ಜನವರಿಯಲ್ಲಿ ‘ವಿರುಷ್ಕಾ’ ಕುಡಿ ಆಗಮನ!

ಡಿಜಿಟಲ್ ಕನ್ನಡ ಟೀಮ್:

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಜೋಡಿ ಸಿಹಿಸುದ್ದಿ ಕೊಟ್ಟಿದ್ದಾರೆ.

ಈ ಸ್ಟಾರ್ ದಂಪತಿಗಳು ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದು, ಜನವರಿಯಲ್ಲಿ ತಮ್ಮ ಕುಡಿಯ ಆಗಮನದ ನಿರೀಕ್ಷೆ ಹೊಂದಿದ್ದಾರೆ.

ಈ ವಿಚಾರವಾಗಿ ನಟಿ ಅನುಷ್ಕಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು,’ನಾವಿನ್ನು ಮೂವರು, ನಮ್ಮ ಕುಡಿ ಜನವರಿಯಲ್ಲಿ ಆಗಮಿಸಲಿದೆ’ ಎಂದು ಬರೆದುಕೊಂಡಿದ್ದಾರೆ.

Leave a Reply