ಕೊರೋನಾ, ಹಕ್ಕಿ ಜ್ವರ, ಮಂಗ ಕಾಯಿಲೆ; ತುರ್ತು ಸಂಪುಟ ಸಭೆ ಕರೆದ ಸಿಎಂ

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಸೋಂಕು ಜತೆಗೆ ಹಕ್ಕಿ ಜ್ವರ ಹಾಗೂ ಮಂಗ ಕಾಯಿಲೆ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತುರ್ತು ಸಚಿವ ಸಂಪುಟ ಕರೆಯಲಾಗಿದೆ ಎಂದಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ರಾಜ್ಯದಲ್ಲಿ ಮೂರು ಕಾಯಿಲೆಗಳ ಆತಂಕ ಎದುರಾಗಿದೆ. ಈ ಹಂತದಲ್ಲಿ ಅದರಲ್ಲೂ ಕರೋನಾ ಸೋಂಕು ನಿಯಂತ್ರಿಸದಿದ್ದರೆ ನಾವು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ತುರ್ತು ಸಚಿವ ಸಂಪುಟ ಸಭೆ ಕರೆಯಲಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಮತ್ತಷ್ಟು ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗುವ ಸಾಧ್ಯತೆ ಇದ್ದು, ಮತ್ತಷ್ಟು ದಿನ ಬಂದ್ ಮುಂದುವರಿಕೆ ಸಾಧ್ಯತೆ ಇದೆ. ಈ ಬಗ್ಗೆ ಇಂದು ಚರ್ಚೆ ನಡೆಯಲಿದೆ.

ಮತ್ತೆ 1 ವಾರ ಕರ್ನಾಟಕ ಬಂದ್ ಮಾದುವುದರ ಜತೆಗೆ ಈ ಬಾರಿ
ಸರ್ಕಾರಿ ಕಚೇರಿಗಳಿಗೂ 1 ವಾರ ರಜೆ ಕೊಡುವ ಬಗ್ಗೆ ಚರ್ಚೆ
ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇನ್ನು ರಾಜ್ಯದ ಜನರಿಗೆ 1 ತಿಂಗಳ ಹೆಚ್ಚುವರಿ ಪಡಿತರ ನೀಡೋ ಬಗ್ಗೆ ಚಿಂತನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬಡವರಿಗೆ ಊಟಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸುವುದು ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚೆ.

ಇನ್ನು ಈ ಬಾರಿಯ ಬಜೆಟ್ ಅಧಿವೇಶನ ಅರ್ಧಕ್ಕೆ ಮೊಟಕುಗೊಳಿಸುವ ಸಾಧ್ಯತೆ ಇದ್ದು,
ಶುಕ್ರವಾರವೇ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ಚರ್ಚಿಸಲಾಗುವುದು. ಹೀಗಾಗಿ
ಶುಕ್ರವಾರದೊಳಗೆ ಬಾಕಿ ಇರೋ ಮಸೂದೆ ಅನುಮೋದನೆ ನೀಡುವ ಸಾಧ್ಯತೆ ಇದೆ.

Leave a Reply