ಕೊರೋನಾಗೆ ಲಸಿಕೆ ಸಿದ್ಧ! ರಷ್ಯಾ ಅಧ್ಯಕ್ಷ ಪುಟಿನ್ ಪುತ್ರಿಗೂ ಈ ಲಸಿಕೆ ನೀಡಲಾಗಿದೆ

ಡಿಜಿಟಲ್ ಕನ್ನಡ ಟೀಮ್:

ಕಳೆದ ಐದಾರು ತಿಂಗಳಿಂದ ಇಡೀ ವಿಶ್ವವನ್ನೇ ಸೂತಕದ ಛಾಯೆಗೆ ತಳ್ಳಿದ್ದ ಕೊರೋನಾ ಮಹಾಮಾರಿಗೆ ಲಸಿಕೆ ಸಿದ್ಧವಾಗಿದೆ. ರಷ್ಯಾದಲ್ಲಿ ನಿರ್ಮಾಣವಾಗಿರುವ ಲಸಿಕೆಗೆ ಎಲ್ಲ ರೀತಿಯ ಅನುಮೋದನೆ ದೊರೆತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ತಿಳಿಸಿದ್ದಾರೆ.

ಮಾಸ್ಕೊದ ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ಜಂಟಿಯಾಗಿ ಈ ಲಸಿಕೆ ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯನ್ನು ತಮ್ಮ ಪುತ್ರಿಗೂ ನೀಡಲಾಗಿದೆ ಎಂದು ಪುಟಿನ್ ಘೋಷಿಸಿದ್ದಾರೆ. ಆ ಮೂಲಕ ಕೊರೋನಾ ವೈರಸ್ ಗೆ ಮೊದಲ ಲಸಿಕೆಯನ್ನು ರಷ್ಯಾ ಘೋಷಿಸಿದಂತಾಗಿದೆ.

ಜೂನ್ 18ರಿಂದ ಈ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗಿದ್ದು, ಈ ಲಸಿಕೆಯ ಎರಡು ಮಾತ್ತು ಮೂರನೇ ಹಂತದ ಪ್ರಯೋಗದಲ್ಲಿ ನೀಡಲಾಗ 38 ಜನರಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಖಚಿತವಾಗಿದೆ.

Leave a Reply