ವಿರೋಧ ಪಕ್ಷದ ಭ್ರಷ್ಟಾಚಾರ ಆರೋಪಕ್ಕೆ ಸಚಿವರ ಸ್ಪಷ್ಟನೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಭ್ರಷ್ಟಾಚಾರ ಆರೋಪಕ್ಕೆ ಸರ್ಕಾರದ ಸಚಿವರುಗಳು ನೀಡಿದ ಸ್ಪಷ್ಟನೆ ಹೀಗಿದೆ…

ಅಶೋಕ್:

 • ಸಿದ್ದರಾಮಯ್ಯ ಹಾಗೂ ಹೊಸದಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರು ಸರ್ಕಾರದ ಮೇಲೆ‌ ಭೃಷ್ಟಾರಾದ ಆರೋಪ ಮಾಡಿದ್ದಾರೆ
 • 50 ವರ್ಷ ಈ ರಾಜ್ಯವನ್ನು ಆಳಿದ ಪಕ್ಷ. ರಾಜ್ಯವನ್ನು ಲೂಟಿ ಮಾಡಿದ ಪಕ್ಷ.
 • ಕೋವಿಡ್ ಸಮಯದಲ್ಲಿ ಸರ್ಕಾರಕ್ಕೆ ಸಲಹೆ ಕೊಡಬೇಕಾದ ಪಕ್ಷ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪಿತೂರಿಯನ್ನು ಕಾಂಗ್ರೆಸ್ ನಾಯಕರು ಮಾಡ್ತಾ ಇದ್ದಾರೆ.
 • ವೆಂಟಿಲೇಟರ್ ನಲ್ಲಿ ಅವ್ಯವಹಾರ ಆಗಿದೆ ಅಂತ ಹೇಳಿದ್ರು. ಆದರೆ ಅವರು ಅಧಿಕಾರದಲ್ಲಿದ್ದಾಗ
  ಪಕ್ಕದ ರಾಜ್ಯಕ್ಕಿಂತ ಹೆಚ್ಚು ಬೆಲೆಗೆ ಖರೀದಿ ಮಾಡಿದ್ದಾರೆ.
 • 2019 ಜನವರಿಯಲ್ಲಿ ಯಾರು ಅಧಿಕಾರದಲ್ಲಿದ್ದರು. ಅವರು ಆತ್ಮಲೋಕ ಮಾಡಿಕೊಳ್ಳಬೇಕು. 2019 ಜನವರಿಯಲ್ಲಿ 14 ಲಕ್ಷಕ್ಕೆ 9 ಯೂನಿಟ್, ಆಗಸ್ಟ್ ನಲ್ಲಿ 15 ಲಕ್ಷದ 12 ಸಾವಿರಕ್ಕೆ 28 ಯೂನಿಟ್ ಕೊಂಡಿದ್ದಾರೆ.
 • 2019 ರಲ್ಲಿ ಜನವರಿಯಲ್ಲಿ 21 ಲಕ್ಷ 93 ಸಾವಿರ ರೂ.ಗೆ 9 ಯುನಿಟ್ ಖರೀದಿ ಮಾಡಿದ್ದಾರೆ. ಇವರೇನು ಚಂದ್ರಲೋಕದಿಂದ ಖರೀದಿ ಮಾಡಿದ್ದ ಅದನ್ನು.
 • ಐ ಫ್ಲೋ‌ ನಾಸಲ್ ನ್ನು 2,94,835 ರೂ.ಗೆ ಕೇರಳ ಖರೀದಿ ಮಾಡಿದೆ. ನಾವು 2,83,000 ಕಡಿಮೆ ಬೆಲೆಗೆ ಖರೀದಿ ಮಾಡಿದ್ದೇವೆ.
 • ಕಡಿಮೆ ಬೆಲೆಗೆ ಖರೀದಿ ಮಾಡಿದ್ದೇವೆ ಅದನ್ನು ಸಿದ್ದರಾಮಯ್ಯ ಪ್ರಶ್ನಿಸಿಲ್ಲ. ನಮ್ಮ ಅಧಿಕಾರಿಗಳು ಪ್ರಾಮಾಣಿಕವಾಗಿ ಹೆಚ್ಎಸ್ಎಂಸಿಯನ್ನು ಖರೀದಿ ಮಾಡಿದ್ದಾರೆ. ಒಟ್ಟು 232 ಕೋಟಿ ಖರ್ಚು ಆಗಿರೋದು. ಅದೂ ಡಿಸಿಗಳ ಮೂಲಕ ಖರ್ಚು ಆಗಿರೋದು.
 • ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಯಾರು ಹೋಗಿಲ್ಲ ಆಸ್ಪತ್ರೆಗೆ, ನಾನು ಮಾತ್ರ ಹೋಗಿದ್ದು ಅಂತ ಹೇಳ್ತಾ ಇದ್ದಾರೆ. ಅವರು ಹೆದರಿಕೊಂಡು ಹೋಗಿದ್ದಾರೆ. ಅದು ಕೇವಲ ಒಂದು ಆಸ್ಪತ್ರೆಗೆ ಹೋಗಿ ಕಾಲರ್ ಮೇಲೆ ಮಾಡುವ ಅಗತ್ಯ ಇಲ್ಲ. ನಾವು ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಿದ್ದೇವೆ.
 • ಡಿಕೆಶಿ ಬಹುಶಃ ನಮಗೆ ಕೇಳಿದ್ದು ಅಲ್ಲ. ಪಕ್ಕದಲ್ಲಿ ಕೂತವರಿಗೆ ಕೇಳಿದ್ದಾರೆ ಅಂತ ಕಾಣಿಸುತ್ತದೆ.
  ಅವರು (ಸಿದ್ದರಾಮಯ್ಯ) ಯಾವ ಆಸ್ಪತ್ರೆಗೂ ಹೋಗಿಲ್ಲ.
 • ಮನೆ ಮುಂದೆ ಬೋರ್ಡ್ ಹಾಕೊಂಡಿದ್ದಾರೆ. ಯಾರೂ ಮನೆಗೆ‌ ಬರಬೇಡಿ ಅಂತಾ.
 • ಕೌರವರಿಗೆ ಪಂಚ ಪಾಂಡವರು ಉತ್ತರ ಕೊಡ ಬೇಕು ಅಲ್ವಾ?
  ಅದಕ್ಕೆ ನಾವು ಬಂದಿದ್ದೇವೆ.
 • ಯಾರು ಪಾಂಡವರು, ಯಾರು ಕೌರವರು ಇಡೀ ದೇಶ ನೋಡಿದೆ
 • ದೇಶದಲ್ಲಿ ಕೌರವರ ಸ್ಥಿತಿ ಹೇಗಿದೆ ಎಂದು ಗೊತ್ತಾಗಿದೆ.
 • ಕಾಂಗ್ರೆಸ್ ಪಾರ್ಟಿ ಅವರು ಬುದ್ಧಿಗೂ ಸ್ಯಾನಿಟೈಸ್ ‌ಮಾಡಲಿ.
 • 5 ಲಕ್ಷ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳಿಸಿ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿದ್ದಾರೆ.
 • ಅವರು ಟಾಟಾ ಮಾಡಿದ್ದು ಬಿಟ್ಟರೆ, ಬರೇ ಚೆಕ್ ಹಿಡಿದು ತೋರಿಸಿದ್ದು ಮಾಡಿದ್ದಾರೆ.
 • ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ದೊಡ್ಡ ಸರದಾರ
 • ತುಮಕೂರು ರಸ್ತೆ ಸಿಸಿಸಿ ಕೇಂದ್ರದಲ್ಲಿ ಅವ್ಯವಹಾರ ಆಗಿದೆ ಎಂದಿದ್ದಾರೆ.
 • ನಿಮ್ಮ ಆಂಜನೇಯರನ್ನು ದಿಂಬು ಬೆಡ್ ವಿವರ ಕೇಳ ಬೇಕು. ನಾವು ಒಂದೂ ರೂ.ವನ್ನು ದಿಂಬು, ಬೆಡ್ ಗೆ ಕೊಟ್ಟಿಲ್ಲ.
 • ನೀವೆಲ್ಲಾ ಕೊರೊನಾ ಬರುತ್ತೆ ಎಂದು ಹೆದರಿ ಗೂಡು ಸೇರಿದ್ದೀರ. ನೀವು ಇಡೀ ದೇಶ, ರಾಜ್ಯದಲ್ಲಿ ಗೂಡು ಸೇರುತ್ತೀರಾ.
 • ಕಾಂಗ್ರೆಸ್ ನಾಯಕರು ಮಾಡಿರೋ ಆರೋಪ‌ ಅಪ್ಪಟ ಸುಳ್ಳು.
 • ಕಾಂಗ್ರೆಸ್ ನಾಯಕರು ಒಬ್ಬರನ್ನು ಕೋವಿಡ್ ಸೊಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ರಾ? ಆರೋಪ‌ ಮಾಡೋದು ಬಿಟ್ಟು ಕೆಲಸ ಮಾಡಿ.
 • ನಮ್ಮ ಅಧಿಕಾರಿಗಳು ಮೂರು ತಿಂಗಳು ಅವರ ಕುಟುಂಬ ನೋಡಿಲ್ಲ. ಅವರ ಮಾನಸಿಕ‌ ಸ್ಥಿತಿ ಕುಗ್ಗಿಸಬೇಡಿ

ಅಶ್ವತ್ಥ ನಾರಾಯಣ್

 • ಕೆಪಿಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಬಾರಿ ಬಾರಿ ಅಪಾದನೆ ಮಾಡ್ತಾ ಇದ್ದಾರೆ‌.
 • ಅವರಿಗೆ ಏನು ದಾರಿ ಕಾಣ್ತಾ ಇಲ್ಲ. ಅವರು ಬೇಸ್ ಲೆಸ್ ಆರೋಪ ಮಾಡ್ತಾ ಇದ್ರು. ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಇದ್ರು. ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ಇರಲಿಲ್ಲ.
 • ಜನರಲ್ಲಿ ಗೊಂದಲ‌ ಮೂಡಿಸುವ ಕೆಲಸ ಮಾಡ್ತಾ ಇದ್ರು.
 • ಅವರ ಆರೋಪಕ್ಕೆ ಉತ್ತರ ಕೊಟ್ಟಿದ್ದೇವೆ. ಇವತ್ತು ನಿರಾಧಾರವಾಗಿ ಆರೋಪ ಮಾಡಿದ್ದಾರೆ. ಅವರು ಕೇಳಿದ ಎಲ್ಲಾ ಇಲಾಖೆಯಿಂದ ಅನುಮಾನಕ್ಕೆ ಆಸ್ಪದ ಇಲ್ಲದಂತೆ ಉತ್ತರ ಕೊಡ್ತೇವೆ.
 • 750 ಕೋಟಿ ಆರೋಗ್ಯ ಇಲಾಖೆಯಲ್ಲಿ ಖರ್ಚು ಮಾಡಿದ್ದಾರೆ ಅನ್ನೋ ದು ಆರೋಪ.
 • 290 ಕೋಟಿ ಮಾತ್ರ ಇಲ್ಲಿಯವರೆಗೆ ಖರ್ಚು ಮಾಡಿದ್ದು.
 • ಪಿಪಿಇ ಕಿಟ್ ಅನ್ನು ಮಾರ್ಚ‌ನಲ್ಲಿ ೧ ಲಕ್ಷ ಕಿಟ್ ಗಳನ್ನು ೩೩೦ರೂ ಗೆ ಖರೀದಿ. ಚೈನಾದಿಂದ ಪಿಪಿಇ ಕಿಟ್ ಖರೀದಿ ಮಾಡಿದ್ದಾರೆ ಅಂತ. ಆರೋಪ ಮಾಡಿದ್ರು.
 • ಡಿಕೆಶಿಯನ್ನು ದುರ್ಯೋಧನನಿಗೆ ಹೋಲಿಸಿದ ಸುಧಾಕರ್. ಅವರ ಸ್ಟೈಲ್‌ನಲ್ಲಿ ಗೊತ್ತಾಗುತ್ತೆ ಯಾರು ಕೌರವರು ಅಂತ.
 • ಇಡೀ ದೇಶಕ್ಕೆ ಗೊತ್ತಿದೆ ಕೌರವರು ಯಾರು ಎಂದು.
 • ೨೧೧೮ ಕೋಟಿ ಒಟ್ಟಾರೆ ಎಲ್ಲಾ ಇಲಾಖೆಯಿಂದ ಸೇರಿ ಖರ್ಚು ಆಗಿರೋದು

ಬಸವರಾಜ್ ಬೊಮ್ಮಾಯಿ

 • 4,167 ಕೋಟಿ ರೂ. ಒಟ್ಟು ಅಕ್ರಮ ಆಗಿದೆ ಎಂದಿದ್ದಾರೆ. ಎಲ್ಲಾ ಇಲಾಖೆಯಿಂದ 506 ಕೋಟಿ ರೂ. ಮಾತ್ರ ಖರ್ಚಾಗಿದೆ.
 • ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ, ಪೊಲೀಸ್ ಇಲಾಖೆ, ಸಮಾಜ‌ಕಲ್ಯಾಣ ಇಲಾಖೆ ಬಾಧಿತರ ಪರಿಹಾರ ಕ್ರಮಗಳಿಗೆ 1611.7 ಕೋಟಿ ರೂ. ಒಟ್ಟು 2,118 ಕೋಟಿ ರೂ. ಮಾತ್ರ ಖರ್ಚಾಗಿದೆ.
 • ಯಾವುದೇ ಥರ್ಮಲ್‌ಸ್ಕಾನಿಂಗ್ ಖರೀದಿಯಾಗಿಲ್ಲ. ಆ ಅರ್ಡರ್ ಕ್ಯಾನ್ಸಲ್ ಆಗಿದೆ.
 • ೯ಸಾವಿರ ಥರ್ಮಲ್ ಸ್ಕಾನಿಂಗ್ ಖರೀದಿ ಆಗಿಲ್ಲ.
 • ಕೋವಿಡ್‌‌ ಸಂದರ್ಭದಲ್ಲಿ ಮಾಡಿರೋ ಆರೋಪ‌ ಅಮಾನವೀಯ.
 • ಕೋವಿಡ್ ಬೆಂಕಿಯಲ್ಲಿ ರಾಜಕೀಯ ರೊಟ್ಡಿ ಬೇಯಿಸ್ತಾ ಇದ್ದಾರೆ. ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ.
 • ಯಾರು ಲೀಡರ್ ಅಂತ ಕಿತ್ತಾಟ ನಡೆಯುತ್ತಾ ಇದೆ.
 • ನಮ್ಮ‌ ಸಲಕರಣೆಗಳಿಗೆ ಖರ್ಚು ಮಾಡಿರೋದು ೪೦೬ ಕೋಟಿ ರೂ‌..ಮಾತ್ರ.
 • ಅವರ ಸರ್ಕಾರದಲ್ಲಿ ಎಲ್ಲಿ ಮುಟ್ಟಿ ತ್ತೀರಾ ಅಲ್ಲೆಲ್ಲ ಬರೀ ಅವ್ಯವಹಾರವೇ.
 • ಜನ ಇನ್ನೂ ನಿಮ್ಮ‌ ಅವ್ಯವಹಾರ ಮರೆತಿಲ್ಲ.
 • ಸುಳ್ಳಿನ‌ ಸರದಾರರು ಆಗಬೇಡಿ. ಸತ್ಯದ ಬಲ ನಮ್ಮ ಸರ್ಕಾರದ‌ ಜತೆ ಇದೆ.
 • ಲೆಕ್ಕ ಕೊಡಿ ಅಂತ ಹೇಳಿದ್ರು
 • ಅವರಿಗೆ ಲೆಕ್ಕ ಕೊಟ್ಟಿದ್ದೇವೆ, ಇನ್ನೂ ಕೊಡ್ತೇವೆ.
 • ಆದ್ರೆ ಕಾಂಗ್ರೆಸ್ ಮಾಡಿರುವ ಅವ್ಯವಹಾರಕ್ಕೆ ಯಾವಾಗಾ ದಾಖಲೆ ಬಿಡುಗಡೆ ಮಾಡುತ್ತಾರೆ?

ಸುಧಾಕರ್

 • ವಿರೋಧ ಪಕ್ಷ ದವರು ಮಾಡಿರೋ ಆರೋಪ ಷೇಮ್.
 • ಅವರ ತಟ್ಟೆಯಲ್ಲಿ ಹೆಗ್ಗಣ ಇಟ್ಡುಕೊಂಡು ನಮ್ಮ ತಟ್ಟೆಯಲ್ಲಿ ನೊಣ ಹುಡುಕ್ತಾ ಇದ್ದಾರೆ.
 • ಯಾರು ಭೃಷ್ಣಾಚಾರದ ಬಗ್ಗೆ ಮಾತಾಡ್ತಾ ಇರೋದು
 • ಭೃಷ್ಟಾಚಾರದ ಕೂಪವನ್ನೆ ನಿಮ್ಮಲ್ಲಿ ಇಟ್ಟು ಕೊಂಡಿದ್ದೀರಿ
 • ಪ್ರಸ್ತಾವನೆಗೆ ಅನುಮೋದನೆಗೆ ವ್ಯತ್ಯಾಸ ಗೊತ್ತಿಲ್ವಾ ?
 • 815 ಕೋ ಮೆಡಿಕಲ್ ಉಪಕರಣ ಖರೀದಿ ಮಾಡಿದ್ದೀರಿ ಅಂತ ಹೇಳಿದ್ದಾರೆ.
 • ಸಚಿವರು ಅಧಿಕಾರಿಗಳು ಕಳೆದ ೧೨೦ದಿನದಿಂದ ಒಂದು ದಿನ ರಜೆ ಮಾಡಿಲ್ಲ
 • *ಒಂದು ರೂ ಭೃಷ್ಟಾಚಾರ ಮಾಡಿದ್ರೆ ನೇಣಿಗೆ ಬಹಿರಂಗ ಹಾಕಿ ಎಲ್ಲರನ್ನೂ*
 • ೧೪೦ ವೆಂಟಿಲೇಟರ್ ಆರ್ಡರ್ ಮಾಡಿದ್ದೇವೆ ಬಂದಿದೆ ಅಷ್ಟು
 • ಒಂದಕ್ಕೆ ೧೩.೬೦ ಲಕ್ಷ ರೂ ಪ್ರತಿ ಐಸಿಯೂ
 • ವಿಶ್ವದ ನಂಬರ್ ವನ್ ಕಂಪನಿ ಡ್ರಾಗನ್ ಕಂಪನಿಯಿಂದ ಖರೀದಿ. ನಾವು ಖರ್ಚು ಮಾಡಿದ್ದು ಕೇವಲ ೩೩ಕೋ ರೂ ಮಾತ್ರ.
 • ಮಾಹಿತಿ ಇಲ್ಲದೇ ಮಾತಾಡೋದು ಕೂಡ ಅಪರಾಧ.
 • ಆರ್ ಟಿ ಐ ಮೂಲಕ ದಾಖಲೆ ಪಡೆಯಿರಿ.
 • ರಾಜಕೀಯವಾಗಿ ಕಾಂಗ್ರೆಸ್ ಅನ್ನು ಉದ್ದಾರ ಮಾಡೋದು ಅವರ ಪ್ಲಾನ್
 • ಮಾತು ಎತ್ತಿದ್ರೆ, ರೈಲ್ವೆ ಸ್ಟೇಷನ್ ಬಸ್ ಸ್ಯಾಂಡ್ ಗೆ ಹೊಗ್ತಾರೆ.
 • ಈ ಬಗ್ಗೆ ಯಾವ ತನಿಖೆಗೆ ನಾವು ಸಿದ್ದವಿದ್ದೇವೆ .
 • ಇಲಾಖಾವಾರು ಮಾಹಿತಿ ಕೊಡಲು ಸಿದ್ದ ನಾವು.
 • 815ಕೋಟಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಗರಣ ಆಗಿದೆ ಅಂತಾರೆ. ನಾವು ಹತ್ತು ಐಟಮ್ ಖರೀದಿ ಮಾಡಿರೋದು. ಒಟ್ಟು ಖರೀದಿ ೩೩ ಕೋಟಿ ರೂ ಮಾತ್ರ.
 • ಸಿದ್ದರಾಮಯ್ಯ ಪತ್ರ ಬರೆದಿರುವ ವಿಚಾರ. ಅವರು ಕೇಳಿದ ಪ್ರಶ್ನೆಗೆ ಸಮಾಧಾನಕರವಾಗಿ ಉತ್ತರ ನೀಡಬೇಕು ಅಲ್ವಾ ನಾವು.
 • ಅಧಿಕಾರಿಗಳ‌ ಮನೋಧೈರ್ಯ ಕುಗ್ಗಿಸುವ ಕೆಲಸ‌ ಮಾಡಬೇಡಿ. ಇನ್ನಾದ್ರೂ ಸತ್ಯವನ್ನು ಅರಿತು ಮಾತಾಡಿ.

ಶಿವರಾಮ್ ಹೆಬ್ಬಾರ್:

 • ಕಾರ್ಮಿಕ ಇಲಾಖೆ ಯಲ್ಲಿ ೧ಸಾವಿರ ಕೋಟಿ ಅವ್ಯವಹಾರ ಆಗಿದೆ ಅಂತ ಹೇಳಿದ್ದಾರೆ.
 • 816 ಕೋಟಿ ರೂಪಾಯಿ ಹಣವನ್ನು ಜನರ‌ ಅಕೌಂಟ್ ಗೆ ಹಾಕಿದ್ದೇವೆ
 • 72ಕೋಟಿ ಹಣವನ್ನು ಬೇರೆ ಕಡೆಯಿಂದ ಬಂದವರಿಗೆ ಊಟ ನೀಡಲು ಖರ್ಚು ಮಾಡಿದ್ದೇವೆ.

Leave a Reply