ಡಿಜಿಟಲ್ ಕನ್ನಡ ಟೀಮ್:
ಬಾಲಿವುಡ್ ನಲ್ಲಿ ಈಗ ಸಂಪೂರ್ಣ ಸ್ಮಶಾನ ಮೌನ ಆವರಿಸಿದೆ. ನಿನ್ನೆ ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ಅಗಲಿಕೆ ಬೆನ್ನಲ್ಲೇ ಇಂದು ದಿಗ್ಗಜ ರಿಶಿ ಕಪೂರ್ ನಿಧನ ಸಿನಿ ಪ್ರೇಮಿಗಳಿಗೆ ಆಘಾತ ತಂದಿದೆ.
ಹಿರಿಯ ನಟ ರಿಷಿ ಕಪೂರ್ ಅವರು ಇಂದು ಮುಂಜಾನೆ ಮುಂಬೈನಲ್ಲಿ ಮೃತಪಟ್ಟಿದ್ದಾರೆ. 67 ವರ್ಷದ ರಿಷಿ ಕಪೂರ್ಗೆ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಒಂದು ವರ್ಷಗಳ ಕಾಲ ಅಮೆರಿಕದಲ್ಲಿ ಚಿಕಿತ್ಸೆಯನ್ನು ಪಡೆದು ಬಂದಿದ್ದರು. “ರಿಷಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ,” ಎಂದು ರಣಧೀರ್ ಕಪೂರ್ ತಿಳಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ರಿಷಿ ಕಪೂರ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.