ನಟ ಚಿರಂಜೀವಿ ಸರ್ಜಾ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಭಾನುವಾರ ಉಸಿರಾಟದ ತೊಂದರೆಯಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಅಕಾಲಿಕ ಸಾವು ಚಿತ್ರರಂಗಕ್ಕೆ ಆಘಾತಕಾರಿಯಾಗಿದೆ.

40 ವರ್ಷದ ಚಿರಂಜೀವಿ ಸರ್ಜಾ ಭಾನುವಾರ ಕುಟುಂಬದವರ ಜತೆ ಇದ್ದಾಗ ಅತಿಯಾದ ಬೆವರು ಹಾಗೂ ಉಸಿರಾಟದ ತೊಂದರೆ ಎದುರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂಬ ವರದಿ ಬರುತ್ತಿವೆ.

ವಾಯುಪುತ್ರ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಚಿರಂಜೀವಿ ಸರ್ಜಾ 22 ಸಿನಿಮಾ ಮಾಡಿ ಜನರಿಗೆ ಹತ್ತಿರವಾಗಿದ್ದರು.

Leave a Reply