ಡಿಜಿಟಲ್ ಕನ್ನಡ ಟೀಮ್:
MSMEಗಳಿಗೆ ₹3 ಲಕ್ಷ ಕೋಟಿ ಸಾಲವನ್ನು ಯಾವುದೇ ಭದ್ರತೆ ಇಲ್ಲದೆ ಕೊಡಲಾಗುವುದು. ಅಕ್ಟೋಬರ್ 31ರವರೆಗೆ ಈ ಸಾಲ ಸೌಲಭ್ಯ ಸಿಗಲಿದೆ. ಸಂಕಷ್ಟದಲ್ಲಿರೋ MSMEಗಳಿಗೆ ₹20 ಸಾವಿರ ಕೋಟಿ, MSME ಫಂಡ್ ಆಫ್ ಫಂಡ್ಸ್ ಮೂಲಕ ₹50 ಸಾವಿರ ಕೋಟಿ ಸಾಲ ಸಿಗಲಿದೆ. 4 ವರ್ಷಗಳ ಕಾಲ ಈ ಸಾಲ ಮರುಪಾವತಿಗೆ ಅವಕಾಶ ನೀಡಲಾಗಿದೆ. ಈ ಯೋಜನೆಯಿಂದ 45 ಲಕ್ಷ ಉದ್ಯಮಿಗಳಿಗೆ ಲಾಭ ಆಗಲಿದೆ. ಹಾಗೇ 2 ಲಕ್ಷ MSMEಗಳಿಗೂ ಲಾಭ ಆಗಲಿದೆ
ಸುಸ್ತಿದಾರರಿಗೂ ಸಾಲ, 45 ದಿನದಲ್ಲಿ ವಿಲೇವಾರಿ
ಸಂಕಷ್ಟದಲ್ಲಿರೋ MSMEಗಳಿಗೂ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಂಕಷ್ಟದಲ್ಲಿರೋ MSMEಗಳಿಗೆ ₹20 ಸಾವಿರ ಕೋಟಿ ರೂಪಾಯಿ ನೀಡಲು ನಿರ್ಧಾರ ಮಾಡಿದ್ದು, ಈ ಯೋಜನೆಯಿಂದ 2 ಲಕ್ಷ MSMEಗಳಿಗೆ ಲಾಭ ಆಗಲಿದೆ. ಈ ಯೋಜನೆಯಲ್ಲಿ ಸಂಕಷ್ಟದಲ್ಲಿರೋ MSMEಗಳಿಗೆ ₹20 ಸಾವಿರ ಕೋಟಿ ಸಾಲ ನೀಡಲಾಗುತ್ತದೆ. ಇನ್ನೂ ಎಲ್ಲಾ ಅರ್ಜಿಗಳನ್ನು ಕೇವಲ 45 ದಿನಗಳ ಒಳಗಾಗಿ ವಿಲೇವಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.
ಆದಾಯ ತೆರಿಗೆ ಅವಧಿ ವಿಸ್ತರಣೆ, 6 ತಿಂಗಳ ಇಪಿಎಫ್ ಪಾವತಿ
ತೆರಿಗೆ ವಿಚಾರವಾಗಿ ಕೇಂದ್ರ ಸರ್ಕಾರ ಸುಧಾರಣೆ ಹಾಗೂ ರಿಲೀಫ್ ನೀಡಿದೆ. ಐಟಿ ರಿಟರ್ನ್ಸ್ ಅವಧಿಯನ್ನು ಜುಲೈ 31ರ ಬದಲು ನವೆಂಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಟ್ಯಾಕ್ಸ್ ಅಡಿಟ್ ಸಲ್ಲಿಕೆಗೆ ಸೆಪ್ಟೆಂಬರ್ 30ರ ಬದಲು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಲೆಕ್ಕ ಪತ್ರಗಳ ಪರಿಶೀಲನೆಯನ್ನು ಸೆಪ್ಟೆಂಬರ್ 30ರ ಬದಲು ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಬಾಕಿ ಇರುವ ಎಲ್ಲಾ ತೆರಿಗೆ ಹಣ ಶೀಘ್ರದಲ್ಲೇ ವಾಪಸ್ ನೀಡುವ ಭರವಸೆ ಸಿಕ್ಕಿದೆ. ಬಾಕಿ ತೆರಿಗೆ ಪಾವತಿಗೆ ಯಾವುದೇ ದಂಡ ಶುಲ್ಕವಿಲ್ಲ. ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಜೂನ್ವರೆಗೆ ವಿಸ್ತರಣೆ ಮಾಡಲಾಗಿದೆ. ಬ್ಯಾಂಕ್ಗಳು ಹಾಗೂ ಎಟಿಎಂಗಳ ವಿತ್ಡ್ರಾಗೆ ಯಾವುದೇ ಶುಲ್ಕ ಇರೋದಿಲ್ಲ. ಇನ್ನು ಮೋಟಾರು ವಾಹನ, ಆರೋಗ್ಯ ವಿಮೆ ಸಂದಾಯ ಗಡುವು ವಿಸ್ತರಣೆ ಮಾಡಲಾಗಿದೆ.
ಇನ್ನೂ ಪಿಎಫ್ ಹಣವನ್ನು ಕಟ್ಟಬೇಕಿದ್ದ ಕಂಪನಿಗಳಿಗೆ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿದೆ. ಪಿಎಫ್ ಖಾತೆದಾರರಿಗೆ 6 ತಿಂಗಳ ಅಂದರೆ ಮಾರ್ಚ್ನಿಂದ ಆಗಸ್ಟ್ ತನಕ ಇಪಿಎಫ್ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಇದರಿಂದಾಗಿ ₹6750 ಕೋಟಿ ನಗದು ಹರಿವು ಆಗಲಿದೆ. ಮುಂದಿನ 3 ತಿಂಗಳ ಕಾಲ ಉತ್ಪಾದನೆಗೆ ಸಹಾಯ ಆಗಲಿದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ನೆರವು ನೀಡಿದ್ದು ಪಿಎಫ್ ನೀಡುವ ಉದ್ಯಮಗಳಿಗೆ ಆರ್ಥಿಕ ಸಹಾಯ ನೀಡಿದೆ. ಶೇ.12 ರಿಂದ ಶೇ.10ಕ್ಕೆ ಪಿಎಫ್ ಪಾಲು ಇಳಿಕೆ ಮಾಡಿದೆ.
200 ಕೋಟಿ ಗುತ್ತಿಗೆಗೆ ಜಾಗತಿಕ ಟೆಂಡರ್ ಇರಲ್ಲ..!
200 ಕೋಟಿ ಒಳಗಿನ ಕೆಲಸಗಳಿಗೆ ಜಾಗತಿಕ ಟೆಂಡರ್ ಇರೋದಿಲ್ಲ. ಇನ್ಮುಂದೆ ಸರ್ಕಾರಿ ಟೆಂಡರ್ ಭಾರತೀಯ ಕಂಪನಿಗಳಿಗೆ ಮಾತ್ರ. ಹಣಕಾಸು ಕಾನೂನು ಅಗತ್ಯ ತಿದ್ದುಪಡಿ ಮಾಡಲು ನಿರ್ಧಾರ ಮಾಡಲಾಗಿದೆ. ಇದರಿಂದ ಭಾರತೀಯ MSME ಕಂಪನಿಗಳ ಬೆಳವಣಿಗೆ ಅನುಕೂಲ ಆಗಲಿದೆ. ದೇಶಿಯ ಕಂಪನಿಗಳ ಚೇತರಿಕೆಗೆ ಈ ಯೋಜನೆ ಅನುಕೂಲ ಆಗುವ ವಿಶ್ವಾಸವಿದೆ.
ರೈತರಿಗೆ ಇನ್ನೂ ಕೊಟ್ಟಿಲ್ಲ ಪ್ಯಾಕೇಜ್..!
ಕೊರೊನಾ ವೈರಸ್ನಿಂದಾಗಿ ಎದುರಾಗಿರೋ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಪ್ರಧಾನಿ ಮೋದಿ ನಿನ್ನೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್MSMEಗಳಿಗೆ ಲಾಭವಾಗಲಿದೆ. ಆದರೆ ಕೇಂದ್ರ ಸರ್ಕಾರ ಇಂದು ಕೇವಲ ಕೈಗಾರಿಕೆಗಳಿಗೆ ಮಾತ್ರ ಆರ್ಥಿಕ ನೆರವು ಘೋಷಣೆ ಆಗಿದೆ. ಆದರೆ ಕೊರೊನಾ ಸೋಂಕಿನಿಂದ ನಷ್ಟ ಅನುಭವಿಸಿರುವ ರೈತಾಪಿ ವರ್ಗಕ್ಕೆ ಯಾವುದೇ ಯೋಜನೆ ಘೋಷಣೆ ಆಗಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟರ್ ಮೂಲಕ ಕೇಂದ್ರ ಪ್ಯಾಕೇಜ್ ಟೀಕಿಸಿದ್ದು, ಕೇವಲ ಘೋಷಣೆಗೆ ಸೀಮಿತ ಎಂದಿದ್ದಾರೆ. ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಾದರೂ ಬಡವರಿಗೆ ಅನುಕೂಲ ಮಾಡಿಕೊಡಿ ಎಂದಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ಕೇಂದ್ರ ಪ್ಯಾಕೇಜ್ಗೆ ಸಂತಸ ವ್ಯಕ್ತಪಡಿಸಿದ್ದು, ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ.