ಲಾಕ್ ಡೌನ್ ಸಂತ್ರಸ್ತರಿಗೆ 1610 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ, ಆಟೋ ಚಾಲಕರು, ಅಗಸ ಮತ್ತು ಕ್ಷೌರಿಕರ ನೆರವಿಗೆ ಧಾವಿಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 1610 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿ ನಡೆಸಿ ಪ್ಯಾಕೇಜ್ ಪ್ರಕಟಿಸಿದ ಯಡಿಯೂರಪ್ಪ ಅವರ ಪ್ರಮುಖ ಘೋಷಣೆಗಳು ಹೀಗಿವೆ…

 • ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಆದರೂ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗಾಗಿ 1610 ಕೋಟಿ ವಿಶೇಷ ಪ್ಯಾಕೇಜ್.
 • 11,687 ಹೆಕ್ಟೋರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವುಗಳು ಮಾರಾಟವಾಗಿಲ್ಲ. 1 ಹೆಕ್ಟೇರ್ ಗೆ 25 ಸಾವಿರ ಪರಿಹಾರ
 • ಅಗಸರು, ಕ್ಷೌರಿಕ ವೃತ್ತಿಯಲ್ಲಿರುವವರಿಗೆ ಒಂದು ಬಾರಿ ತಲಾ 5 ಸಾವಿರ ಪರಿಹಾರ.
 • ಆಟೋ ಚಾಲಕರಿಗೆ ಒಂದು ಬಾರಿ 5 ಸಾವಿರ ಪರಿಹಾರ
 • ನೇಕಾರರ ಸಾಲ ಮನ್ನಾಕ್ಕೆ 80 ಕೋಟಿ. 1 ಲಕ್ಷ ರೂ.ವರೆಗಿನ ಸಾಲ ತೀರಿಸಿದವರಿಗೆ ಮರುಪಾವತಿ.
 • ನೇಕಾರ ಸಮ್ಮಾನ್ ಎಂಬ ಹೊಸ ಯೋಜನೆ ಮೂಲಕ 50 ಸಾವಿರ ಕೈಮಗ್ಗ ನೇಕಾರರಿಗೆ 2 ಸಾವಿರ ಪರಿಹಾರ.
 • ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿಯಾಗಿ 3 ಸಾವಿರ ಪರಿಹಾರ. ರಾಜ್ಯದಿಂದ ಹೊರಹೋಗದಂತೆ ನೋಡಿಕೊಳ್ಳಲು ಈ ಕ್ರಮ. ಈ ಹಿಂದೆ ನೀಡಲಾಗಿರುವ 2 ಸಾವಿರ ಪರಿಹಾರ ಸೇರಿ ಒಟ್ಟು 5 ಸಾವಿರ ಪರಿಹಾರ.
 • ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ಎರಡು ತಿಂಗಳ ವಿದ್ಯುತ್ ಫಿಕ್ಸಡ್ ಶುಲ್ಕ ಮನ್ನಾ
 • ರಾಜ್ಯದಲ್ಲಿ ಲಾಕ್ ಡೌನ್ ಸಡಿಲವಾಗಿದೆ. ಆದರೆ ಕೊನೆಯಾಗಿಲ್ಲ.
 • ಕಾರ್ಮಿಕರನ್ನು ಅವರ ಊರಿಗೆ ತಲುಪಿಸಲು 3 ಸಾವಿರ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಗುರುವಾರ ಈ ಪ್ರಕ್ರಿಯೆ ಅಂತ್ಯವಾಗಲಿದೆ.
 • ಮುಂಗಡ ವಿದ್ಯುತ್ ಬಿಲ್ ಪಾವತಿಸಿದವರಿಗೆ ಶೇ.6ರಷ್ಟು ವಿನಾಯಿತಿ. ನಿಗದಿತ ಸಮಯಕ್ಕೆ ಪಾವತಿಸಿದರೆ ಶೇ.1 ರಷ್ಟು ರಿಯಾಯಿತಿ.
 • ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
 • ತರಕಾರಿ, ಹಣ್ಣು ಬೆಳೆಗಾರರಿಗೂ ಸೂಕ್ತ ಪರಿಹಾರ ನೀಡಲಾಗುತ್ತದೆ.

Leave a Reply