ತ್ಯಾಗಕ್ಕೆ ಸಿದ್ಧರಾಗಿ! ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೋದಿ ಸೂಚನೆ!

ಡಿಜಿಟಲ್ ಕನ್ನಡ ಟೀಮ್:

ಇದೇ ತಿಂಗಳು 14ರ ನಂತರ ಭಾರತದಲ್ಲಿ ಲಾಕ್ ಡೌನ್ ಅಂತ್ಯವಾಗುತ್ತಾ ಅಥವಾ ಮುಂದುವರಿಯುತ್ತಾ ಎಂಬ ಗೊಂದಲ ಇರುವ ಮಧ್ಯದಲ್ಲೇ, ಪ್ರಧಾನಿ ನರೇಂದ್ರ ಮೋದಿ ‘ಎಲ್ಲ ತ್ಯಾಗಕ್ಕೂ ಸಿದ್ಧರಾಗಿ’ ಎಂದು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಈ ಸಭೆ ನಂತರ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸುದ್ಧಿಗೋಷ್ಠಿ ನಡೆಸಿ ಸಭೆ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ ಅಂಶಗಳು ಹೀಗಿವೆ…

  • ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯಗಳ ಸಿಎಂ ಗಳ ಜತೆ ಸಭೆ.
  • ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡು ಲಾಕ್ ಡೌನ್ ಜಾರಿಗೊಳಿಸಲು ಸೂಚನೆ.
  • ವಲಸೆ ಕಾರ್ಮಿಕರನ್ನು ಪ್ರತ್ಯೇಕವಾಗಿರಿಸಿ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸೂಚನೆ.
  • ಲಾಕ್ ಡೌನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ರಾಜ್ಯಗಳಿಗೆ ಮೋದಿ ಪ್ರಶಂಸೆ.
  • ರಾಜ್ಯದಲ್ಲಿ 124 ಜನರಿಗೆ ಸೋಂಕು ತಗುಲಿದ್ದು, ದೇಶದಲ್ಲಿ 9ನೇ ಸ್ಥಾನದಲ್ಲಿದೆ. (ಇಂದು 14 ಮಂದಿಗೆ ಸೋಂಕು)
  • ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ವಿನಾಯಿತಿ.
    ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ಮುಂದಿನ ನಿರ್ಧಾರ.
  • ಮುಂದಿನ ದಿನಗಳಲ್ಲಿ ಆಯುಷ್ ವೈದ್ಯರನ್ನು ಬಳಸಿಕೊಳ್ಳಲು ಸಲಹೆ.
  • ಇದು ಸುದೀರ್ಘವಾದ ಯುದ್ಧ. ಇಂದು ನಾಳೆ ಮುಗಿಯುವ ಯುದ್ಧವಲ್ಲ. ಎಲ್ಲ ರೀತಿಯ ತ್ಯಾಗ ಹಾಗೂ ಯುದ್ಧಕ್ಕೆ ಸಿದ್ಧರಾಗಿ ಎಂದು ಎಲ್ಲ ರಾಜ್ಯಗಳಿಗೆ ಕರೆ.

Leave a Reply