ಅಯೋಧ್ಯೆ ರಾಮ ಮಂದಿರಕ್ಕೆ ಶಿಲಾನ್ಯಾಸ; ಕನಸು ನನಸಾದ ಕ್ಷಣ

ಡಿಜಿಟಲ್ ಕನ್ನಡ ಟೀಮ್:

ಮೂರು ದಶಕಗಳ ನಿರಂತರ ಹೋರಾಟದ ನಂತರ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. ಆ ಮೂಲಕ ಇಂದು ನೂರಾರು ಕೋಟಿ ಭಾರತೀಯರ ಹಾಗೂ ವಿಶ್ವದ ಕೋಟ್ಯಾನು ಕೋಟಿ ಹಿಂದೂಗಳ ಬಹುದಿನದ ಕನಸು ಈಡೇರಿದೆ.

ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದರು. ಬೆಳಗ್ಗೆ 11.30ರ ಸುಮಾರಿಗೆ ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ರಾಮಲಲ್ಲಾದಲ್ಲಿ ರಾಮನಿಗೆ ಆರತಿ ಬೆಳಗಿದರು. ಆಮೇಲೆ ಪರಿಜಾತ ಗಿಡಕ್ಕೆ ನೆಟ್ಟು ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಗರ್ಭಗುಡಿ ಜಾಗದಲ್ಲಿ ಇಟ್ಟಿಗೆ ಇಟ್ಟು ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು.

ಈ ಸಂಭ್ರಮದ ಕ್ಷಣದಲ್ಲಿ ಕೊರತೆ ಎನಿಸಿದ್ದು ಬಿಜೆಪಿ ಧುರೀಣರಾದ ಹಾಗೂ ರಾಮ ಮಂದಿರ ನಿರ್ಮಾಣದ ಹೋರಾಟಕ್ಕೆ ಜೀವವನ್ನೇ ಸವಿಸಿದ ಲಾಲಕೃಷ್ಣ ಆಡ್ವಾಣಿ ಅವರ ಹಾಗೂ ಮುರಳಿ ಮನೋಹರ ಜೋಷಿ ಅವರು ಶಿಲಾನ್ಯಾಸದ ವೇಳೆ ಸ್ಥಳದಲ್ಲಿ ಇಲ್ಲದಿರುವುದು. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇದ್ದರು.

Leave a Reply