ಯೋಧರ ಮೊಬೈಲ್ ನಲ್ಲಿರುವ 89 ಆ್ಯಪ್ ಗಳನ್ನು ಡಿಲೀಟ್ ಮಾಡಲು ಸೂಚನೆ

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಸೈನಿಕರ ಖಾಸಗಿ ಮಾಹಿತಿ ಸೋರಿಕೆಯಾಗಬಹುದು ಎಂಬ ಕಾರಣಕ್ಕೆ ಫೇಸ್ಬುಕ್, ಇನ್ಸ್ಟಾಗ್ರಾಂ, ಸೇರಿದಂತೆ ಒಟ್ಟು 89 ಆ್ಯಪ್ಗಳನ್ನು ಮೊಬೈಲ್ನಿಂದ ಡಿಲೀಟ್ ಮಾಡುವಂತೆ ಯೋಧರಿಗೆ ಭಾರತೀಯ ಸೇನೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನಿನ್ನೆ ಈ ಆದೇಶವನ್ನು ರವಾನಿಸಲಾಗಿದ್ದು, ಜುಲೈ 15ಕ್ಕೂ ಮೊದಲು ತಮ್ಮ ಮೊಬೈಲ್‌ ಫೋನ್‌ನಲ್ಲಿರುವ ಪಬ್ ಜಿ, ಟ್ರೂ ಕಾಲರ್ ಸೇರಿದಂತೆ ಡೇಟಿಂಗ್ ಆ್ಯಪ್ಗಳಾದ ಟಿಂಡರ್, ಕೋಚ್ ಸರ್ಫಿಂಗ್ ಹಾಗೂ ನ್ಯೂಸ್ ಆ್ಯಪ್ಗಳಾದ ಡೈಲಿ ಹಂಟ್ ಹಾಗೂ ಇತರೆ ಆ್ಯಪ್ಗಳನ್ನು ತಮ್ಮ ಮೊಬೈಲ್ ನಿಂದ ಡಿಲೀಟ್ ಮಾಡಲು ಸೂಚಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.

ಈ 89 ಆ್ಯಪ್ ಗಳಲ್ಲಿ ಭಾರತ ಸರ್ಕಾರ್ ಈಗಾಗಲೇ ಬ್ಯಾನ್ ಮಾಡಿರುವ 59 ಚೀನೀ ಆ್ಯಪ್ಗಳು ಕೂಡ ಸೇರಿದೆ. ಆ್ಯಪ್ಗಳ ಡಾಟಾ ಮೂಲಕ ಸೇನಾ ಸಿಬ್ಬಂದಿಯ ಖಾಸಗಿ ಮಾಹಿತಿ ಮಾತ್ರವಲ್ಲದೆ ದೇಶದ ಆಂತರಿಕ ಮಾಹಿತಿ ಕೂಡ ಸೋರಿಕೆಯಾಗುವ ಸಾಧ್ಯತೆಯಿಂದಾಗಿ ಈ ರೀತಿಯ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

Leave a Reply