ರೈತರಿಂದ ಪಡಿತರ ಚೀಟಿ ವಾಪಸ್ ಪಡೆಯಲು ಬಿಡಲ್ಲ: ಡಿ.ಕೆ. ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ರೈತರು ಬಡವರು ಯಾವ ರೈತರಿಂದಲೂ ಪಡಿತರ ಚೀಟಿ ವಾಪಸ್ ಪಡೆಯಲು ಬಿಡಲ್ಲ. ವಾಪಸ್ ಪಡೆದರೆ ರೈತರ ಪರ ನಿಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಜೂನ್ 14ರಂದು ನಿಗದಿಯಾಗಿರುವ ತಮ್ಮ ಪದಗ್ರಹಣ ನಿಮಿತ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಪೂರ್ವ ತಯಾರಿ ಅಂಗವಾಗಿ ಭಾನುವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳ ಜತೆ ವಿಡಿಯೋ ಕಾನ್ಫರೆನ್ಸ್ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಧ್ಯಮಗಳ ಜತೆ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಎರಡು ಎಕರೆ ಜಮೀನು ಇರುವವರು ಕೂಡ ಟ್ರ್ಯಾಕ್ಟರ್ ಇಟ್ಟುಕೊಂಡಿರುತ್ತಾರೆ. ಅವರನ್ನು ದೊಡ್ಡ ರೈತ ಎಂದು ಪರಿಗಣಿಸಲು ಸಾಧ್ಯವಿಲ್ಲ. ರೈತರು ಬಡವರಾಗಿದ್ದು, ಅವರಿಂದ ಪಡಿತರ ಚೀಟಿ ವಾಪಸ್ ಪಡೆಯುವ ಪ್ರಶ್ನೆ ಇಲ್ಲ.

ದೇಶದಲ್ಲಿ ಆಹಾರ ಭದ್ರತೆ ಕಾನೂನು ಇದೆ. ಈಗ ಪಡಿತರ ಚೀಟಿ ಹೊಂದಿರುವ ರೈತರಿಗೆ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ವಿತರಿಸಬೇಕು. ಕಾರ್ಡ್ ಹೊಂದಿರುವವರ ರೈತರ ಪರ ನಿಂತು ಅವರ ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತೇವೆ.’

ಕೋವಿಡ್ ವಿಚಾರದಲ್ಲಿ ಸರ್ಕಾರದಿಂದ ಕೇವಲ ಘೋಷಣೆ:

ಕೋವಿಡ್ ವಿಚಾರದಲ್ಲಿ ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಕೇವಲ ಘೋಷಣೆಯಾಗಿದ್ದು, ಯಾವುದೇ ರೈತ, ಕಾರ್ಮಿಕರಿಗೆ ತಲುಪಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ತಮ್ಮ ಹಳ್ಳಿ ಸುತ್ತಮುತ್ತಲಿನಲ್ಲಿರುವ ರೈತರು, ಕಾರ್ಮಿಕರಿಗೆ ಆನ್ ಲೈನ್ ನಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ನೇರವಾಗಿ.

14ರಂದು ಪದಗ್ರಹಣ ಕಾರ್ಯಕ್ರಮ ಕಾರ್ಯಕ್ರಮ ನಡೆಸಲು ಸರ್ಕಾರಕ್ಕೆ ಅನುಮತಿ ಕೋರಿದ್ದೇವೆ. ಕೇವಲ 150 ಜನರನ್ನು ಮಾತ್ರ ಸೇರಿ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದು, ಆನ್ ಲೈನ್ ಮೂಲಕ ಪ್ರತಿಜ್ಞಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಹೀಗಾಗಿ ಯಾರು ಕೂಡ ಈ ಕಾರ್ಯಕ್ರಮಕ್ಕೆ ಬೇರೆ ಕಡೆಯಿಂದ ಯಾರು ಬರುವುದು ಬೇಡ. ನಿಮ್ಮ ಪಂಚಾಯಿತಿ ಹಾಗೂ ವಾರ್ಡ್ ಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ. ಈ ಕಾರ್ಯಕ್ರಮ ಎಲ್ಲ ಪಂಚಾಯಿತಿ, ವಾರ್ಡ್ ಗಳಲ್ಲಿ ಸೇರಿ 7800 ಕಡೆಗಳಲ್ಲಿ ನಡೆಸಲಾಗುತ್ತದೆ.

ಇಂದು ಈ ಕಾರ್ಯಕ್ರಮದ ಪೂರ್ವ ತಯಾರಿ ನಡೆಸಲಾಯಿತು. ಪಕ್ಷವನ್ನು ಕೆಡರ್ ಬೇಸ್ ಪಕ್ಷವಾಗಿ ಕಟ್ಟಬೇಕಿದ್ದು, ನಿಮ್ಮ ಸಹಕಾರ ಮುಖ್ಯ. ಹೀಗಾಗಿ ಪ್ರತಿ ವೀಕ್ಷಕರು ಪಂಚಾಯ್ತಿಗಳಿಗೆ ಕಡ್ಡಾಯವಾಗಿ ಪ್ರವಾಸ ಮಾಡಬೇಕು.

ಮೊದಲು ಕಂಪ್ಯೂಟರ್, ಇಂಟರ್ ನೆಟ್ ಸೌಲಭ್ಯ ಕಲ್ಪಿಸಿ:

ಆನ್ ಲೈನ್ ಶಿಕ್ಷಣ ವ್ಯವಸ್ಥೆ ಆರಂಭಿಸುವ ಮುನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಹಳ್ಳಿ ಹಳ್ಳಿ ಗಳಲ್ಲಿ ಅಂತರ್ಜಾಲ ಹಾಗೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿ. ಮೊದಲು ಸವಲತ್ತು ನೀಡಿ ಆಮೇಲೆ ಆನ್ ಲೈನ್ ಶಿಕ್ಷಣ ನೀಡಿ.

ಮೈಶುಗರ್ ಕಾರ್ಖಾನೆ ಮಾರುವುದರಿಂದ ಪ್ರಯೋಜನವಿಲ್ಲ:

ಮೈಶುಗರ್ ಕಾರ್ಖಾನೆಗೂ ಮಂಡ್ಯ ಜನರಿಗೂ ಉತ್ತಮ ಬಾಂಧವ್ಯವಿದೆ. ಸರ್ಕಾರ ಕಾರ್ಖಾನೆ ನಡೆಸಲು ಆಗದಿದ್ದರೆ ಅದು ಅವರ ಅಸಮರ್ಥತೆಯನ್ನು ತೋರುತ್ತದೆ. ಕಾರ್ಖಾನೆಯನ್ನು ಸರ್ಕಾರ ನಡೆಸಬೇಕು. ಇರುವ ನ್ಯೂನ್ಯತೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಖಾಸಗಿ ಅವರಿಗೆ ಮಾರಲು ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ಮಂಡ್ಯ ರೈತರ ಪರ ಹೋರಾಟ ಮಾಡುತ್ತೇವೆ.

Leave a Reply