ಕೊರೋನಾ ಭಯ: ಒಲಿಂಪಿಕ್ಸ್ ನಿಂದ ಹಿಂದೆ ಸರಿದ ಕೆನಡಾ

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕೆನಡಾ ಹಿಂದೆ ಸರಿದಿದೆ. ಇದರೊಂದಿಗೆ ಕ್ರೀಡಾಕೂಟದಿಂದ ಮೊದಲ ದೇಶ ಹೊರಗುಳಿದಂತಾಗಿದೆ.

ಕೊರೋನಾ ಸೋಂಕು ವಿಶ್ವದಾದ್ಯಂತ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ಜಗತ್ತು ಸಂಪೂರ್ಣ ಬಂದ್ ಆಗಿದೆ. ಈ ಮಧ್ಯೆ ಈ ವರ್ಷ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮೇಲೂ ಕೊರೋನಾ ಕಾರ್ಮೋಡ ಕವಿದಿದೆ.

ಈ ಕುರಿತು ಭಾನುವಾರ ಸಭೆ ನಡೆಸಿದ ಕೆನಡಾದ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಸಮಿತಿ ಕೆನಡಾ ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿರುವ ನಿರ್ಧಾರ ಪ್ರಕಟಿಸಿದೆ.

ಈಗಾಗಲೇ ಅಮೆರಿಕಾ, ಬ್ರಿಟನ್ ಸೇರಿದಂತೆ ಪ್ರಮುಖ ರಾಷ್ಟ್ರಗಳು ಕ್ರೀಡಾಕೂಟ ಮುಂದೂಡಲು ಅಗ್ರಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸದ್ಯ ಒಲಿಂಪಿಕ್ಸ್ ಕ್ರೀಡಾಕೂಟ ನಿಗದಿತ ವೇಳೆಯಂತೆ ನಡೆಯುವುದು ಅನುಮಾನವಾಗಿದೆ

Leave a Reply