ದೆಹಲಿಯಿಂದ ಬಂದವರ ಗಲಾಟೆ..! ಇನ್ಮುಂದೆ ಕಾದಿದೆಯಾ ಅವಾಂತರ..?

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರ ಕೊರೊನಾ ಸೋಂಕನ್ನು ಲಾಕ್‌ಡೌನ್‌ ಮೂಲಕ ನಿಯಂತ್ರ ಮಾಡುವ ಜವಾಬ್ದಾರಿಯನ್ನು ಕೈಬಿಟ್ಟು ಸಾಮಾನ್ಯ ಜೀವನ ನಡೆಸುವ ನಿರ್ಧಾಕ್ಕೆ ಬಂದಿದ್ದು ಆಗಿದೆ. ಅದೃ ಮೊದಲ ಪ್ರಯತ್ನವೇ ಅಂತರ್‌ ಜಿಲ್ಲೆ, ಅಂತರ್‌ ರಾಜ್ಯ, ವಿದೇಶಗಳಲ್ಲಿ ಇರುವ ಜನರು ತಮ್ಮ ತಮ್ಮ ಸ್ಥಳಗಳಿಗೆ ವಾಪಸ್‌ ಆಗಲು ಅವಕಾಶ ಕೊಟ್ಟಿದ್ದು. ಇದೀಗ ಸಾಗರ ಮಾಲ ಹಾಗೂ ವಂದೇ ಭಾರತ್‌ ಮಿಷನ್‌ ಸಮುದ್ರ ಸೇತು ಯೋಜನೆಗಳನ್ನು ಆರಂಭಿಸಿದೆ. ಅದೇ ರೀತಿ ನಮ್ಮ ದೇಶದ ಒಳಗೆ ಸಿಲುಕಿರುವ ಪ್ರಯಾಣಿಕರನ್ನು ವಾಪಸ್‌ ಸ್ವಂತ ಸ್ಥಳಗಳಿಗೆ ತಲುಪಿಸುವ ಉದ್ದೇಶದಿಂದ ಶ್ರಮಿಕ್‌ ರೈಲನ್ನು ಆರಂಭ ಮಾಡಿದೆ. ಇದರದಲ್ಲಿ ಶೇಕಡ 85 ರಷ್ಟು ಟಿಕೆಟ್‌ ವೆಚ್ಚವನ್ನು ಕೇಂದ್ರ ಸಎದಕಾರ ಹಾಗೂ ಉಳಿದ ಶೇಕಡ 15ರಷ್ಟು ವೆಚ್ಚವನ್ನು ಕೆಲವು ರಾಜ್ಯ ಸರ್ಕಾರಗಳು ಭರಿಸುತ್ತಿವೆ. ಇದರ ಜೊತೆಗೆ ದೆಹಲಿಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ರೈಲ್ವೆ ಇ8ಲಾಖೆ 30 ಮಾರ್ಗದ ರೈಲು ಸಂಚಾರ ಆರಂಭಿಸಿದೆ. ಇದೀಗ ಕೆಲವೇ ಗಂಟೆಗಳ ಹಿಂದೆ ಬೆಂಗಳೂರಿಗೆ ಒಂದು ರೈಲು ತಲುಪಿದ್ದು ಪ್ರಯಾಣಿಕರು ಗಲಾಟೆ ನಡೆಸಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ರೈಲಿನಲ್ಲಿ ಸುಮಾರು ಒಂದು ಸಾವಿರ ಪ್ರಯಾಣಿಕರು ಆಗಮಿಸಿದ್ದಾರೆ. ಲಾಕ್‌ಡೌನ್ ಜಾರಿಯಾದ 50 ದಿನಗಳ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಮೊದಲ ರೈಲಿನ ಪ್ರಯಾಣಿಕರು ಕ್ವಾರಂಟೈನ್‌ ಆಗುವುದಕ್ಕೆ ನಿರಾಕರಿಸಿದ್ದಾರೆ. ಮಂಗಳವಾರ ರಾತ್ರಿ ದೆಹಲಿಯಿಂದ ಹೊರಟಿದ್ದ ರೈಲು ಇಂದು ಬೆಳಗ್ಗೆ ಬೆಂಗಳೂರು ತಲುಪಿದೆ. ರೈಲು ನಿಲ್ದಾಣಕ್ಕೆ ಬರುತ್ತಿದ್ದ ಹಾಗೆ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಮುಂದಾದರು. ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ ಮೂಲಕ ಎಲ್ಲಾ ಮಾರ್ಗಗಳನ್ನ ಬಂದ್ ಮಾಡಿ ಒಂದು ಕಡೆ ಮಾತ್ರ ಓಡಾಟಕ್ಕೆ ಅವಕಾಶ ಕೊಟ್ಟು ಯಾರೊಬ್ಬರೂ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗ್ತಿತ್ತು. ಈ ವೇಳೆ ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿ, ಪೊಲೀಸರ ಜೊತೆಗೆ ಪ್ರಯಾಣಿಕರು ಕ್ವಾರೆಂಟೈನ್ ಆಗೋದಿಲ್ಲ ಎಂದು ವಾಗ್ವಾದ ನಡೆಸಿದ್ದಾರೆ.

ಬೆಂಗಳೂರಿನ ಗಾಂಧಿನಗರ, ಚಿಕ್ಕಪೇಟೆ, ಕಾಟನ್ ಪೇಟೆ ಸುತ್ತಮುತ್ತಲಿನ ಖಾಸಗಿ ಹೋಟೆಲ್‌ಗಳಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲು ಮುಂದಾಗಿದ್ದ ಅಧಿಕಾರಿಗಳು 40ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳನ್ನು ನಿಲ್ಲಿಸಿಕೊಂಡು ಕಾಯುತ್ತಿದ್ದರು. 14 ದಿನಗಳವರೆಗೂ ಖಾಸಗಿ ಹೋಟೆಲ್ ನಲ್ಲೇ ಕ್ವಾರಂಟೈನ್​ನಲ್ಲಿರಬೇಕು ಹಾಗೂ ಅದರ ಖರ್ಚು ವೆಚ್ಚವನ್ನು ತಾವೇ ಭರಿಸಬೇಕು ಎನ್ನುತ್ತಿದ್ದ ಹಾಗೆ ಜನರು ತಿರುಗಿ ಬಿದ್ದರು. ನಮ್ಮ ಬಳಿ ಹಣವಿಲ್ಲ. ನಾವು ಕ್ವಾರಂಟೈನ್‌ಗೆ ಹೋಗೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ದೆಹಲಿಯಿಂದ ಬಂದವರಲ್ಲಿ 45 ಜನರಿಗೆ ಉಚಿತ ಕ್ವಾರಂಟೈನ್ ಹಾಗೂ ಉಳಿದವರಿಗೆ ಪಾವತಿ ಕ್ವಾರಂಟೈನ್‌ ಮಾಡಲು ನಿರ್ಧಾರ ಮಾಡಲಾಯ್ತು. ದೆಹಲಿಯಿಂದ ಬಂದವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು ಹಾಗೂ ಹೋಟೆಲ್​ ಕ್ವಾರಂಟೈನ್​ನಲ್ಲಿರಲು ಹಣಕಾಸಿನ ತೊಂದರೆ ಉಂಟಾಗಿತ್ತು. ಬಳಿಕ ಬಿಬಿಎಂಪಿ ನೀಡುವ ಉಚಿತ ಕ್ವಾರಂಟೈನ್‌ಗೆ ತೆರಳಿದರು.

ಇನ್ನೂ ಕೆಲವತರು ತುರ್ತು ಕೆಲಸದ ಮೇಲೆ ನಾವು ಬೆಂಗಳೂರಿಗೆ ಬಂದಿದ್ದೀವಿ, ನಮ್ಮ ಕುಟುಂಬದಲ್ಲಿ ಸಾವಾಗಿತ್ತು ಹಾಗಾಗಿ ಬಂದಿದ್ದೀವಿ. ಮದುವೆ ಕಾರ್ಯಕ್ರಮ ಇದೆ ಬಂದಿದ್ದೀವಿ. ನಮ್ಮನ್ನು ನೀವು ಕ್ವಾರೆಂಟೈನ್ ಮಾಡೋದಾದ್ರೆ ನಾವು ಬಂದಿರುವ ಉದ್ದೇಶ ಈಡೇರಲ್ಲ ಎಂದೆಲ್ಲಾ ಮಾತನಾಡಿದರು. ಜೊತೆಗೆ ನಾವು ಹಣ ಕೊಟ್ಟು ಕ್ವಾರೆಂಟೈನ್ ಆಗುವುದಾಗಿದ್ದರೆ ನಾವು ಯಾಕಿಲ್ಲಿಗೆ ಬರಬೇಕಿತ್ತು..? ನಾವು ಅಲ್ಲೇ ಇರಬಹುದಿತ್ತಲ್ಲವೇ ಎಂದೆಲ್ಲಾ ಪ್ರಶ್ನೆಗಳನ್ನು ಹಾಕಿದ್ರು. ಬಳಿಕ ಬಿಬಿಎಂಪಿ ವಿಶೇಷ ಆಯುಕ್ತ ರವಿಕುಮಾರ್ ಸುರಪುರ ನೇತೃತ್ವದಲ್ಲಿ ಎಲ್ಲರನ್ನೂ ಕ್ವಾರಂಟೈನ್‌ಗೆ ಮನವೊಲಿಸಲಾಯ್ತು. ಆದರೆ ಕೊರೊನಾ ಸೋಂಕಿನ ಅಂತ್ಯವಿಲ್ಲ ಎಂಬ ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಂದು ವೇಳೆ ಲಸಿಕೆ ಕಂಡು ಹಿಡಿಯುವ ಕೆಲಸ ಆದಷ್ಟು ಬೇಗ ಆಗದಿದ್ದರೆ..! ಎಷ್ಟು ದಿನ ಇದೇ ರೀತಿ ಕ್ವಾರಂಟೈನ್‌ ಜೀವನ ಯಶಸ್ಸವಿಯಾಗುತ್ತದೆ ಎನ್ನುವ ಚಿಂತೆ ಇಡೀ ಜಗತ್ತನ್ನೇ ಕಾಡುತ್ತಿದೆ. ಅಂತಿಮವಾಗಿ ಮುಂದಿನ ದಿನಗಳಲ್ಲಿ ಕೊರೊನಾ ಅಂವಾತರ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ.

Leave a Reply