ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ ಎನ್ನುವುದೇ ಮೋದಿಯ ಆತ್ಮನಿರ್ಭರದ ಅರ್ಥ: ರಾಹುಲ್ ಟೀಕೆ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ನವಿಲಿನ ಜತೆ ಬ್ಯುಸಿಯಾಗಿದ್ದಾರೆ, ಹೀಗಾಗಿ ನಿಮ್ಮ ಜೀವನದ ಬಗ್ಗೆ ನೀವೇ ಕಾಳಜಿ ವಹಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂದೇಶ ರವಾನಿಸಿದ್ದಾರೆ.

ಕೊರೋನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರದ ವೈಫಲ್ಯದ ಬಗ್ಗೆ ನಿರಂತರವಾಗಿ ಟೀಕೆ ಮಾಡುತ್ತಲೇ ಬಂದಿರುವ ರಾಹುಲ್ ಗಾಂಧಿ, ಸಂಸತ್ ಅಧಿವೇಶನ ಆರಂಭದ ಹೊತ್ತಲ್ಲಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಪ್ರಧಾನಿಯವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಅವರು ನವಿಲುಗಳ ಜತೆ ಬ್ಯುಸಿಯಾಗಿದ್ದಾರೆ. ಹೀಗಾಗಿ ದೇಶದ ಜನರು ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಬೇಕು, ನಿಮ್ಮ ಜಾಗ್ರತೆಯಲ್ಲಿ ನೀವಿರಿ. ಕರೊನಾದಿಂದ ರಕ್ಷಣೆ ಮಾಡಿಕೊಳ್ಳುವುದು ಈಗ ನಿಮ್ಮದೇ ಕೈಯಲ್ಲಿದೆ’ ಎಂದಿದ್ದಾರೆ.

ದೇಶದಲ್ಲಿ ಕೋವಿಡ್-19 ಪ್ರಕರಣಗಳು 50 ಲಕ್ಷ ಗಡಿ ಸಮೀಪಿಸಿರುವ ಹೊತ್ತಲ್ಲಿ. ಸಕ್ರಿಯ ಕೇಸುಗಳೇ 10 ಲಕ್ಷದಷ್ಟಿದೆ. ಒಬ್ಬ ವ್ಯಕ್ತಿಯ ಪ್ರತಿಷ್ಠೆಯಿಂದಾಗಿ ದೇಶದಲ್ಲಿ ಅವೈಜ್ಞಾನಿಕ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಇದರಿಂದಾಗಿ ದೇಶದಲ್ಲಿ ಕೊರೋನಾ ಸೋಂಕು ಹರಡಿದೆ. ಸ್ವಾವಲಂಬಿಗಳಾಗಿ, ಆತ್ಮ ನಿರ್ಭರರಾಗಿ ಎಂದು ಪ್ರಧಾನಿಯವರು ಹೇಳುತ್ತಾರೆ. ಅದರರ್ಥ ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಿ ಎಂದರ್ಥ ಪ್ರಧಾನಿಯವರು ತಮ್ಮ ನವಿಲುಗಳ ಜತೆ ಬ್ಯುಸಿಯಾಗಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

Leave a Reply