ಬಾಂಬೆಯಿಂದ ಮಂಡ್ಯಕ್ಕೆ ಬಿತ್ತು ಕೊರೊನಾ ಬಾಂಬ್​..!

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಇಂದು ಹೊಸದಾಗಿ 8 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಬಾಗಲಕೋಟೆಯ ಜಮಖಂಡಿಯಲ್ಲಿ 2, ವಿಜಯಪುರದಲ್ಲಿ 2 ಹಾಗೂ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸಾತೇನಹಳ್ಳಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 511 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 13 ವರ್ಷದ ಬಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಂತಸದ ವಿಚಾರ ಅಂದ್ರೆ ಬೆಂಗಳೂರಿನ ಪಾದರಾಯನಪುರ, ಹೊಂಗಸಂದ್ರ ಕೊರೊನಾ ಹಾಟ್​ಸ್ಪಾಟ್​ ಆಗಿದ್ದವು. ಆದ್ರೆ ಕಳೆದ 2 ದಿನಗಳಿಂದ ಈ ಎರಡೂ ವಾರ್ಡ್‌ಗಳಲ್ಲಿ ಸೋಂಕು ಪತ್ತೆಯಾಗಿಲ್ಲ. ಆದ್ರೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿ ಸಾತೇನಹಳ್ಳಿಯ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ. ಮುಂಬೈನಿಂದ ಟ್ರಾವೆಲ್​ ಮಾಡಿರುವ ಈ ವ್ಯಕ್ತಿ ಇಡೀ ದೇಶವೇ ಲಾಕ್​ಡೌನ್​ ಆಗಿದ್ದ ಸಮಯದಲ್ಲಿ ಬಾಂಬೆಯಿಂದ ಸಾತೇನಹಳ್ಳಿಗೆ ಬಂದಿದ್ದಾರೆ.

ನಾಗಮಂಗಲದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢವಾದ ಹಿನ್ನೆಲೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ‌‌.ವಿ‌.ವೆಂಕಟೇಶ್ ಮಾಹಿತಿ ನೀಡಿದ್ದು, ಮಳವಳ್ಳಿ ಹಾಗೂ ,ಮಂಡ್ಯದಲ್ಲಿ 16 ಪ್ರಕರಣ ಪತ್ತೆಯಾಗಿದ್ದವು. ಇಂದು ನಾಗಮಂಗಲ ತಾಲ್ಲೂಕಿನ ಒಂದು ಪಾಸಿಟಿವ್ ಆಗಿದ್ದು ದೃಢಪಟ್ಟಿದೆ. ಈ ವ್ಯಕ್ತಿ ಬಾಂಬೆಯ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಏ. 22 ರಂದು ನಾಗಮಂಗಲಕ್ಕೆ ಬಂದಿದ್ದಾರೆ. ಏಪ್ರಿಲ್ 24ರಂದು ಪರೀಕ್ಷೆ ಮಾಡಲಾಗಿದೆ. ಇಂದು ವರದಿ ಬಂದಿದ್ದು ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಬಾಂಬೆಯಿಂದ ಕರ್ಜೂರ ಸಾಗಿಸುವ ಕ್ಯಾಂಟರ್​ನಲ್ಲಿ ಪ್ರಯಾಣ ಮಾಡಿದ್ದಾರೆ. ದೇಶದಲ್ಲಿ ಲಾಕ್​ಡೌನ್ ಇದ್ದರೂ ಉಲ್ಲಂಘನೆ ಮಾಡಿ ತಪ್ಪು ಮಾಡಿದ್ದಾರೆ. ಏನು ಕ್ರಮಕೈಗೊಳ್ಳಬೆಂಕೆದು ಕೋವಿಡ್ – 19 ಚೇತರಿಕೆ ಬಳಿಕ ನಂತರ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಸಾತೇನಹಳ್ಳಿಯ ಕೊರೊನಾ ಪಾಸಿಟಿವ್ ವ್ಯಕ್ತಿಯ ಜೋತೆ ಆತನ ಬಾಮೈದ, ಬಾಮೈದನ ಹೆಂಡತಿ, ಮಕ್ಕಳು ಸಂಪರ್ಕ ಹೊಂದಿದ್ದಾರೆ. ಈ ವ್ಯಕ್ತಿ ಏಪ್ರಿಲ್​ 20 ರಂದು ಬಾಂಬೆಯಿಂದ ಹೊರಟು ಉಡುಪಿಗೆ ಬಂದಿದ್ದಾನೆ. ಅಲ್ಲಿನ ಪೆಟ್ರೋಲ್ ಬಂಕ್ ಬಳಿ ಸ್ನಾನ ಮಾಡಿ, ತಿಂಡಿ ತಿಂದು, ಅದೇ ಟ್ರಕ್​ನಲ್ಲಿ ಹಾಸನದ ಚನ್ನರಾಯಪಟ್ಟಣಕ್ಕೆ ಬಂದು ಇಳಿದುಕೊಂಡಿದ್ದಾನೆ. ಆ ಬಳಿಕ ಚನ್ನರಾಯಪಟ್ಟಣದಿಂದ ಬಾಮೈದನ ಕಾರಿನಲ್ಲಿ ಸಾತೇನಹಳ್ಳಿಯ ಮನೆಗೆ ಬಂದಿದ್ದಾನೆ. ತಮ್ಮ ಮನೆಯಲ್ಲಿ ಈ ಮೊದಲು ವಾಸವಿದ್ದವರನ್ನು ಖಾಲಿ ಮಾಡಿಸಿ ಇವರು ವಾಸವಾಗಿದ್ದರು. ಇವರು ಮತ್ತು ಇವರ ಹೆಂಡತಿ, ಬಾಮೈದ ಮತ್ತು ಅವರ ಕುಟುಂಬ ಪ್ರೈಮರಿ ಕಾಂಟ್ಯಾಕ್ಟ್​ನಲ್ಲಿದ್ದಾರೆ. ಟ್ರಕ್ ಡ್ರೈವರ್,ಮತ್ತು ಇನ್ನೊಬ್ಬ ವ್ಯಕ್ತಿ ಚನ್ನರಾಯಪಟ್ಟಣದವರು. aವರ ತಪಾಸಣೆಗೆ ಹಾಸನ ಜಿಲ್ಲಾಧಿಕಾರಿ ತಿಳಿಸಿದ್ದೇಬೆ. ಅವರು ಪರೀಕ್ಷೆ ಮಾಡುತ್ತಾರೆ‌‌ ಎಂದಿದ್ದಾರೆ.

Leave a Reply