ಯೋಧನಿಗೂ ಸೋಂಕು! ಅಧಿಕಾರಿಗಳಿಂದ ಅಗತ್ಯ ಕ್ರಮ

ಡಿಜಿಟಲ್ ಕನ್ನಡ ಟೀಮ್:

ಕೊರೊನಾ ಮಹಾಮಾರಿ ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ. ಬರೋಬ್ಬರಿ 14 ಜನರಿಗೆ ಕೊರೊನಾ ಕನ್ಫರ್ಮ್‌ ಆಗಿದೆ ಎನ್ನುವ ವಿಚಾರ ಆತಂಕ ಮೂಡಿಸುತ್ತಿದೆ. ಭಾರತದಲ್ಲಿ 154 ಜನರಲ್ಲಿ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ಭಾರತದ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇದು ಸಣ್ಣ ಸಂಖ್ಯೆ ಆದರೂ ಭಾರತ ಬೆಚ್ಚಿ ಬೀಳುವ ಅಂಶ ಹೊರಬಿದ್ದಿದೆ. ಭಾರತ ಸೇನೆಯಲ್ಲಿ ಕೆಲಸ ಮಾಡುವ ಯೋಧನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಯೋಧನ ಜೊತೆಗೆ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಸೇರಿದಂತೆ ಎಲ್ಲರನ್ನು ಗೃಹ ಬಂಧನಕ್ಕೆ ಕಳುಹಿಸಲಾಗಿದೆ.

ಯೋಧನ ಜೋತೆ ನೇರವಾಗಿ ಸಂಪರ್ಕದಲ್ಲಿದ್ದ ಹಾಗೂ ಪರೋಕ್ಷವಾಗಿ ಸಂಬಂಧ ಹೊಂದಿದ್ದ 800 ಜನ ಯೋಧನರನ್ನು ಐಸೋಲೇಟ್‌ ಮಾಡಲಾಗಿದೆ. ಒಂದು ವೇಳೆ ಹೊರ ಪ್ರಪಂಚದಲ್ಲಿ ಕೊರೊನಾ ಹಬ್ಬುತ್ತಿರುವಂತೆ ಯೋಧರಲ್ಲೂ ಹರಡುತ್ತಾ ಸಾಗಿದರೆ, ದೇಶ ಮತ್ತೊಂದು ಪರೋಕ್ಷ ಯುದ್ಧಕ್ಕೆ ಸಿದ್ಧತೆ ನಡೆಸಿದಂತೆಯೇ ಸರಿ. ಇದೀಗ ಭಾರತದಲ್ಲಿ 154 ಜನ ಸೋಂಕಿನಿಂದ ಬಳಲುತ್ತಿದ್ದಾರೆ. ಅದರಲ್ಲಿ ಬಹುತೇಕ ಮಂದಿ ವಿದೇಶದಿಂದ ಬಂದವರು ಎನ್ನುವುದು ಸಮಧಾನದ ವಿಚಾರ. ಆದರೆ, ಆ ವಿದೆಶದಿಂದ ಬಂದವರು ಎಷ್ಟು ಜನರ ಜೊತೆ ಸಂಪರ್ಕ ಮಾಡಿರುತ್ತಾರೆ ಎನ್ನುವ ಚಿತ್ರಣ ಸ್ಪಷ್ಟವಾಗದಿದ್ದರೆ, ದೊಡ್ಡ ಸಮಸ್ಯೆ ಎದುರಾಗುವುದು ಬಹುತೇಕ ನಿಶ್ಚಿತ.

ಈಗಾಗಲೇ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ. 10 ಜನರಿಗಿಂತ ಹೆಚ್ಚಿನ ಮಂದಿ ಒಂದು ಕಡೆ ಗುಂಪು ಗೂಡುವಂತಿಲ್ಲ ಎಂದು ಆದೇಶ ಮಾಡಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಇರಬಾರದು ಎಂದು ಸೂಚನೆ ಕೊಟ್ಟು ಮನೆಗೆ ಕಳುಹಿಸಿದೆ. ಭಾರತ ಇನ್ನೂ ಕೂಡ ಆ ಮಟ್ಟದ ಮುಂಜಾಗ್ರತೆ ವಹಿಸಿದ ಯಾವುದೇ ಲಕ್ಷಗಳು ಕಾಣಿಸುತ್ತಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸೇನೆಗೂ ಕೊರಿನಾ ಸೋಂಕು ಹಬ್ಬಿರುವುದು, ವೈದ್ಯರಿಗೂ ಕೊರೊನಾ ವೈರಸ್‌ ದಾಳಿ ಮಾಡುತ್ತಿರುವುದು ದೇಶದ ಆತಂಕ ಹೆಚ್ಚುವಂತೆ ಮಾಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಯಾವೆಲ್ಲಾ ಕಠಿಣ ಕ್ರಮಗಳ ಘೋಷಣೆ ಮಾಡ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

Leave a Reply