ಎಸ್ ಪಿಬಿ ಕೊರೋನಾ ನೆಗೆಟಿವ್ ಎಂಬ ಸುದ್ದಿ ಸುಳ್ಳು

ಡಿಜಿಟಲ್ ಕನ್ನಡ ಟೀಮ್:

ಎಸ್​ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೋನಾ ಗೆದ್ದಿದ್ದಾರೆ ಎಂಬ ಸುದ್ದಿ ಇಂದು ಬೆಳಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ವದಂತಿ ಎಂದು ಎಸ್ ಪಿಬಿ ಪುತ್ರ ಚರಣ್ ತಿಳಿಸಿದ್ದಾರೆ.

ಎಸ್​ಪಿಬಿ ಅವರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಅದು ನೆಗೆಟಿವ್​ ಬಂದಿದೆ ಅನ್ನೋ ಸುದ್ದಿ ಅಭಿಮಾನಿಗಳಲ್ಲಿ ಖುಷಿ ತಂದಿತ್ತು. ಆದರೆ ಈ ಕುರಿತಾಗಿಯೇ ಅವರ ಪುತ್ರ ಸ್ಪಷ್ಟನೆ ನೀಡಿದ್ದಾರೆ.

‘ನನ್ನ ತಂದೆಯ ಆರೋಗ್ಯ ಕುರಿತು ಪ್ರತಿಬಾರಿ ವೈದ್ಯರೊಂದಿಗೆ ಸಂಪರ್ಕಿಸಿದ ನಂತರ ನಾನೇ ಮಾಹಿತಿ ನೀಡುತ್ತಿದ್ದೆ. ಆದರೆ ಬೆಳಗಿನಿಂದ ನನ್ನ ತಂದೆ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಕುರಿತಾಗಿ ಸುದ್ದಿಯೊಂದು ಹರಿದಾಡುತ್ತಿದ್ದು, ಅದು ಕೇವಲ ಗಾಳಿ ಸುದ್ದಿ’ ಎಂದಿದ್ದಾರೆ ಚರಣ್​.

Leave a Reply