ಸೇಡು ತೀರಿಸಿಕೊಳ್ಳುತ್ತೇನೆಂದ ಟ್ರಂಪ್ ಈಗ ‘ಮೋದಿ ಶ್ರೇಷ್ಠ ನಾಯಕ’ ಅಂದ್ರು!

ಡಿಜಿಟಲ್ ಕನ್ನಡ ಟೀಮ್:

ಮಲೇರಿಯಾ ನಿರೋಧಕ ಮಾತ್ರೆ ರಫ್ತು ಮಾಡದಿದ್ರೆ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಯೂ ಟರ್ನ್ ಹೊಡೆದು ‘ಮೋದಿ ಒಬ್ಬ ಗ್ರೇಟ್ ಲೀಡರ್’ ಎಂದು ಮಸ್ಕಾ ಹೊಡೆದಿದ್ದಾರೆ.

ತನ್ನ ಬೇಡಿಕೆಗೆ ಸ್ಪಂದಿಸಿ ಭಾರತದಿಂದ ಮಲೇರಿಯಾ ನಿರೋಧಕ ಮಾತ್ರೆ ಸಿಗುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಹೇಳಿದ್ದಿಷ್ಟು, ‘ನಾವು ಕೊರೋನಾಗೆ ಲಸಿಕೆ ಕಂಡು ಹಿಡಿಯುತ್ತೇವೆ. ಕಂಡುಹಿಡಿದ ನಂತರ ಅದನ್ನು  ಮೊದಲು ಭಾರತಕ್ಕೆ ನೀಡುತ್ತೇವೆ. ಮೊದಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಕೋಟ್ಯಾಂತರ ಪ್ರಮಾಣದಲ್ಲಿ ಮಲೇರಿಯಾ ನಿರೋಧಕ ಮಾತ್ರೆ ಬರುತ್ತಿದೆ. ನಾನು ಹೆಚ್ಚಿನ ಪ್ರಮಾಣದಲ್ಲಿ ಮದ್ದು ಬೇಕು ಎಂದು ಕೇಳಿದೆ ಅದಕ್ಕೆ ಮೋದಿ ಸ್ಪಂದಿಸಿದ್ದಾರೆ. ಒಟ್ಟು 2.9 ಕೋಟಿಯಷ್ಟು ಪ್ರಮಾಣದಲ್ಲಿ ಭಾರತದಿಂದ ಮಲೇರಿಯಾ ಲಸಿಕೆ ಬರುತ್ತಿದೆ. ಮೋದಿ ಶ್ರೇಷ್ಠ ವ್ಯಕ್ತಿ.’

Leave a Reply