ದೇಶಾದ್ಯಂತ 21 ದಿನ ಸಂಪೂರ್ಣ ಲಾಕ್ ಡೌನ್! ಯಾರೂ ಎಲ್ಲೂ ಹೋಗಬೇಡಿ: ಕೈಮುಗಿದು ಪ್ರಧಾನಿ ಮನವಿ

ಡಿಜಿಟಲ್ ಕನ್ನಡ ಟೀಮ್:

ಭಾರತವನ್ನು ಉಳಿಸಲು, ಭಾರತೀಯರನ್ನು ಉಳಿಸಲು, ನಿಮ್ಮನ್ನು ಉಳಿಸಲು ನಿಮ್ಮ ಕುಟುಂಬದವರನ್ನು ಉಳಿಸಲು ಇಂದು ರಾತ್ರಿ 12 ಗಂಟೆಯಿಂದ ದೇಶದ ಎಲ್ಲೆಡೆ 21 ದಿನಗಳ ಕಾಲ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಮುಂದಿನ 21 ದಿನಗಳು ಭಾರತದ ಪಾಲಿಗೆ ಮಹತ್ವದ ದಿನಗಳು. ಈ 21 ದಿನಗಳಲ್ಲಿ ನಾವು ಈ ಸಮಸ್ಯೆ ನಿವಾರಿಸದಿದ್ದರೆ, ಆಗುವ ನಷ್ಟ ಊಹಿಸಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ನೀವೆಲ್ಲರೂ ಒಂದೇ ಕೆಲಸ ಮಾಡಿ. ಅದೇನೆಂದರೆ ನಿಮ್ಮ ಮನೆಯಲ್ಲೇ ನೀವು ಇರಿ. ಹೊರಗೆ ಬರಬೇಡಿ. ಈ 21 ದಿನ ನಾವು ಸರಿಯಾಗಿ ನಿಭಾಯಿಸದಿದ್ದರೆ ದೇಶ 21 ವರ್ಷ ಹಿಂದಕ್ಕೆ ಹೋಗಲಿದೆ. ಹೀಗಾಗಿ ನಿಮ್ಮ ಮನೆ ಬಾಗಿಲ ಬಳಿ ಲಕ್ಷ್ಮಣ ರೇಖೆ ಎಳೆದುಕೊಳ್ಳಿ ಎಂದು ಮನವಿ ಮಾಡಿದರು.

Leave a Reply