ದೇಶದಲ್ಲಿ 18 ಲಕ್ಷ ದಾಟಿದ ಕೊರೋನಾ ಸೋಂಕು

ಡಿಜಿಟಲ್ ಕನ್ನಡ ಟೀಮ್:

ಇಂದು ದೇಶದಲ್ಲಿ 52972 ಕೊರೋನಾ ಸೋಂಕು ಪ್ರಕರಣ ಧೃಡಪಟ್ಟಿದ್ದು ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18 ಲಕ್ಷ ದಾಟಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ದೇಶದಲ್ಲಿ 5,79,357 ಸಕ್ರೀಯ ಪ್ರಕರಣಗಳಿದ್ದು, 11,86,203 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮಧ್ಯೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೂ ಸೋಂಕು ಖಚಿತವಾಗಿದೆ.

ನಿನ್ನೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಗಣ್ಯರು ಶುಭ ಹಾರೈಸಿದ್ದಾರೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಸೋಂಕು ತಗುಲಿದೆ.

ಇನ್ನು ಐಸಿಎಂಆರ್ ಮಾಹಿತಿ ಪ್ರಕಾರ ಈವರೆಗೂ ಭಾರತದಲ್ಲಿ 2 ಕೋಟಿ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ.

Leave a Reply