ಕೇಂದ್ರದ ಪರಿಹಾರ ಪ್ಯಾಕೇಜ್ ನಲ್ಲಿ ಯಾರಿಗೆ ಎಷ್ಟು?

ಕೊರೊನಾ ವೈಸರ್​ನಿಂದ ಕಂಗೆಟ್ಟಿರುವ ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರ ಕೃಷಿ, ಹೈನುಗಾರಿಕೆ, ಕೃಷಿ ಸಹಕಾರ ಸಂಘಗಳಿಗೆ 1 ಲಕ್ಷ ಕೋಟಿ ಹಣ ನೀಡಿ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಿದೆ.

ಅಷ್ಟೇ ಅಲ್ಲ, ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಗೆ ಹಲವು ಸುಧಾರಣಾ ಕ್ರಮಗಳನ್ನೂ ಕೈಗೊಂಡಿದೆ. ಪ್ರಧಾನಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಒಂದೊಂದೇ ವಿಭಾಗಕ್ಕೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ವಲಯವಾರು ಹಂಚಿಕೆ.

ಕೃಷಿಗೆ?

ಕೃಷಿ ಮೂಲಭೂತ ಸೌಕರ್ಯಕ್ಕೆ ₹1 ಲಕ್ಷ ಕೋಟಿ
ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ
ಕೋಲ್ಡ್ ಸ್ಟೋರೇಜ್, ಯಾರ್ಡ್​ಗಳ ಅಭಿವೃದ್ಧಿ
ಖಾಸಗಿ ಕೃಷಿ ಸ್ಟಾರ್ಟ್​ಅಪ್​ಗಳಿಗೆ ಸಹಾಯ
ಕಟಾವಿನ ನಂತರ ಕೃಷಿ ಉತ್ಪನ್ನ ಶೇಖರಣೆಗೆ ಕ್ರಮ
ಉತ್ಪಾದನೆ ನಂತರದ ಕ್ರಮಗಳಿಗೆ ಅನುದಾನ ಬಳಕೆ

MFEಗಳಿಗೆ ಕೊಟ್ಟಿದ್ದು..?

ಕಿರು ಆಹಾರ ಉತ್ಪಾದನಾ ಸಂಸ್ಥೆಗಳಿಗೆ (MFE) ಅನುದಾನ
ಅಸಂಘಟಿತ ಕಿರು ಆಹಾರ ಉತ್ಪಾದನಾ ಸಂಸ್ಥೆಗಳಿಗೆ ಗಿಫ್ಟ್
ಜಾಗತಿಕ ಬ್ರಾಂಡ್ ಆಗಲು MFEಗಳಿಗೆ ತಾಂತ್ರಿಕ ಸಹಾಯ
2 ಲಕ್ಷ MFEಗಳು ಜಾಗತಿಕ ಮಟ್ಟಕ್ಕೇರಲು ಸಹಾಯ
ಹಾಲು MFEಗಳು, ಸ್ವಸಹಾಯ ಸಂಘಟನೆಗಳಿಗೆ ಸಹಕಾರ
ಆಯಾ ರಾಜ್ಯಗಳಲ್ಲಿನ ಪ್ರಮುಖ ಉತ್ಪನ್ನಗಳಿಗೆ ಆದ್ಯತೆ
ಉತ್ತರ ಪ್ರದೇಶದಲ್ಲಿ ಮಾವು, ಜಮ್ಮು ಕಾಶ್ಮೀರದಲ್ಲಿ ಕೇಸರಿ
ಈಶಾನ್ಯದಲ್ಲಿ ಬಿದಿರು ಉತ್ಪನ್ನಗಳಿಗೆ ಸಹಕಾರ
ಆಂಧ್ರದಲ್ಲಿ ಮೆಣಸಿನಕಾಯಿ, ಕರ್ನಾಟಕದಲ್ಲಿ ರಾಗಿ, ಅಕ್ಕಿಗೆ ಪ್ರೋತ್ಸಾಹ

ಮೀನುಗಾರರಿಗೆ ಸಿಕ್ಕಿದ್ದು..?

ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆ ಜಾರಿ
₹20,000 ಕೋಟಿ ಅನುದಾನಕ್ಕೆ ನಿರ್ಧಾರ
ಮೀನುಗಾರಿಕೆ ಚಟುವಟಿಕೆಗೆ ₹11 ಸಾವಿರ ಕೋಟಿ
ಮೀನುಗಾರಿಕೆಯ ಮೂಲಭೂತ ಸೌಕರ್ಯಕ್ಕೆ ₹9 ಸಾವಿರ ಕೋಟಿ
ಮೀನುಗಾರರಿಗೆ ವಿಮೆ, ಬೋಟ್​ಗಳಿಗೂ ವಿಮಾ ಸೌಲಭ್ಯ
55 ಲಕ್ಷ ಜನರಿಗೆ ಮೀನುಗಾರಿಕೆಯಲ್ಲಿ ಉದ್ಯೋಗವಕಾಶ
ಸಮುದ್ರ ಮೀನುಗಾರಿಕೆ, ಒಳನಾಡು ಮೀನುಗಾರಿಕೆಗೆ ಸಹಾಯ
5 ವರ್ಷಗಳಲ್ಲಿ ಹೆಚ್ಚುವರಿ 70 ಲಕ್ಷ ಟನ್ ಮೀನು ಉತ್ಪಾದನೆಗೆ ಸಹಕಾರಿ

ಪಶುಸಂಗೋಪನೆಗೆ ಕೊಟ್ಟಿದ್ದು..?

ಪ್ರಾಣಿಗಳ ರಕ್ಷಣೆಗೆ ಕೇಂದ್ರದಿಂದ ಅನುದಾನ
1.5 ಕೋಟಿ ಪಶುಗಳಿಗೆ ಕಾಲುಬಾಯಿ ರೋಗ ಚಿಕಿತ್ಸೆ
53 ಕೋಟಿ ಪ್ರಾಣಿಗಳಿಗೆ ₹13,000 ಕೋಟಿ ವೆಚ್ಚದಲ್ಲಿ ಚಿಕಿತ್ಸೆ
ಶೇ. 100ರಷ್ಟು ಲಸಿಕೆ ಪೂರ್ಣಗೊಳಿಸೋ ಟಾರ್ಗೆಟ್​
ದನ, ಕರು, ಎತ್ತು, ಕುರಿ, ಮೇಕೆ, ಹಂದಿಗಳಿಗೆ ಲಸಿಕೆ
ಬೈಟ್: ನಿರ್ಮಲಾ ಸೀತಾರಾಮನ್​, ಕೇಂದ್ರ ಹಣಕಾಸು ಸಚಿವೆ

ಹೈನುಗಾರಿಕೆಗೆ ಕೊಟ್ಟಿದ್ದು..?

ಹಾಲು ಉತ್ಪಾದಕರ ಸಂಕಷ್ಟಗಳಿಗೆ ಸ್ಪಂದನೆ
ಹೈನುಗಾರಿಕೆಗೆ ₹15,000 ಕೋಟಿ ಅನುದಾನ
ಹಾಲು, ಮೊಸರು, ಬೆಣ್ಣೆ ತಯಾರಿಕೆಗೆ ಬೆಂಬಲ
ಮೂಲಸೌಕರ್ಯ ಅಭಿವೃದ್ಧಿಗೆ ಧನಸಹಾಯ
ಖಾಸಗಿ ಡೈರಿಗಳ ಸ್ಥಾಪನೆ, ಪಶು ಆಹಾರ ಉತ್ಪಾದನೆಗೆ ಒತ್ತು

ಔಷಧಿ ಗಿಡಮೂಲಿಕೆ ಕೃಷಿಗೆ..?

ಔಷಧಿ ಸಸ್ಯಗಳ ಸಂರಕ್ಷಣೆಗೆ ಸಹಾಯ
ಔಷಧಿ ಸಸ್ಯಗಳ ಸಂರಕ್ಷಣೆಗಾಗಿ ₹4,000 ಕೋಟಿ
ಔಷಧಿ, ಗಿಡಮೂಲಿಕೆಗಳ ಬೆಳೆಗಳಿಗೆ ಒತ್ತು
ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ ಬೆಂಬಲ
ಈಗಾಗ್ಲೇ 2.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಔಷಧ ಸಸ್ಯ ಬೆಳೆ
ಮುಂದಿನ 2 ವರ್ಷಗಳಲ್ಲಿ 10 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ
ಗಂಗಾನದಿ ತಟದಲ್ಲಿ 800 ಹೆಕ್ಟೇರ್ ಔಷಧೀಯ ಸಸ್ಯಗಳ ಕಾರಿಡಾರ್

ಜೇನು ಸಾಕಾಣಿಕೆಗೆ ಸಿಕ್ಕ ಸಿಹಿ..?

ಜೇನು ಸಾಕಣಿಕೆ ರೈತರಿಗೂ ಕೇಂದ್ರದ ಸಹಾಯ
₹500 ಕೋಟಿ ಸಹಾಯ ಧನ ಘೋಷಣೆ
2 ಲಕ್ಷ ಜೇನು ಸಾಕಣೆದಾರರಿಗೆ ಅನುಕೂಲ
ಜೇನು ಸಾಕಾಣಿಕೆ ಮೂಲಸೌಕರ್ಯ ಅಭಿವೃದ್ಧಿ
ಜೇನುತುಪ್ಪ ಶೇಖರಣೆ, ಮಾರುಕಟ್ಟೆಗೂ ಆದ್ಯತೆ

ಆಪರೇಷನ್ ಗ್ರೀನ್ ಯೋಜನೆ..?

ಆಪರೇಷನ್ ಗ್ರೀನ್ ವಿಸ್ತರಣೆಗೆ ₹500 ಕೋಟಿ
ಟೊಮ್ಯಾಟೋ, ಈರುಳ್ಳಿ, ಆಲುಗಡ್ಡೆಗೆ ಆಪರೇಷನ್ ಗ್ರೀನ್
ಈಗ ಎಲ್ಲಾ ಹಣ್ಣು & ತರಕಾರಿಗಳಿಗೆ ಆಪರೇಷನ್ ಗ್ರೀನ್
ಹಣ್ಣು & ತರಕಾರಿ ಬೆಳೆಗಾರರಿಗೂ ಧನ ಸಹಾಯ
ಶೇಕಡ 50ರಷ್ಟು ಸ್ಟೋರೇಜ್​ ದರದಲ್ಲಿ ಸಬ್ಸಿಡಿಗೆ ನಿರ್ಧಾರ

ರೈತನ ಸುಧಾರಣೆಗಾಗಿ 3 ಕ್ರಮ

1955ರ ಅಗತ್ಯ ವಸ್ತುಗಳ ಕಾಯ್ದೆ ಜಾರಿ
ಪೈಪೋಟಿ, ಸ್ಪರ್ಧೆಗಳಿಗೆ ಕಡಿವಾಣ
ದ್ವಿದಳ ಧಾನ್ಯ, ಎಣ್ಣೆ ಬೀಜ, ಬೇಳೆಕಾಳು ಬೆಳೆಗೆ ಪ್ರೋತ್ಸಾಹ
ಈರುಳ್ಳಿ, ಆಲೂಗಡ್ಡೆ ಬೆಳೆಗೆ ಪ್ರೋತ್ಸಾಹ
ರಾಷ್ಟ್ರೀಯ ವಿಪತ್ತು, ಬೆಲೆ ಕುಸಿದಾಗ ದಾಸ್ತಾನಿಗೆ ಅವಕಾಶ
ಮಧ್ಯವರ್ತಿ, ದಲ್ಲಾಳಿಗಳು ದಾಸ್ತಾನು ಮಾಡುವಂತಿಲ್ಲ
ಬೆಲೆ ಏರಿಕೆಗಾಗಿ ದಾಸ್ತಾನು ಮಾಡೋದಕ್ಕೆ ಕಡಿವಾಣ
ಅಗತ್ಯ ಬಿದ್ದರೆ ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ

ಎಪಿಎಂಸಿಗಳಲ್ಲಿ ಲೈಸೆನ್ಸ್ ಇರೋರಿಗೆ ಮಾತ್ರ ರೈತರಿಂದ ಉತ್ಪನ್ನಗಳ ಮಾರಾಟ
ಎಪಿಎಂಸಿಗಳಲ್ಲಿ ಕೈಗಾರಿಕಾ ಸ್ನೇಹಿ ಉತ್ಪನ್ನಗಳ ಮಾರಾಟಕ್ಕೂ ಅಸ್ತು
ರೈತರಿಗೆ ಅನುಕೂಲ, ಅರ್ಥವಾಗುವ ಮಾದರಿಯ ಮಾರಾಟ
ಉತ್ತಮ ಬೆಲೆಗೆ ಮಾರಾಟ ಮಾಡೋ ಪರಮಾಧಿಕಾರ ರೈತನಿಗೆ
ಅಂತರ್ ರಾಜ್ಯ ವ್ಯಾಪಾರಕ್ಕೂ ಹೊಸ, ಸರಳ ನಿಯಮ ಜಾರಿ
ಇ-ಟ್ರೇಡಿಂಗ್ ಮೂಲಕ ಪಾರದರ್ಶಕ, ದಲ್ಲಾಳಿ ರಹಿತ ವ್ಯವಸ್ಥೆ

ಕೃಷಿ ಉತ್ಪನ್ನಗಳಿಗೆ ಬೆಲೆ, ಗುಣಮಟ್ಟ ಭರವಸೆ
ಬೆಳೆ ಬೆಳೆಯೋ ಸಂದರ್ಭದಲ್ಲೇ ಬೆಳೆಗಳ ಬೆಲೆ ನಿಗದಿ
ಖಾಸಗಿ ಹೂಡಿಕೆ, ದಬ್ಬಾಳಿಕೆಗೆ ನಿಯಂತ್ರಣ
ಸಾಗಣೆ, ಮಾರಾಟ, ಸಂಸ್ಕರಣೆ, ರಫ್ತು ವಿಚಾರವಾಗಿ ಕಾನೂನು ಸಹಕಾರ
ವಲಸೆ, ಗುಳೆ ಹೋದ ರೈತರಿಗೆ ಗುಣಮಟ್ಟದ ಬೆಳೆ
ಬೆಳೆಗೆ ತಕ್ಕ ಬೆಲೆಯ ಭರವಸೆ ನೀಡಿದ ಕೇಂದ್ರ ಸರ್ಕಾರ

Leave a Reply