ಐಪಿಎಲ್: ಸಿಎಸ್ ಕೆಗೆ ಗಾಯದ ಮೇಲೆ ಬರೆ ಎಳೆದ ರೈನಾ ಅಲಭ್ಯತೆ!

ಡಿಜಿಟಲ್ ಕನ್ನಡ ಟೀಮ್:

ಐಪಿಎಲ್ ಟೂರ್ನಿ ಆರಂಭಕ್ಕೆ 21 ದಿನ ಬಾಕಿ ಇರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸರಣಿ ಆಘಾತ ಎದುರಾಗಿದೆ.

ನಿನ್ನೆಯಷ್ಟೇ ತಂಡದ ಒಬ್ಬ ಬೌಲರ್ ಹಾಗೂ 10 ಮಂದಿ ಸಹಾಯಕ ಸಿಬ್ಬಂದಿ ಕೊರೋನಾ ಸೋಂಕು ಧೃಢಪಟ್ಟ ಕಾರಣ ತಂಡದ ಕ್ವಾರಂಟೈನ್ ಅವಧಿ ವಿಸ್ತರಣೆಯಾಗಿತ್ತು. ಈ ಮಧ್ಯೆ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ವೈಯಕ್ತಿಕ ಕಾರಣದಿಂದಾಗಿ ಭಾರತಕ್ಕೆ ಮರಳಿದ್ದು, ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ ಎಂಬ ವರದಿ ಬಂದಿದೆ.

Leave a Reply