ಮಂಡ್ಯದಲ್ಲಿ ಗೌಡರಿಗೆ ಘೇರಾವ್​, ಸುರೇಶ್​ ಸಖತ್​ ಪ್ಲ್ಯಾನ್​..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಜಿದ್ದಾಜಿದ್ದಿನ ರಾಜಕಾರಣ ಅಂದ್ರೆ ಮಂಡ್ಯ. ಇದೀಗ ಮಂಡ್ಯದಲ್ಲಿ ಕೊರೊನಾ ರಾಜಕೀಯ ಶುರುವಾಗಿದೆ. ಜೆಡಿಎಸ್​ನಿಂದ ಗೆದ್ದು ಆಪರೇಷನ್​ ಕಮಲಕ್ಕೆ ತುತ್ತಾರ ನಾರಾಯಣಗೌಡ, ಬಿಜೆಪಿ ಪಕ್ಷದಿಂದ ಮಂತ್ರಿ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ. ಹಾಗಾಗಿ ಬಿಜೆಪಿ ಸರ್ಕಾರ ಎಡವುತ್ತಿರುವುದನ್ನೇ ಕಾಯುಇತ್ತಿರುವ ಜೆಡಿಎಸ್​ ನಾಯಕರು ಈಗ ನಾರಾಯಣ ಗೌಡರ ವಿರುದ್ಧ ಮುಗಿಬೀಳುತ್ತಿದ್ದಾರೆ.

ಬಾಂಬೆಯಿಂದ ಹೆಣವನ್ನು ಪಾಂಡವಪುರಕ್ಕೆ ಸಾಗಿಸಲು ಸಚಿವ ನಾರಾಯಣಗೌಡ ಸಹಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಅದೇ ಪ್ರಕರಣದಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಕೂಡ ಖಚಿತವಾಗಿತ್ತು. ಅದಾದ ಬಳಿಕ ಕೆ.ಆರ್​ ಪೇಟೆ ತಾಲೂಕಿನ ಕೆಲವು ಆಪ್ತರು ಬಾಂಬೆ ಖಾಲಿ ಮಾಡಿಕೊಂಡು ಬರುವುದಕ್ಕೆ ಸಹಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಎರಡ್ಮೂರು ದಿನಗಳ ಹಿಂದೆ ಕೆ.ಆರ್​ ಪೇಟೆ ತಾಲೂಕಿನ ಜಾಗಿನಕೆರೆ ಗ್ರಾಮ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ಬಂದಿದೆ. ಜಾಗಿನಕೆರೆ ಸಚಿವ ನಾರಾಯಣಗೌದ ಅವರ ಊರಾದ ಕೈಗೋನಹಳ್ಳಿ ಪಕ್ಕದಲ್ಲೇ ಇದೆ. ಬಾಂಬೆಯಿಂದ ಇನ್ನೋವಾ ಕಾರಿನಲ್ಲಿ ಬಂದಿದ್ದಾರೆ. ಅಷ್ಟೊಂದು ಚೆಕ್​ಪೋಸ್ಟ್ಗಳನ್ನು ದಾಟಿಕೊಂಡು ಬರುವುದಕ್ಕೆ ಘರ್ಬಿಣಿ ಮಹಿಳೆಯ ತಾಯಿ ಕಾರ್ಡ್​ ತೋರಿಸಿ ಬಂದಿದ್ದಾರೆ ಎಂದು ಸಬೂಬು ಹೇಳಲಾಗುತ್ತಿದೆ. ಆದರೆ ಅಸಲಿ ಗೆ ಪಕ್ಕದ ಊರಿನ ಪರಿಚಯಸ್ಥ ಜನರಿಗೆ ಸಚಿವರೇ ಸಹಾಯ ಮಾಡಿದ್ದಾರೆ, ಇದೇ ರೀತಿ ಕೆ.ಆರ್​ ಪೇಟೆ ಹಳ್ಳಿ ಹಳ್ಳಿಯಲ್ಲಿ ಜನರನ್ನು ಕರೆತಂದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಅಷ್ಟೇ ಅಲ್ಲದೆ ಇದೀಗ ಜಾಗಿನ ಕೆರೆಯಲ್ಲಿ ಪಾಸಿಟೀವ್​ ಬಂದಿರುವ ಗರ್ಭಿಣಿ ಹಾಗೂ ಇನ್ನೋರ್ವ ಎಂಜಿನಿಯರ್​ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಕ್ವಾರಂಟೈನ್​ ಮಾಡಿದ್ದಾರೆ. ಇನ್ನುಳಿದ ಪ್ರಾಥಮಿಕ ಸಂಪರ್ಕಿತರನ್ನು ಹೋಂ ಕ್ವಾರಂಟೈನ್​ ಮಾಡಿಸಿದ್ದಾರೆ ಎನ್ನುವ ಆರೋಪವೂ ಎದುರಾಗಿದೆ. ಜೊತೆಗೆ ಸಾರಂಗಿ ಗ್ರಾಮ ಸೋಂಕಿತ ಗರ್ಭಿಣಿ ತವರು ಮನೆಯಾಗಿದ್ದು, ಸಾರಂಗಿ ಗ್ರಾಮದಿಂದಲೂ ಸಾಕಷ್ಟು ಜನರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಹೀಗಿದ್ದರೂ ಸಚಿವರ ಅಕ್ಕಪಕ್ಕದ ಊರಿನವರು ಎನ್ನುವ ಕಾರಣಕ್ಕೆ ಕ್ವಾರಂಟೈನ್​ ಕೂಡ ಮಾಡಿಲ್ಲ. ಸೀಲ್​ಡೌನ್​ ಕೂಡ ಮಾಡಿಲ್ಲ ಎನ್ನುವುದು ಸುತ್ತಮುತ್ತಲ ಗ್ರಾಮಸ್ಥರ ಆರೋಪವಾಗಿದೆ.

ಇದೀಗ ಬಾಂಬೆಯಲ್ಲಿ ಸಿಲುಕಿರುವ ಕೆ.ಆರ್​ ಪೇಟೆ ಜನರನ್ನು ಕರೆತಂದು ನಾಗಮಂಗಲ ತಾಲೂಕಿನ ಕದಬಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ ಮಾಡಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಕೆ.ಆರ್​ ಬಪೇಟೆ ತಾಲೀಕನ ಜನರು ಬಾಂಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದು, ಅವರನ್ನು ಕರೆತಂದು ಎ ನಾಗತೀಹಳ್ಳಿ ಬಳಿಕ ಕದಬಹಳ್ಳಿಯಲ್ಲಿ ಇಟ್ಟು ನಂತರ ಮನೆಗಳಿಗೆ ಕಳುಹಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಇಂದು ಉಸ್ತುವಾರಿ ಸಚಿವ ನಾರಾಯಣಗೌಡ, ಸ್ಥಳಪರಿಶೀಲನೆಗೆ ಬರುತ್ತಾರೆ ಎನ್ನುವುದು ಜನರಿಗೆ ಮೊದಲೇ ಗೊತ್ತಾಗಿತ್ತು. ಜನರೂ ಜಮಾಯಿಸಿದ್ದರು. ನಾಗಮಂಗಲ ಶಾಸಕ ಸುರೇಶ್​ ಗೌಡ ಕೂಡ ಆಗಮಿಸಿದ್ದರು. ಸಚಿವರಿಗೆ ಸ್ಥಳೀಯರು ಘೇರಾವ್ ಹಾಕಿದ್ರು. ರೈತ ಮುಖಂಡರು ಸಚಿವರನ್ನು ತರಾಟೆಗೆ ತೆಗೆದುಕೊಂಡು ಜನವಸತಿ ಪ್ರದೇಶದಲ್ಲಿ ವಸತಿ ಶಾಲೆಯಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರಂಟೈನ್​ ಮಾಡಲು ಅವಕಾಶ ಕೊಡುವುದಿಲ್ಲ ಎಂದರು. ಆ ನಂತರ ಅನಿವಾರ್ಯವಾಗಿ ಸಚಿವ ನಾರಾಯಣಗೌಡ ಕೇವಲ ನಾಗಮಂಗಲದ ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್​ ಮಾಡ್ತೇವೆ ಎಂದರು. ಆಗ ಶಾಸಕ ಸುರೇಶ್​ ಗೌಡ, ನಮ್ಮ ತಾಲೂಕಿನ ಜನರನ್ನು ಕರೆತನ್ನಿ ನಾವು ಅವರಿಗೆ ಕ್ವಾರಂಟೈನ್​ ಮಾಡಲು ವ್ಯವಸ್ಥೆ ಮಾಡ್ತೇವೆ ಎಂದರು. ಅನಿವಾರ್ಯವಾಗಿ ಸಚಿವರು ಅಲ್ಲಿಂದ ಕಾಲ್ಕೀಳುವಂತಾಯ್ತು..

Leave a Reply