ಸರ್ವಪಕ್ಷ ಸಭೆಯಲ್ಲಿ ಚೀನಾ ವಿರುದ್ಧ ಒಗ್ಗಟ್ಟಿನ ಗುಡುಗು

ಡಿಜಿಟಲ್ ಕನ್ನಡ ಟೀಮ್:

ಜೂನ್​ 15ರ ರಾತ್ರಿ ನಡೆದ ಚೀನಾ – ಭಾರತ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ 20 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಆ ಬಳಿಕ ಇಂದು ಸರ್ವಪಕ್ಷ ಸಭೆ ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ಸಭೆ ಮಹತ್ವದ ಚರ್ಚೆ ನಡೆಸಿದ್ರು. ಸಭೆ ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಚೀನಾ ದೇಶಕ್ಕೆ ಮಾತಿನಲ್ಲೇ ಪೆಟ್ಟು ನೀಡಿದ್ದಾರೆ. ಮೊನ್ನೆ ನಡೆದ ಘರ್ಷಣೆ ವೇಳೆ ನಮ್ಮ ದೇಶದ ಒಂದಿಂಚು ಜಾಗವನ್ನೂ ಚೀನಾ ಸೇನೆ ಆಕ್ರಮಿಸಲು ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ನಮ್ಮ ಸೈನಿಕರ ಬಗ್ಗೆ ಹೆಮ್ಮಯಿದೆ. ನಮ್ಮ ಸೈನಿಕರು ದೇಶದ ರಕ್ಷಣೆಗೆ ಪಣತೊಟ್ಟಿ ನಿಂತಿದ್ದಾರೆ. ಶಾಂತಿ ಮಾತುಕತೆ, ಹೋರಾಟ ಎಲ್ಲದಕ್ಕೂ ಭಾರತ ಸಿದ್ಧವಿದೆ ಎನ್ನುವ ಮೂಲಕ ಚೀನಾ ದೇಶಕ್ಕೆ ಖಡಕ್​ ಸಂದೇಶ ರವಾನಿಸಿದ್ರು. ಇನ್ನು ಸರ್ವಪಕ್ಷ ಸಭೆಯಲ್ಲಿ ಎಲ್ಲ ಪಕ್ಷಗಳು ಭಾರತೀಯ ಸೇನೆ ಬೆನ್ನಿಗೆ ನಿಂತಿದ್ದು, ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.

ನಮ್ಮ ಸೈನಿಕರು ಎಲ್ಲಾ ರೀತಿಯಲ್ಲೂ ರೆಡಿಯಾಗಿದ್ದಾರೆ. ಭಾರತೀಯ ಸೇನೆಗೆ ನಾವು ಸಂಪೂರ್ಣ ಸ್ವತಂತ್ರ ಕೊಟ್ಟಿದ್ದೇವೆ. ಜೊತೆಗೆ ಭಾರತ ಸರ್ಕಾರ ರಾಜತಾಂತ್ರಿಕ ಮಾತುಕತೆಯಲ್ಲೂ ಮುಂದಡಿ ಇಟ್ಟಿದೆ. ನಮ್ಮ ಸೇನೆ LAC ಯಲ್ಲಿ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಯುದ್ಧ ವಿಮಾನ, ಗಡಿಯಲ್ಲಿ ಗಸ್ತು ಸೇರಿದಂತೆ ದೇಶ ರಕ್ಷಣೆಗೆ ಬೇಕಾದ ಎಲ್ಲವೂ ಹೆಚ್ಚಾಗಿದೆ. ಎಲ್ಲರನ್ನೂ ತಡೆಯುತ್ತೇವೆ, ಎಲ್ಲರನ್ನೂ ಹೊಡೆಯುತ್ತೇವೆ. ದೇಶದ ರಕ್ಷಣೆ ವಿಷಯದಲ್ಲಿ ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ ಎಂದಿದ್ದಾರೆ. ರಕ್ಷಣೆ, ವಿರೋಧಿಗಳ ಹುಟ್ಟಡಗಿಸುವಿಕೆ ನಾವು ಸಿದ್ಧವಿದ್ದೇವೆ. ಏಕತೆ ಸಂದೇಶ ಭಾರತದಲ್ಲಿದೆ. ಅದು ಸೇನೆಯಲ್ಲೂ ಇದೆ ಎಂದಿರುವ ಪ್ರಧಾನಿ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ನಾವು ಎಲ್ಲದಕ್ಕೂ ತಯಾರು. 20 ಸೈನಿಕರ ಹುತಾತ್ಮರಾಗಿದ್ದನ್ನು ಭಾರತ ಎಂದೂ ಮರೆಯುವುದಿಲ್ಲ ಎಂದಿದ್ದಾರೆ.

ಭಾಷಣಕ್ಕೂ ಮೊದಲು ಭಾರತ-ಚೀನಾ ಗಡಿಯಲ್ಲಿನ ಸಂಘರ್ಷ ಬಗ್ಗೆ ಪ್ರಧಾನಿ ಮೋದಿ ಸರ್ವಪಕ್ಷ ಸಭೆ ನಡೆಸಿದರು. ಸುಮಾರು 17ಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಮುಖಂಡರ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ರು. ಭಾರತದೊಂದಿಗೆ ಕಲಹಕ್ಕೆ ಮುಂದಾಗಿರುವ ಚೀನಾ ದೇಶದ ಬಗ್ಗೆ ಯಾವ ರೀತಿಯ ನಿಲುವು ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ರು. ಸಭೆಯಲ್ಲಿ ಬಿಜೆಪಿ ಅಧ್ಯಕ್ಷ J.P ನಡ್ಡಾ ಸೇರಿದಂತೆ ಕಾಂಗ್ರೆಸ್, ಸಿಪಿಐ, ಶಿವಸೇನೆ, ಟಿಎಂಸಿ, ಅಕಾಲಿದಳ, ಸಮಾಜವಾದಿ ಪಾರ್ಟಿ, ಜೆಡಿಯು ಸೇರಿದಂತೆ ಹಲವಾರು ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಆದ್ರೆ ಬಿಹಾರದ ಅತೀ ದೊಡ್ಡ ಪಕ್ಷವಾಗಿರುವ ಆರ್​ಜೆಡಿ, ದೆಹಲಿಯ ಆಡಳಿರೂಢ ಎಎಪಿ ಹಾಗೂ ಅಸಾದುದ್ದೀನ್​ ಓವೈಸಿ ನೇತೃತ್ವದ ಎಂಐಎಂ ಪಕ್ಷಕ್ಕೆ ಆಹ್ವಾನವನ್ನೇ ನೀಡಲಾಗಿಲ್ಲ. ಈ ಬಗ್ಗೆ ಆರ್​ಜೆಡಿ ನಾಯಕ ತೇಜಸ್ವಿಯಾದವ್, ಎಂಐಎಂ ಸಂಸದ, ಅಸಾದುದ್ದೀನ್ ಓವೈಸಿ ಹಾಗೂ ಆಮ್​ ಆದ್ಮಿ ಪಾರ್ಟಿಯ ಸಂಜಯ್ ಜ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply