ಕೊರೋನಾ ಸೋಂಕು ನಿರ್ಲಕ್ಷ; ಗಾಯಕಿ ವಿರುದ್ಧ ಎಫ್ಐಆರ್!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಸೋಂಕು ತಾಗುಳಿದ್ದರೂ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‍ಗೆ ಒಳಗಾಗದೆ ಅಸಹಕಾರ ತೋರಿ ವೈರಸ್‍ ಕುರಿತು ನಿರ್ಲಕ್ಷ್ಯ ವಹಿಸಿ, ಮತ್ತೊಬ್ಬರಿಗೆ ಹರಡಿದ ಕಾರಣಕ್ಕಾಗಿ ಬಾಲಿವುಡ್‍ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಉತ್ತರಪ್ರದೇಶ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಲಕ್ನೋ ಮುಖ್ಯ ವೈದ್ಯಕೀಯ ಅಧಿಕಾರಿಯ ದೂರಿನ ಮೇರೆಗೆ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ಸ್ 269 (ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕೃತ್ಯ), 270 (ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಮಾರಕ ಕೃತ್ಯ), 188 ಸಾರ್ವಜನಿಕ ಸೇವಕರಿಂದ ನಿರ್ಲಕ್ಷ್ಯ) ಸೇರಿದಂತೆ ವಿವಿಧ ಕಾಯಿದೆ ಅಡಿಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗಾಯಕಿ ಕನಿಕಾ ಕಪೂರ್ ವಿದೇಶದಲ್ಲಿ ನೆಲೆಸಿದ್ದು, ವೈಯಕ್ತಿಕ ಕೆಲಸಗಕ್ಕಾಗಿ ಲಕ್ನೋಗೆ ಆಗಮಿಸಿದ್ದರು. ಬಂದ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಅವರನ್ನು ಸ್ಕ್ರೀನಿಂಗ್ ಮಾಡಲು ಮುಂದಾದಾಗ ಕನ್ನಿಕಾ ಕಪೂರ್ ಅದನ್ನು ನಿರಾಕರಿಸಿ ಹೊರ ನಡೆದಿದದ್ದರು. ಈ ಮಧ್ಯೆ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ ತಾವು ಪಾರ್ತಿಯೊಂದರಲ್ಲಿ ಈ ಗಾಯಕಿಯನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ.

ಇನ್ನು ಈ ಗಾಯಕಿಯನ್ನು ಭೇಟಿ ಮಾಡಿದ ಬಿಜೆಪಿ ನಾಯಕ ದುಷ್ಯಂತ್ ಸಿಂಗ್ ಜತೆ ರಾಷ್ಟ್ರಪತಿಗಳು ಮಾರ್ಚ್ 18ರಂದು ಸಭೆ ನಡೆಸಿದ್ದ ಹಿನ್ನೆಲೆಯಲ್ಲಿ ಈಗ ರಾಷ್ಟ್ರಪತಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು ಎಂಬ ವರದಿಗಳು ಬಂದಿವೆ.

Leave a Reply