಾಗುತ್ತಿದ್ದಂತೆ ಕಾರ್ಯೋನ್ಮುಖರಾದ ಬೆಂಗಳೂರು ಅಧಿಕಾರಿಗಳು, ಬೆಂಗಳೂರಿಗೆ ಬಂದಿಳಿದಾಗ ಭೇಟಿ ಮಾಡಿದ್ದ ಆಟೋ ಡ್ರೈವರ್ ಸೇರಿದಂತೆ 17 ಜನರನ್ನು ಪತ್ತೆ ಮಾಡಿದ್ದರು. ಆಟೋ ಡ್ರೈವರ್ ಮನೆಯಲ್ಲಿ ಮೂವರು ಹಾಗೂ ಯುವಕನ ಫಸ್ಟ್ ಕಾಂಟೆಕ್ಟ್‌ನಲ್ಲಿದ್ದ 10 ಜನ, ಸೆಕೆಂಡರಿ ಕಾಂಟಾಕ್ಟ್‌ನಲ್ಲಿದ್ದ 7 ಜನರ ಗುರುತು ಮಾಡಲಾಗಿತ್ತು. ಡಲ್ಲರ ಮೇಲೂ ನಿಗಾ ಇರಿಸಲಾಗಿತ್ತು.

ಗ್ರೀಸ್​​ನಲ್ಲಿ ಹನಿಮೂನ್​ ಮುಗಿಸಿ ವಾಪಸ್ ಆಗಿದ್ದ ಟೆಕ್ಕಿಗೆ ಕೊರೊನಾ ವೈರಸ್ ಕನ್ಫರ್ಮ್ ಆಗಿ ರಾಜೀವ್​ಗಾಂಧಿ ಆಸ್ಪತ್ರೆಯಲ್ಲಿ ದಾಖಲಾದ ಬಳಿಕ ಮಾಹಿತಿ ರವಾನಿಸಲಾಗಿತ್ತು. ತನ್ನ ಪೋಷಕರ ಜೊತೆ ಆಗ್ರಾದಲ್ಲಿರುವ ಪತ್ನಿಗೂ ಈ ಬಗ್ಗೆ ಮಾಹಿತಿ ಕೊಡಲಾಗಿತ್ತು. ದೆಹಲಿಗೆ ಹೋಗಿ ಅಲ್ಲಿಂದ ಅಗ್ರಾಕ್ಕೆ ವಿಮಾನದಲ್ಲಿ ಹೋಗಿದ್ದ ಯುವತಿ, 8 ಜನರ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದರು. ಮಾಹಿತಿ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಗೆ ಬಂದಾಗ ವಿರೋಧ ವ್ಯಕ್ತವಾಗಿತ್ತು. ಐಸೊಲೇಷನ್​ ವಾರ್ಡ್​ಗೆ ಸೇರಲು ನಿರಾಕರಿಸಿದ್ದ ಯುವತಿ. ಆ ಬಳಿಕ ಆಗ್ರಾ ಡಿಸಿ ಆದೇಶದಂತೆ ಕುಟುಂಬಸ್ಥರ ಸಮೇತ ಕೊರೊನಾ ವಾರ್ಡ್​​ಗೆ ಶಿಫ್ಟ್​ ಮಾಡಲಾಗಿತ್ತು. ಇದೀಗ ಪರೀಕ್ಷೆಯಲ್ಲಿ ಕೊರೊನಾ ವೈರಸ್​ ಇರುವುದು ದೃಢವಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಒಟ್ಟಾರೆ ಭಾರತದಲ್ಲಿ 83 ಜನರಿಗೆ ಸೋಂಕು ಇದೆ ಎನ್ನುವುದು ಖಚಿತಚಾಗಿದೆ.

Leave a Reply