ಸರ್ಕಾರಿ ಬಸ್​, ರೈಲುಗಳ ನಿಯಮ ಬದಲಾವಣೆ..!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳ ಸಂಚಾರಕ್ಕೆ ಅವಕಾಶ ಕೊಡಲಾಗಿತ್ತು. ಬೆಳಗ್ಗೆ 7 ರಿಂದ ಸಂಚಾರ ಶುರುವಾಗಲಿದ್ದು ಸಂಜೆ 7 ಗಂಟೆ ವೇಳೆಗೆ ಬಸ್​ ಪ್ರಯಾಣ ಮುಕ್ತಾಯವಾಗಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ಆದರೆ ಬೆಳಗ್ಗೆ ಶುರುವಾದ ಪ್ರಯಾಣ ಸಂಜೆ 7 ಗಂಟೆಗೆ ಮುಕ್ತಾಯವಾಗುವುದು ಕಡಿಮೆ. ಅಥಹ ಜಿಲ್ಲೆಗಳಿಗೆ ರಾತ್ರಿ 7 ಗಂಟೆಗೆ ಕೊನೆಯದಾಗಿ ಪ್ರಯಾಣ ಆರಂಭ ಮಾಡಿ ಬೆಳಗ್ಗೆ ನಿಗದಿತ ಪಟ್ಟಣಗಳನ್ನು ತಲುಪಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ. ಬೀದರ್​ ಹಾಗೂ ಕಲಬುರಗಿಗೆ ಇದೀಗ ರಾತ್ರಿಯೂ ಪ್ರಯಾಣ ನಡೆಯಲಿದೆ. ಇನ್ಮುಂದೆ ನಿಧಾನವಾಗಿ ಎಲ್ಲಾ ಜಿಲ್ಲೆಗಳಿಗೂ ರಾತ್ರಿ ಪ್ರಯಾಣ ಆರಂಭವಾದರೂ ಅಚ್ಚರಿಯೇನಿಲ್ಲ. ಆದರೆ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳು ಮಾತ್ರ ಬಸ್​ ಸೌಲಭ್ಯವನ್ನು ಬಳಸುತ್ತಿದ್ದಾರೆ. ಹೆಚ್ಚಿನ ಬಸ್​ಗಳಿಗೆ ಪ್ರಯಾಣಿಕರು ಇಲ್ಲದೆ ಬಣಗುಡುತ್ತಿವೆ.

ಇನ್ನೂ ಭಾರತ ಸರ್ಕಾರ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತಲುಪಿಸಲು ಈಗಾಗಲೇ ಶ್ರಮಿಕ್​ ರೈಲು ಆರಂಭ ಮಾಡಿದೆ. ಎರಡು ರಾಜ್ಯಗಳ ಸಮ್ಮತಿ ಮೇರೆಗೆ ಶ್ರಮಿಕ್​ ರೈಲುಗಳ ಸಂಚಾರ ನಡೆಯುತ್ತಿದೆ. ಆದರೆ ಶ್ರಮಿಕ್​ ರೈಲುಗಳ ಆಗಮನಕ್ಕೆ ಇಲ್ಲೀವರೆಗೂ ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಅನುಮತಿ ನಿರಾಕರಣೆ ಮಾಡುತ್ತಿದ್ದರು. ಆದರೆ ಇದೀಗ ಕೇಂದ್ರ ಗೃಹ ಇಲಾಖೆ ಹೊಸ ಆದೇಶ ಮಾಡಿದ್ದು, ರೈಲುಗಳ ಪ್ರವೇಶಕ್ಕೆ ರಾಜ್ಯಗಳ ಸಮ್ಮತಿ ಬೇಕಾಗಿಲ್ಲ. ರಾಜ್ಯಗಳು ಕಾರ್ಮಿಕರನ್ನು ಲಿಸ್ಟ್​ ಮಾಡಿ ರೈಲ್ವೆ ಇಲಾಖೆಗೆ ರವಾನೆ ಮಾಡಿದರೆ ಅಷ್ಟೇ ಸಾಕು. ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ರೈಲಿನಲ್ಲಿ ನಾವು ಕಳುಹಿಸಿಕೊಡ್ತೇವೆ ಎಂದಿದೆ. ಜೂನ್​ 1 ರಿಂದ 200 ಹೆಚ್ಚುವರಿ ರೈಲು ದೇಶಾದ್ಯಂತ ದಿನನಿತ್ಯ ಸಂಚಾರ ಮಾಡಲಿದ್ದು, ಎಲ್ಲಾ ರಾಜ್ಯಗಳ ಬೇಡಿಕೆ ಆಧರಿಸಿ ಸಂಚಾರ ನಡೆಯಲಿದೆ. ದೇಶದ ಯಾವುದೇ ಮೂಲೆಯಲ್ಲಿರುವ ವಲೊಸೆ ಕಾರ್ಮಿಕ ತನ್ನೂರಿಗೆ ಯಾವುದೇ ಅಡ್ಡಿಯಿಲ್ಲದೆ ಓಡಾಟ ನಡೆಸಬಹುದಾಗಿದೆ.

ಇದೀಗ ಕರ್ನಾಟಕ ಸರ್ಕಾರ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್​ನಿಂದ ವಲಸೆ ಕಾರ್ಮಿಕರು ಬರುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಕೆಲಸ ಮಾಡಿತ್ತು. ಆದರೆ ಇದೀಗ ಕೇಂದ್ರ ರೈಲ್ವೆ ಇಲಾಖೆ ಹೊಸದಾಗಿ ರೈಲು ಆರಂಭ ಮಾಡಿರುವುದರಿಂದ ಎಲ್ಲರೂ ಹುಟ್ಟೂರುಗಳಿಗೆ ಬರಲಿದ್ದಾರೆ. ಸೋಂಕು ಹೆಚ್ಚಳವಾಗದಂತೆ ತಡೆಯುವುದು ರಾಜ್ಯ ಸರ್ಕಾರದ ಕೆಲಸವಾಗವಿದೆ. ಆದರೆ ಹಾಸನ ಜಿಲ್ಲೆಯ ವ್ಯಕ್ತಿ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇಳಿದುಕೊಂಡು ಹಾಸನಕ್ಕೆ ಹೋಗುವಾಗ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ತಡೆಯುವುದು ಯಾರು..? ಒಂದು ವೇಳೆ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯದಿಂದ ಬಂದ ವ್ಯಕ್ತಿಗೆ ಸೋಂಕು ಹರಡಿದ್ದರೆ, ಅಲ್ಲಿಂದ ಬಂದು ನೇರವಾಗಿ ಹೋಗಿ ಗ್ರಾಮಗಳನ್ನು ಸೇರಿಕೊಂಡರೆ ಗ್ರಾಮಗಳಿಗೂ ಸೋಂಕು ಹರಡಬಹುದು ಅಲ್ಲವೇ..? ಸೋಂಕು ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಇದೆಂಥಾ ಗೊಂದಲದ ಆದೇಶ ಎಂದು ಜನರೇ ಪ್ರಶ್ನೆ ಮಾಡುತ್ತಿದ್ದಾರೆ. ಕ್ವಾರಂಟೈನ್​ಗೆ ಸೂಕ್ತ ವ್ಯವಸ್ಥೆ ಮಾಡುವುದು ರಾಜ್ಯಗಳ ಜಬಾಬ್ದಾರಿ ಅದನ್ನೂ ಸೂಕ್ತವಾಗಿ ನಿರ್ವಹಿಸಿದ್ರೆ ಕೇಂದ್ರದ ಯೋಜನೆ ಸಕ್ಸಸ್​ ಆಗಲಿದೆ.

Leave a Reply