ಕೊರೋನಾ ಎಫೆಕ್ಟ್: ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ವೈರಸ್ ಸೋಂಕು ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೋದಲ್ಲಿ ಈ ವರ್ಷ ನಡೆಯಬೇಕಿದ್ದ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹಾಗೂ ಜಪಾನ್ ಒಪ್ಪಿಗೆ ಸೂಚಿಸಿದೆ.

ಸೋಂಕು ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಆತಂಕಕ್ಕೆ ಸಿಲುಕಿದ್ದು ಬಹುತೇಕ ಎಲ್ಲ ರಾಷ್ಟ್ರಗಳು ದಿಗ್ಬಂಧನ ಪರಿಸ್ಥಿತಿಯಲ್ಲಿವೆ. ಈ ಕಾರಣದಿಂದ ನಿನ್ನೆಯಷ್ಟೇ ಕೆನಡಾ ಕ್ರೀಡಾಕೂಟದಿಂದ ಹಿಂದೆ ಸರಿದಿತ್ತು.

ಜಾಗತಿಕವಾಗಿ ಅಮೆರಿಕ, ಬ್ರಿಟನ್ ಸೇರಿದಂತೆ ಎಲ್ಲ ರಾಷ್ಟ್ರಗಳಿಂದ ನಿಗದಿ ಮಾಡಲಾಗಿದ್ದ ವೇಳಾಪಟ್ಟಿಯಂತೆ ಕ್ರೀಡಾಕೂಟ ಆಯೋಜಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ವ್ಯಾಪಕವಾಗಿ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಒಂದು ವರ್ಷ ಮುಂದೂಡಲು ನಿರ್ಧರಿಸಲಾಗಿದೆ.

Leave a Reply