ಪ್ರಧಾನಿ ಮೋದಿ ಹೇಳಿದ ಸಪ್ತ ಸೂತ್ರಕ್ಕೆ ಸಿಎಂ ಏನಂದ್ರು..?

ಡಿಜಿಟಲ್ ಕನ್ನಡ ಟೀಮ್:

ಕೊರೊನಾ ತಡೆಗೆ ಮಾರ್ಚ್​ 24ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್​ಡೌನ್​ ಘೋಷಣೆ ಮಾಡಿದ್ದರು. ಇವತ್ತಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ 21 ದಿನಗಳ ಲಾಕ್​ಡೌನ್​ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಇಲ್ಲೀವರೆಗೂ ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ. ಭಾರತ ಕೈಗೊಂಡಿರುವ ಕ್ರಮಗಳಿಂದ ಕೊರೊನಾ ಸೋಂಕು ಈ ಮಟ್ಟದಲ್ಲಿದೆ. ಇಲ್ಲದಿದ್ದರೆ ಭಾರತ ಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಮೇ 3ರ ತನಕ ಮತ್ತೆ ಲಾಕ್​ಡೌನ್​ ವಿಸ್ತರಣೆಗೆ ಒತ್ತಡ ಬಂದಿದೆ. ಮೇ 3ರ ತನಕ ಲಾಕ್​ಡೌನ್​ ಮಾಡದೆ ಬೇರೆ ಮಾರ್ಗವಿಲ್ಲ ಎಂದು ತಿಳಿಸಿದ್ರು.

2ನೇ ಬಾರಿಗೆ ಲಾಕ್​ಡೌನ್​ ವಿಸ್ತರಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ತಡೆಗೆ ಸಪ್ತ ಸೂತ್ರಗಳನ್ನು ಜಾರಿ ಮಾಡುವಂತೆ ಜನತೆಗೆ ತಿಳಿಸಿದ್ದಾರೆ. ಸಪ್ತ ಸೂತ್ರ ತಿಳಿಸುವಂತೆ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಸಪ್ತ ಸೂತ್ರ ಪಾಲಿಸಿ ಕೊರೊನಾದಿಂದ ಮುಕ್ತರಾಗಿ ಎನ್ನುವ ಸಲಹೆ ನೀಡಿದ್ದಾರೆ

⦁ ಹಿರಿಯ ನಾಗರೀಕರ ಬಗ್ಗೆ ಜಾಗ್ರತೆ ವಹಿಸಿ
⦁ ಲಾಕ್​ಡೌನ್ & ಸಾಮಾಜಿಕ ಅಂತರ ಪಾಲಿಸಿ
⦁ ಮನೆಯಲ್ಲೇ ತಯಾರಿಸಿದ ಮುಖಗವಸು ಬಳಸಿ
⦁ ನಿಮ್ಮಲ್ಲೇ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
⦁ ಆಯುಷ್ ಸಚಿವಾಲಯದ ನಿರ್ದೇಶನ ಪಾಲಿಸಿ
⦁ ಆರೋಗ್ಯ ಸೇತು ಌಪ್ ಡೌನ್ ಲೋಡ್ ಮಾಡಿ
⦁ ಬಡ ಕುಟುಂಬಗಳಿಗೆ ಆದಷ್ಟೂ ಸಹಾಯ ಮಾಡಿ
⦁ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಬೇಡಿ
⦁ ವೈದ್ಯರು, ಪೌರ ಕಾರ್ಮಿಕರು, ಪೊಲೀಸರನ್ನ ಗೌರವಿಸಿ

ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಎದುರು ಸಪ್ತ ಸೂತ್ರಗಳನ್ನು ಸೂಚಿಸಿದ ಬಳಿಕ ಮಾತನಾಡಿದ ಸಿಎಂ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ನಾಳೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಆಗಲಿದೆ. ನಮ್ಮ ರಾಜ್ಯದಲ್ಲಿ ಮುಂದಿನ ಲಾಕ್​ಡೌನ್ ಅನ್ನು ಸಮರ್ಪಕವಾಗಿ ಪಾಲನೆ ಮಾಡುತ್ತೇವೆ. ಇನ್ನಷ್ಟು ಸೂಕ್ಷ್ಮದಿಂದ ಪರಿಸ್ಥಿತಿ ಅವಲೋಕನೆ ಮಾಡುತ್ತೇವೆ. ರಾಜ್ಯದ ಜನರು ಕೂಡ ಲಾಕ್​ಡೌನ್ ಪಾಲನೆ ಮಾಡಬೇಕು. ಸರ್ಕಾರದ ನಿಯಮ ಪಾಲಿಸದಿದ್ರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗಲಿದೆ ಎಂದಿದ್ದಾರೆ ಪ್ರಧಾನಿ ಮೋದಿ ಹೇಳಿರುವ ಸಪ್ತ ಸೂತ್ರಗಳನ್ನ ಪಾಲಿಸುತ್ತೇವೆ. ಎಲ್ಲರೂ ಸಪ್ತ ಸೂತ್ರಗಳನ್ನ ಪಾಲಿಸಬೇಕು ಎಂದು ಮನವಿ ಮಾಡಿದರು.

Leave a Reply