ದೇಶದ 75 ಜಿಲ್ಲೆಗಳು ಮಾರ್ಚ್​ 31ರ ತನಕ ಲಾಕ್​ಡೌನ್​!

ಡಿಜಿಟಲ್ ಕನ್ನಡ ಟೀಮ್:

ವಿಶ್ವದಲ್ಲಿ ಕೊರೊನಾ ಮಹಾಮಾರಿ ಅಬ್ಬರ ಜೋರಾಗಿದ್ದು, ಇಡೀ ವಿಶ್ವವೇ ಕೊರೊನಾ ಎದುರಿಸಲಾಗದೆ ಮಂಡಿಯೂರಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಇಡೀ ದೇಶದಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದರು. ಜನರೇ ಜನರಿಗಾಗಿ ಜನರಿಗೋಷ್ಕರ ಜನರೇ ಆಚರಣೆ ಆಚರಣೆ ಮಾಡುತ್ತಿರುವ ಈ ಸಮಯದಲ್ಲಿ ಮತ್ತೊಂದು ಭಯಾನಕ ಆದೇಶವೊಂದು ಹೊರ ಬಿದ್ದಿದೆ. ದೇಶದಲ್ಲಿ 75 ಜಿಲ್ಲೆಗಳನ್ನು ಲಾಕ್​ಡೌನ್​ ಮಾಡಿ ಕೇಂದ್ರ ಸರ್ಕಾರ ಆದೇಶ ಮಾಡಿದೆ.

ಮಾರ್ಚ್​ 31ರ ತನಕ ಈ 75 ಜಿಲ್ಲೆಗಳ ಜನ ತಮ್ಮ ಊರುಗಳಿಂದ ಬೇರೊಂದು ಸ್ಥಳಕ್ಕೆ ಹೋಗುವಂತಿಲ್ಲ. ಆ ಜಿಲ್ಲೆಗಳಿಗೂ ಬೇರೆ ಜಿಲ್ಲೆಗಳಿಂದ ಯಾವುದೇ ಕಾರಣಕ್ಕೂ ಬರುವಂತಿಲ್ಲ ಎಂದು ಆದೇಶ ಮಾಡಲಾಗಿದೆ. ಇಂದು ಭಾನುವಾರ ಇಡೀ ದೇಶ ಹೇಗೆ ಮನೆಯಲ್ಲೇ ಉಳಿದುಕೊಂಡು ಕರ್ಫ್ಯೂ ಮಾಡಿದ್ದಾರೋ ಅದೇ ಸ್ಥಿತಿ ಈ 75 ಜಿಲ್ಲೆಗಳಲ್ಲಿ ಈ ತಿಂಗಳಾಂತ್ಯದ ತನಕ ಮುಂದುವರಿಯಲಿದೆ.

ಮೊದಲು ಕೊರೊನಾ ಸೋಂಕು ಕಾಣೀಸಿಕೊಂಡಿದ್ದ ಕಲಬುರಗಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಬಳ್ಳಾಪುರ, ಮೈಸೂರು, ಧಾರವಾಡ, ಮತ್ತು ಬೆಳಗಾವಿ ಜಿಲ್ಲೆಗಳನ್ನು ಲಾಕ್​ಡೌನ್​ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ದ್ವಿಗುಣ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಅಂತಾರಾಜ್ಯ ಬಸ್​ ಸೇವೆಯನ್ನು ರದ್ದು ಮಾಡಲಾಗಿದೆ. ಅಂತರ ಜಿಲ್ಲಾ ಬಸ್​ ಸಂಚಾರವನ್ನೂ ರದ್ದು ಮಾಡಲಾಗಿದೆ. ನಾಳೆ ಸೋಮವಾರ ಮತ್ತೊಂದು ದಿನ ಎಲ್ಲಾ ಸಾರಿಗೆ ಸೌಕರ್ಯವನ್ನು ರದ್ದು ಮಾಡಲಾಗಿದೆ.

ಇನ್ನು ಮಾರ್ಚ್​ 31ರ ತನಕ ಎಸಿ ಬಸ್​ಗಳ ಸಂಚಾರವನ್ನು ತಡೆ ಹಿಡಿಯಲಾಗಿದೆ. ಕಿರಾಣಿ ಅಂಗಡಿಗಳನ್ನು ಹೊರತು ಪಡಿಸಿ ನಾಳೆ ಯಾವುದೇ ವ್ಯವಹಾರ ನಡೆಸಲು ಬಿಡುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶ ಮಾಡಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ದೇಶದಲ್ಲಿ ಯಾವುದೇ ರೈಲು ಸಂಚಾರ ಇರುವುದಿಲ್ಲ ಎಂದು ಆದೇಶ ಮಾಡಿದೆ. ಪ್ರಯಾಣಿಕರು ಸಂಚಾರ ಮಾಡುವ ರೈಲುಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಕೇವಲ ಸರಕು ಸಾಗಣೆ ವಾಹನಗಳ ಸಂಚಾರ ಮಾತ್ರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ ಮಾಡಲಾಗಿದೆ. ಇನ್ನುಳಿದಂತೆ ದೇಶದ ಎಲ್ಲಾ ನಗರಗಳ ಮೆಟ್ರೋ ರೈಲು ಸಂಚಾರವನ್ನೂ ನಿರ್ಬಂಧ ಮಾಡಿ ಕೇಂದ್ರ ಸರ್ಕಾರವೇ ಆದೇಶ ಹೊರಡಿಸಿದೆ.

ಇಂದು ಬಸ್​ ಸೇವೆ ಇರುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿರುವುದರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕೊರೊನಾ ಮಹಾಮಾರಿಯ ಭಯ ಆವರಿಸುವುದರಿಂದ ಅನಿವಾರ್ಯವಾಗಿದ್ದು, ವಿದ್ಯಾರ್ಥಿಗಳು ಅಗತ್ಯ ಸೌಕರ್ಯ ಮಾಡಿಕೊಳ್ಳಬೇಕಾಗಿದೆ.

Leave a Reply