ಸಕ್ಕರೆ ನಾಡಿಗೂ ಕಾಲಿಟ್ಟಿತೇ ಹೆಮ್ಮಾರಿ ಕೊರೊನಾ..!?

ಡಿಜಿಟಲ್ ಕನ್ನಡ ಟೀಮ್:

ಸಕ್ಕರೆ ನಾಡು ಮಂಡ್ಯದಲ್ಲಿ ಇಲ್ಲೀವರೆಗೂ ಒಂದೇ ಒಂದು ಕೊರೊನಾ ಸೋಂಕು ಪತ್ತೆ ಆಗಿರಲಿಲ್ಲ. ಆದರೆ ಮುಸ್ಲಿಂ ಧರ್ಮಗುರು ಓಬ್ಬರು ಮಂಡ್ಯದ ಮಳವಳ್ಳಿಗೆ ಬಂದಿದ್ದರು ಎನ್ನುವ ವಿಚಾರ ಇದೀಗ ಮಂಡ್ಯ ಜಿಲ್ಲೆಯ ಜನರನ್ನು ಕಂಗಾಲಾಗುವಂತೆ ಮಾಡಿದೆ. ಮುಸ್ಲಿಂ ಧರ್ಮಗುರು ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಮಾರ್ಚ್ 22 ರಂದು ಮಳವಳ್ಳಿಗೆ ಬಂದಿದ್ದ ಧರ್ಮಗುರು, ದೆಹಲಿಯ ನಿಜಾಮುದ್ದೀನ್ ಸಭೆಗೆ ತೆರಳಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ. ಆ ವ್ಯಕ್ತಿ ಮಾರ್ಚ್​ 30 ರವರೆಗೂ ಮಳವಳ್ಳಯಲ್ಲೇ ವಾಸ್ತವ್ಯ ಹೂಡಿದ್ದರು ಎನ್ನಲಾಗಿದ್ದು, ಆ ಧರ್ಮ ಗುರು ಮೈಸೂರಿನಲ್ಲಿ ಕ್ವಾರಂಟೈನ್​ನಲ್ಲಿ ಇದ್ದಾರೆ. ಆ ಧರ್ಮಗುರುವಿನ ಟ್ರಾವೆಲ್ ಹಿಸ್ಟರಿ ಕಲೆ ಹಾಕಿದ ಅಧಿಕಾರಿಗಳು, ಮಳವಳಿಯಲ್ಲಿ ವಾಸ್ತವ್ಯ ಹೂಡಿದ್ದ ಬಡಾವಣೆಗೆ ಅಧಿಕಾರಿಗಳು ಭೇಟಿ ನೀಡಿದ್ದರು. ಆ ಧರ್ಮ ಗುರುವಿನ ಸಂಪರ್ಕದಲ್ಲಿದ್ದ 7 ಮಂದಿ ಹಾಗೂ ಅವರ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ. ಮಳವಳ್ಳೀಯ ಹಾಸ್ಟೆಲ್​ಗೆ ಕುಟುಂಬ ಸದಸ್ಯರನ್ನು ಶಿಫ್ಟ್ ಮಾಡಲಾಗಿದೆ.

ಧರ್ಮ ಗುರುಗಳು ಉಳಿದುಕೊಂಡಿದ್ದ ಮಳವಳ್ಳಿಯ ಮನೆ ಸೇರಿದಂತೆ ಇಡೀ ಬಡಾವಣೆಯ ರಸ್ತೆಗೆ ಔಷಧಿ ಸಿಂಪಡಣೆ ಮಾಡಲಾಗಿದೆ. 7 ಮುಸ್ಲಿಂ ಕುಟುಂಬಗಳನ್ನು ಕ್ವಾರಂಟೈನ್ ಮಾಡುತ್ತಿದ್ದಂತೆ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಎಚ್ಚರಿಕೆಯಿಂದ ಇರುವಂತೆ ಬಡಾವಣೆ ನಿವಾಸಿಗಳಿಗೆ ತಾಲೂಕು ಆಡಳಿತ ಸೂಚನೆ ಕೊಟ್ಟಿದೆ. ಯಾರಿಗಾದ್ರೂ ಜ್ವರ, ಕೆಮ್ಮು ಕಾಣಿಸಿಕೊಂಡ್ರೆ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಕ್ವಾರೆಂಟೈನ್ ನಲ್ಲಿರೋ ಇಡೀ ಕುಟುಂಬದ ಗಂಟಲು ದ್ರವ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಮಳವಳ್ಳಿಯಲ್ಲಿ ಕೊರೊನಾ ಶಂಕೆ ಮೇರೆಗೆ ಮುಸ್ಲಿಂ ಕುಟುಂಬಗವನ್ನು ಕ್ವಾರೆಂಟೈನ್ ಮಾಡುತ್ತಿದ್ದ ಹಾಗೆ ಮಳವಳ್ಳಿ ಶಾಸಕರ ಸೇರಿದಂತೆ ಬೆಂಬಲಿಗರಿಗೆ ಆತಂಕ ಎದುರಾಗಿದೆ. ನಿನ್ನೆಯಷ್ಟೆ ಆ ಕುಟುಂಬ ವಾಸವಿದ್ದ ಬಡಾವಣೆಗೆ ತೆರಳಿ ಮನೆ ಮನೆಗೂ ಹಾಲು ವಿತರಣೆ ಮಾಡಿದ್ದರು. ಮಳವಳ್ಳಿ ಶಾಸಕ ಅನ್ನದಾನಿ ಸೇರಿ ಅವರ ಬೆಂಬಲಿಗರು ಹಾಲು ವಿತರಿಸಿದ್ದರು. ಇದೀಗ ಆ ಬಡಾವಣೆಯಲ್ಲಿದ್ದ ಆ ಮುಸ್ಲಿಂ ಕುಟುಂಬಕ್ಕೆ ಹೋಂ ಕ್ವಾರೆಂಟೈನ್ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದೆ.

ಮಂಡ್ಯದಲ್ಲಿ JDS ಶಾಸಕ ಎಂ.ಶ್ರೀನಿವಾಸ್ ಈ ಬಗ್ಗೆ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಇಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ನಿರಾಶ್ರಿತರಿಗೆ ಹಾಗೂ ಕಾರ್ಮಿಕರಿಗೆ ಊಟದ ವ್ಯವಸ್ಥೆ ಸಹ ಕಲ್ಪಿಸಿದ್ದೇವೆ. ಸ್ಲಂ ನಿವಾಸಿಗಳು, ಕಾರ್ಮಿಕರಿಗೆ ಊಟದ ಸಮಸ್ಯೆ ಅಥವಾ ಬೇರೆ ಸಮಸ್ಯೆ ಇದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಮಂಡ್ಯ ನಗರದಲ್ಲಿರುವ ಹೋಂ ಕ್ವಾರೆಂಟೈನ್ ಶಂಕಿತರ ಬಗ್ಗೆ ಸಹ ನಿತ್ಯ ಮಾಹಿತಿ ಪಡೆಯುತ್ತಿದ್ದೇನೆ. ಡಿಸಿ, ಎಸ್​ಪಿ, DHO ಜೊತೆ ಕೊರೊನಾ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸಹ ಕರೆ ಮಾಡಿ ಮಂಡ್ಯ ಜಿಲ್ಲೆಯ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜನರಿಗೆ ಸಮಸ್ಯೆ ಆದರೆ ನೆರವು ಬೇಕೆಂದರೆ ಕರೆ ಮಾಡುವಂತೆಯೂ ಕುಮಾರಸ್ವಾಮಿ ಸೂಚಿಸಿದ್ದಾರೆ ಎಂದಿದ್ದಾರೆ. ಒಟ್ಟಾರೆ, ಇಲ್ಲೀವರೆಗೂ ಸೋಂಕಿನ ನೆರಳು ಸಹ ಮಂಡ್ಯ ಜಿಲ್ಲೆಯ ಮೇಲೆ ಬಿದ್ದಿರಲಿಲ್ಲ. ಆದರೀಗ ದೆಹಲಿಯ ನಿಜಾಮುದ್ದೀನ್​ ಸಭೆಯಲ್ಲಿ ಭಾಗಿಯಾಗಿದ್ದ ಓರ್ವ ಮುಸ್ಲಿಂ ಧರ್ಮಗುರು ಮಳವಳಿಯಲ್ಲಿ 10 ದಿನಗಳ ಕಾಲ ವಾಸವಾಗಿದ್ದು ಆತಂಕದ ಛಾಯೆ ಸೃಷ್ಟಿಸಿದೆ.

Leave a Reply