ನಾಳೆ ಬೆಳಗ್ಗೆ 5.30ಕ್ಕೆ ನಿರ್ಭಯ ಕೀಚಕರನ್ನು ಗಲ್ಲಿಗೇರಿಸಲು ಮುಹೂರ್ತ!

ಡಿಜಿಟಲ್ ಕನ್ನಡ ಟೀಮ್:

ಕಾನೂನಿನಲ್ಲಿರುವ ಎಲ್ಲ ಅವಕಾಶಗಳನ್ನು ಪ್ರಯೋಗಿಸಿದ್ದ ನಿರ್ಭಯ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ನಾಳೆ ಬೆಳಗ್ಗೆ 5.30ಕ್ಕೆ ಸಮಯ ನಿಗದಿ ಪಡಿಸಲಾಗಿದೆ.

ಜನವರಿ ತಿಂಗಳಲ್ಲಿ ಗಲ್ಲಿಗೇರಬೇಕಿದ್ದ ಈ ಕೀಚಕರು ಸುಪ್ರೀಂ ಕೋರ್ಟ್ ನಲ್ಲಿ ಶಿಕ್ಷೆ ಪುನರ್ ಪರಿಶೀಲನೆ ಅರ್ಜಿಯಿಂದ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿವರೆಗೆ ಕಾನೂನಿನಲ್ಲಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಗಲ್ಲು ಶಿಕ್ಷೆಯಿಂದ ಪಾರಾಗಲು ಪ್ರಯತ್ನಿಸಿದ್ದರು. ಪರಿಣಾಮ ಸುಮಾರು ಎರಡು ತಿಂಗಳ ಕಾಲ ಈ ಕ್ರಿಮಿಗಳು ಜೀವದಾನ ಪಡೆದಿದ್ದವು. ಈಗ ಎಲ್ಲ ಪ್ರಯತ್ನಗಳು ಮುಗಿದಿವೆ.

ಗಲ್ಲು ಶಿಕ್ಷೆಗೆ ತಡೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಇಂದು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಈ ಅರ್ಜಿ ತಿರಸ್ಕರಿಸಿದ್ದು, ನಾಳೆ ಗಲ್ಲು ಬಹುತೇಕ ಖಚಿತವಾಗಿದೆ.

Leave a Reply