ಕೊರೋನಾದಲ್ಲಿ ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಬಿಚ್ಚಿಟ್ಟ ಸಿದ್ದರಾಮಯ್ಯ

• 24 ಗಂಟೆಯಲ್ಲಿ ದಾಖಲೆ ನೀಡುತ್ತೇವೆ ಎಂದ ಮುಖ್ಯಮಂತ್ರಿಗಳೇ, ನಿಮ್ಮ ಮಾತಿನಲ್ಲಿ ಸತ್ಯಾಂಶ ಇದ್ದಿದ್ದರೆ ಕಳೆದ ಒಂದೂವರೆ ತಿಂಗಳಿಂದ 20 ಬಾರಿ ಪತ್ರ ಬರೆದಿದ್ದರೂ ಇಲ್ಲಿಯವರೆಗೂ ಯಾಕೆ ಮಾಹಿತಿ ನೀಡಿಲ್ಲ.
• ಕೊರೋನಾ ಸಂದರ್ಭದಲ್ಲಿ ಸಹಕಾರ ನೀಡದೇ ಆರೋಪ ಮಾಡುತ್ತಿದ್ದಾರೆ ಎಂದು ಜನರ ದಾರಿ ತಪ್ಪಿಸುತ್ತಿದ್ದೀರಲ್ಲಾ ನಾಚಿಕೆಯಾಗುವುದಿಲ್ಲವೇ?
• ನಮ್ಮ ಪಕ್ಷ ಎಲ್ಲ ಸಹಕಾರ ನೀಡಿದೆ. ನಮ್ಮ ಸಹಕಾರ ಜನರ ಜೀವ ಉಳಿಸಲಿಕ್ಕೆ ಮಾತ್ರ. ಅದು ನಿರಂತರವಾಗಿರುತ್ತದೆ. ಇದರಲ್ಲಿ ಇವರಿಗಿಂತ ಒಂದು ಹೆಜ್ಜೆ ಮುಂದಿರುತ್ತೇವೆ. ನೀವು ಈ ಸಂದರ್ಭದಲ್ಲಿ ಲೂಟಿ ಹೊಡೆಯಲು ನೀಡುತ್ತಿದ್ದಾರಲ್ಲಾ ನಾವು ಸಹಕಾರ ನೀಡಬೇಕಾ?
• ಭ್ರಷ್ಟಾಚಾರದ ವಿಚಾರವನ್ನು ಜನರಿಗೆ ತಿಳಸದಿದ್ದರೆ ನಮ್ಮ ಕರ್ತವ್ಯಕ್ಕೆ ದ್ರೋಹವಾಗುತ್ತದೆ. ಜನರಿಗೆ ದ್ರೋಹ ಮಾಡಿದಂತಾಗುತ್ತದೆ.
• 324 ಕೋಟಿ ಮಾತ್ರ ಖರ್ಚು ಅಂತಾ ಹೇಳುತ್ತಾರೆ. ನನಗಿರುವ ಮಾಹಿತಿ ಪ್ರಕಾರ, ಬಿಬಿಎಂಪಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ 200 ಕೋಟಿ, ಎಸ್ ಡಿಆರ್ ಎಫ್ ಮೂಲಕ ಜಿಲ್ಲಾಡಳಿತಗಳಿಗೆ ಬಿಡುಗಡೆ ಮಾಡಿರುವ ಹಣ 747 ಕೋಟಿ, ಕಾರ್ಮಿಕ ಇಲಾಖೆ ಖರ್ಚು ಮಾಡಿರುವುದು 1 ಸಾವಿರ ಕೋಟಿ, ವೈದ್ಯಕೀಯ ಶಿಕ್ಷಣ ಇಲಾಖೆ 815 ಕೋಟಿ, ಹಿಂದುಳಿದ ಸಮಿತಿ 1 ಸಾವಿರ ಕೋಟಿ ಕೋಟಿ ಖರ್ಚಾಗಿದೆ ಎಂದು ಹೇಳಿಕೆ. ಸಮಾಜ ಕಲ್ಯಾಮ, ಆಹಾರ, ಶಿಕ್ಷಣ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆ 500 ಕೋಟಿ, ಕೋವಿಡ್ ಆರೈಕೆ ಕೇಂದ್ರಕ್ಕೆ 160 ಕೋಟಿ, ಒಟ್ಟ 4167 ಕೋಟಿ.
• 324 ಕೋಟಿ ಮಾತ್ರ ಖರ್ಚಾಗಿದೆ ಅಂತಾ ಹೇಳಿರುವು ಶ್ರೀರಾಮುಲು ಸುಳ್ಳು ಹೇಳುತ್ತಿದ್ದಾರಾ ಅಥವಾ ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರಾ?
• ಮೋದಿ ಲಾಕ್ ಡೌನ್ ಘೋಷಿಸಿದಾಗ ದೇಶದಲ್ಲಿ 564 ಹಾಗೂ ರಾಜ್ಯದಲ್ಲಿ 1 ಸೋಂಕಿತರ ಸಂಖ್ಯೆ ಇತ್ತು. ಇವತ್ತು ದೇಶದಲ್ಲಿ 12 ಲಕ್ಷ ಸೋಂಕಿತರು, 30 ಸಾವಿರ ಜನ ಸತ್ತಿದ್ದಾರೆ. ರಾಜ್ಯದಲ್ಲಿ 75 ಸಾವಿರ ಸೋಂಕಿತರು, 1500 ಮಂದಿ ಸತ್ತಿದ್ದಾರೆ. ನೀವು ಸಲಕರಣೆಗಳನ್ನು ಭ್ರಷ್ಟಾಚಾರದಿಂದ ಖರೀದಿ ಮಾಡಿದ್ದರಿಂದ ಆದ ಪ್ರಯೋಜನ ಏನು? ನಾವು ಕೇಳಬಾರದಾ?
• ವಿರೋಧ ಪಕ್ಷವಾಗಿ ನಾವು ಸರ್ಕಾರದ ತಪ್ಪನ್ನು ಪ್ರಶ್ನಿಸದಿದ್ದರೆ ರಾಜ್ಯದ ಜನರಿಗೆ ಮಾಡುವ ದ್ರೋಹ.
• ಮೋದಿ ಅವರು ಲಾಕ್ ಡೌನ್ ಮಾಡುವಾಗ 21 ದಿನದಲ್ಲಿ ಕೊರೋನಾ ವಿರುದ್ಧ ಹೋರಾಟ ಗೆಲ್ಲುತ್ತೀವಿ ಎಂದಿದ್ದರು. ಇಂದು 12 ಲಕ್ಷ ಸೋಂಕಿತರಿದ್ದಾರೆ. ಇದು ನಿಮ್ಮ ಯಶಸ್ಸಾ ಅಥವಾ ವೈಫಲ್ಯನಾ?
• ವಲಸೆ ಕಾರ್ಮಿಕರು ಮರಳಿ ಹೋಗುವಾಗ ಅವರಿಗೆ ಹಣ್ಣು ನೀರು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ.
• ಈ ವರ್ಷ ಬಜೆಟ್ ಹಣದಿಂದ 1527 ಕೋಟಿ ಬಿಡುಗಡೆಯಾಗಿದ್ದು, ಮೇವರೆಗೂ ಒಟ್ಟು 3322 ಕೋಟಿ. ಅಂದರೆ ಬಿಡುಗಡೆಗಿಂತ ಎರಡುಪಟ್ಟು ಹೆಚ್ಚಾಗಿ ಖರ್ಚಾಗಿದೆ.
• ಪಿಎಂ ಕೇರ್ ಫಂಡ್ ನಿಂದ ಇಡೀ ದೇಶಕ್ಕೆ 50 ಸಾವಿರ ವೆಂಟಿಲೇಟರ್ ಖರೀದಿ, 2000 ಕೋಟಿ. ಒಂದಕ್ಕೆ 4 ಲಕ್ಷ ವೆಚ್ಚ. ತಮಿಳುನಾಡಿನವರು ಟ್ರಾನ್ಸ್ ಪೋರ್ಟ್ ವೆಂಟಿಲೇಟರ್ ಗೆ ಒಂದಕ್ಕೆ 4.78 ಲಕ್ಷ. ಆದರೆ ಕರ್ನಾಟಕ 5.60 ಲಕ್ಷಕ್ಕೆ ಖರೀದಿ (ಮಾರ್ಚ್ 23), ನಂತರ 12,30 ಲಕ್ಷಕ್ಕೆ, ನಂತರ 18 ಲಕ್ಷಕ್ಕೆ ಖರೀದಿಸಿದ್ದಾರೆ. ಇದು ಪಾರದರ್ಶಕವಾಗಿ ಖರೀದಿಯಾಗಿದೆಯಾ?
• ಆರೋಗ್ಯ ಸಚಿವರ ಪ್ರಕಾರ 9.65 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಇದು ಮಾರುಕಟ್ಟೆಯಲ್ಲಿ ಒಂದಕ್ಕೆ 330 ರೂಪಾಯಿ. ಇದರಲ್ಲಿ ಮಹರಾಷ್ಟ್ರದ ಪ್ಲಾಸ್ಟ್ ಸರ್ಜಿ ಕಂಪನಿಯಿಂದ 3.50 ಲಕ್ಷ ಪಿಪಿಇ ಕಿಟ್ ಖರೀದಿ. ಇದಕ್ಕೆ ಸರ್ಕಾರ 2117 ರೂಪಾಯಿ ಕೊಟ್ಟಿದ್ದಾರೆ. ಸ್ವದೇಶಿ ವಸ್ತು ಬಗ್ಗೆ ಭಾಷಣ ಮಾಡುವವರು ನಂತರ ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ್ದಾರೆ. 94 ಕೋಟಿ ಖರ್ಚು ಮಾಡಿದ್ದು, ಮುಖ್ಯಮಂತ್ರಿಗಳೇ ಒಪ್ಪಿಗೆ ನೀಡಿದ್ದಾರೆ.
• ಚೀನಾ ವಸ್ತು ನಿಷೇಧಿಸಿ ಅಂತಾ ಕೇಂದ್ರ ಸರ್ಕಾರ ಹೇಳುತ್ತಾರೆ. ಆದರೆ ಅವರ ಸರ್ಕಾರವೇ 3 ಲಕ್ಷ ಪಿಪಿಇ ಕಿಟ್ ಚೀನಾದಿಂದ ಖರೀದಿಸುತ್ತವೆ.
• 10 ಲಕ್ಷ ಮಾಸ್ಕ್ ಗಳನ್ನು ಖರೀದಿಸಿದ್ದು, ಮಾರುಕಟ್ಟೆಯಲ್ಲಿ ಅದರ ದರ 50 ರೂಪಾಯಿ. ಆದರೆ ಇವರು ಖರೀದಿ ಮಾಡಿರುವುದು 120 ರೂಪಾಯಿಗೆ.
• ಥರ್ಮಲ್ ಸ್ಕ್ಯಾನರ್ ಮಾರುಕಟ್ಟೆ ಬೆಲೆ 1500ರಿಂದ 2000 ರೂಪಾಯಿ. ಸರ್ಕಾರ 5945 ರೂಪಾಯಿ ಕೊಟ್ಟು ಖರೀದಿಸಿದ್ದಾರೆ.
• ಸ್ಯಾನಿಟೈಸರ್ ಗಳು 500 ಎ.ಎಲ್ ಗೆ ಮಾರುಕಟ್ಟೆಯಲ್ಲಿ 80-100 ರೂ. ಇದಕ್ಕೆ ಸರ್ಕಾರ 250 ರೂಪಾಯಿಗೆ ಖರೀದಿ. ಸಮಾಜ ಕಲ್ಯಾಣ ಇಲಾಖೆ 600 ರೂಪಾಯಿ ಕೊಟ್ಟು ಖರೀದಿ.
• 300 ಆಕ್ಸಿಜನ್ ಯಂತ್ರ ಖರೀದಿ. ಕರ್ನಾಟಕ ಒಂದಕ್ಕೆ 4 ಲಕ್ಷ ಕೊಟ್ಟರೆ, ಕೇರಳ 2.80 ಲಕ್ಷಕ್ಕೆ ಖರೀದಿಸಿದೆ.
• ಶವ ಸಂಸ್ಕಾರದಲ್ಲೂ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ.

Leave a Reply