ಪ್ರತಿ ಲೀಟರ್ ಪೆಟ್ರೋಲ್ 10, ಡೀಸೆಲ್ 13 ರೂಪಾಯಿ ಹೆಚ್ಚಿಸಿದ ಕೇಂದ್ರ!

ಡಿಜಿಟಲ್ ಕನ್ನಡ ಟೀಮ್:

ಜಾಗತಿಕ ಮಟ್ಟದಲ್ಲಿ ಐತಿಹಾಸಿಕವಾಗಿ ಕಚ್ಚಾತೈಲ ಬೆಲೆ ಕುಸಿದಿದ್ದರೂ ಕೇಂದ್ರ ಸರ್ಕಾರ ಇದರ ಲಾಭವನ್ನು ಜನರಿಗೆ ಸಿಗುವಂತೆ ಮಾಡುತ್ತಿಲ್ಲ. ಈಗ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಗೆ 10 ಹಾಗೂ ಡೀಸೆಲ್ ಗೆ 13 ರೂಪಾಯಿ ಹೆಚ್ಚಿಸಿ ಶಾಕ್ ನೀಡಿದೆ.

ಹೌದು, ಕೊರೋನಾ ಸಮಸ್ಯೆಯಿಂದ ಭಾರತದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬೀಳುವ ಹೊರೆ ತಗ್ಗಿಸಲು, ಸಂಪನ್ಮೂಲ ಕ್ರೋಢೀಕರಣಕ್ಕೆ ಕೇಂದ್ರ ಸರ್ಕಾರ ತೈಲ ಬೆಲೆ ಹೆಚ್ಚಿಸಿದೆ.

ಆದರೆ, ಇದು ಜನರ ಚಿಲ್ಲರೆ ವಹಿವಾಟಿಗೆ ಅನ್ವಯವಾಗುವುದಿಲ್ಲ. ಬದಲಾಗಿ ಈ ಬೆಲೆ ಏರಿಕೆ ಕೇವಲ ತೈಲ ಕಂಪೆನಿಗಳಿಗೆ ಮಾತ್ರ ಅನ್ವಯವಾಗಲಿದ ಎಂದು ಹೇಳಲಾಗುತ್ತಿದೆ. ಇಷ್ಟು ದಿನಗಳ ಕಾಲ ಕಂಪನಿ ನಷ್ಟದಲ್ಲಿದೆ ಎಂದು ಜನರಿಗೆ ಬೆಲೆ ಏರಿಕೆ ಹೊರೆ ಹಾಕುತ್ತಿದ್ದ ಸರ್ಕಾರ ಈಗ ಕಂಪನಿಗಳಿಗೆ ಈ ಹೊರೆ ಹಾಕುತ್ತಿದೆ.

Leave a Reply