ಪಿಯುಸಿ ಫಲಿತಾಂಶ: ಕನ್ನಡ ಮಾಧ್ಯಮದಲ್ಲಿ ಪಾಸಾದವರು ಬರೀ ಶೇ. 47 ಮಂದಿ

ಡಿಜಿಟಲ್ ಕನ್ನಡ ಟೀಮ್:

ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದ 6,75,277 ವಿದ್ಯಾರ್ಥಿಗಳ ಪೈಕಿ 3,84,947 ಮಂದಿ ಪಾಸಾಗಿದ್ದಾರೆ. ಇನ್ನು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 2,88,998 ವಿದ್ಯಾರ್ಥಿಗಳ ಪೈಕಿ 1,37,454 ಮಂದಿಯಷ್ಟೇ (ಶೇ. 47.56) ಪಾಸಾಗಿದ್ದಾರೆ.

ಇನ್ನು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ. 72.45 ಮಂದಿ ಪಾಸಾಗಿದ್ದಾರೆ. 3,86,279 ಮಂದಿ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದು, ಅವರ ಪೈಕಿ 2,79,843 ಮಂದಿ ಪಾಸಾಗಿದ್ದಾರೆ.

ಈ ಬಾರಿ 257 ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ಉಳಿದಂತೆ ವಿಜ್ಞಾನದಲ್ಲಿ ಶೇ. 76.02, ವಾಣಿಜ್ಯದಲ್ಲಿ ಶೇ,65.52, ಕಲಾ ವಿಭಾಗದಲ್ಲಿ ಶೇ. 41.27 ವಿದ್ಯಾರ್ಥಿಗಳು ಸೇರಿ ಒಟ್ಟಾರೆ ಒಟ್ಟು ಶೇ.69.20 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪ್ರಥಮ ಸ್ಥಾನದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿದ್ದರೇ (ಶೇ.90.71), 2ನೇ ಸ್ಥಾನ ಕೊಡಗು ಜಿಲ್ಲೆಗೆ (ಶೇ.81.53) ಒಲಿದಿದ. ಉತ್ತರ ಕನ್ನಡ ((ಶೇ.80.97) ಮೂರನೇ ಸ್ಥಾನದಲ್ಲಿದೆ.

Leave a Reply