ಆಶಾ ಕ್ರಾಯಕರ್ತೆಯರಿಗೆ 3 ಸಾವಿರ, ಭತ್ತ- ಮೆಕ್ಕೆ ಜೋಳ ಬೆಳೆಗಾರರಿಗೆ ತಲಾ 5 ಸಾವಿರ: ಸಿಎಂ ಯಡಿಯೂರಪ್ಪ

ಡಿಜಿಟಲ್ ಕನ್ನಡ ಟೀಮ್:

ನಾನು ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದೇನೆ, ನನ್ನಿಂದ ರೈತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೊರೋನಾ ವಿಚಾರವಾಗಿ 3ನೇ ಪ್ಯಾಕೇಜ್ ಘೋಷಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಪ್ಯಾಕೇಜ್ ಪ್ರಕಟಿಸಿದ ಮುಖ್ಯಮಂತ್ರಿಗಳು 500 ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದು, ಅವರು ಹೇಳಿದ ಮುಖ್ಯಾಂಶಗಳು ಹೀಗಿವೆ…

  • ರೈತ ಪರ ಬಜೆಟ್ ಮಂಡಿಸಿದ್ದೆ.
  • ರೈತರಿಗೆ ದುಪ್ಪಟ್ಟು ಬೆಲೆ ಸಿಗಲು ಕಾರ್ಯಕ್ರಮ
  • ಇದಕ್ಕಾಗಿ ನಾನು ಹೋರಾಟ ಮಾಡಿದ್ದೆ.
  • ರೈತರ ಬೆಳೆ ಮಾರಾಟಕ್ಕೆ ಮುಕ್ತ ಅವಕಾಶ.
  • ಮೆಕ್ಕೆ ಜೋಳ ಹಾಗೂ ಭತ್ತ ಬೆಳೆಗಾರರಿಗೆ ಪರಿಹಾರ ಘೋಷಣೆ
  • ಮೆಕ್ಕೆ ಜೋಳ ಬೆಳೆಗಾರರಿಗೆ ತಲಾ 5 ಸಾವಿರ
  • ನಮ್ಮಲ್ಲಿ 10 ಲಕ್ಷ ಮೆಕ್ಕೆ ಜೋಳ ಬೆಳೆಗಾರರಿದ್ದು, ಅವರಿಗೆ ಪರಿಹಾರ
  • 40,250 ಆಶಾ ಕಾರ್ಯಕರ್ತರಿಗೆ ತಲಾ 5 ಸಾವಿರ ಪ್ರೋತ್ಸಾಹ ಧನ.
  • ವಿಕೋಪಕ್ಕೆ ಮೃತಪಟ್ಟ ಕುರಿ ಹಾಗೂ ಮೇಕೆಗಳಿಗೆ 5 ಸಾವಿರ ರೂ. ಪರಿಹಾರ

Leave a Reply