ಕೊರೋನಾ ವಿರುದ್ಧದ ಹೋರಾಟಕ್ಕೆ 20 ಲಕ್ಷ ಕೋಟಿ ಪ್ಯಾಕೇಜ್ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ವಿರುದ್ಧದ ಹೋರಾಟ ಕುಸಿಯುತ್ತಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಪ್ರಕಟಿಸಿದ್ದಾರೆ.

ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಸ್ವಾವನಂಭಿ ಭಾರತದ ಧ್ಯೇಯ ಪ್ರಕಟಿಸಿದರು. ರೈತರಿಂದ ಹಿಡಿದು, ಶ್ರಮಿಕರು, ಅಸಂಘಟಿತ ಕಾರ್ಮಿಕರು, ಭೂಮಿ, ಹಣದ ಹರಿವಿಗೆ ದೇಶದ ಜಿಡಿಪಿಯ ಶೇ.10ರಷ್ಟು ಗಾತ್ರದ ಪ್ಯಾಕೇಜ್ ಪ್ರಕಟಿಸಿದರು.

ಇದೇ ವೇಳೆ ಲಾಕ್ ಡೌನ್ ನಾಲ್ಕನೇ ಹಂತದ ಸೂಚನೆ ಕೊಟ್ಟ ಪ್ರಧಾನಿ, ಈ ಹಂತ ಹೊಸ ರೂಪದಲ್ಲಿರಲಿದೆ ಎಂದಿದ್ದಾರೆ. ಇನ್ನು ಈ ಬೃಹತ್ ಗಾತ್ರದ ಬಜೆಟ್ ಅನ್ನು ನಾಳೆಯಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಹಂತ ಹಂತವಾಗಿ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸ್ಥಳೀಯ ಉತ್ಪನ್ನಗಳ ಬಗ್ಗೆ ಹೆಚ್ಚಿನ ಒತ್ತು ನೀಡುವ ಕುರಿತು ಮಾತನಾಡಿದ ಮೋದಿ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ, ಅವುಗಳನ್ನು ಗರ್ವದಿಂದ ಪ್ರಚಾರ ಮಾಡಿ ಎಂದು ಸಂದೇಶ ರವಾನಿಸಿದರು.

Leave a Reply