ನಿರ್ಮಾಪಕ ಮುನಿರತ್ನಗೆ ಕಣ್ಣೀರು ಹಾಕೋದು ಗೊತ್ತು, ಹಾಕ್ಸೋದೂ ಗೊತ್ತು; ಸಂಸದ ಡಿಕೆ ಸುರೇಶ್

ಡಿಜಿಟಲ್ ಕನ್ನಡ ಟೀಮ್:

ನಿರ್ಮಾಪಕ ಮುನಿರತ್ನಗೆ ಕಣ್ಣೀರು ಹಾಕೋದು ಗೊತ್ತು. ಹಾಕ್ಸೋದು ಇನ್ನೂ ಚೆನ್ನಾಗಿ ಗೊತ್ತಿದೆ. ಯಾವ್ಯಾವ ಟೈಂಲಿ ಯಾವ್ಯಾವ ಸೀನ್, ಯಾವಾಗ ಕಟ್ ಮಾಡ್ಬೇಕು, ಯಾವಾಗ ಜೋಡಿಸಬೇಕು ಅನ್ನೋದು ಅವರಿಗೆ ಗೊತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ರಾಜರಾಜೇಶ್ವರಿ ನಗರ ಉಪಚುನಾವಣೆ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು ಹೇಳಿದ್ದಿಷ್ಟು:

‘ಮುನಿರತ್ನ ಅವರಿಗೆ ಡ್ರಾಮಾ ಮಾಡುವುದರಲ್ಲಿ ಸಾಕಷ್ಟು ಅನುಭವ ಇದೆ. ಈಗ ಡ್ರಾಮಾ ಶುರು ಮಾಡಿದ್ದಾರೆ. ಹೊಸ ಅವತಾರ. ನನ್ನ ತಾಯಿ ಕಾಂಗ್ರೆಸ್, ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಅಂದಿದ್ದವರು ಇದೇ ಮುನಿರತ್ನ.

ಯಾಕ್ ಅವರಿಗೆ ಮರೆತೋಗಿದ್ಯಾ? ಆದ್ರೆ ಕ್ಷೇತ್ರದ ಜನರು ಮರೆತಿಲ್ಲ. ಯಾಕಂದ್ರೆ ಕಟ್ ಅಂಡ್ ಪೇಸ್ಟ್ ಮಾಡೋದು ಅವರ ಅಭ್ಯಾಸ. ಹೀಗಾಗಿ ಮರೆತೋಗಿರಬಹುದು. ನಿಮಗೆ (ಮುನಿರತ್ನ) ಯಾವಾಗ ಯಾರನ್ನ ಅಳಿಸಬೇಕು, ಯಾವಾಗ ಹೊದಿಯಬೇಕು ಅನ್ನೋದು ತುಂಬಾ ಚೆನ್ನಾಗಿ ಗೊತ್ತಿದೆ. ಜನ ನಿಮಗೆ ಬುದ್ದಿ ಕಲಿಸ್ತಾರೆ.

ಅವರಿಗೆ ಈಗ ಕಾಂಗ್ರೆಸ್ ತಾಯಿ ಮರೆತು ಹೋಗಿದೆ. ರಕ್ತ ಬದಲಾಗಿದೆ. ಕೆಂಪು ಹೋಗಿ ಈಗ ಕೇಸರಿ ಆಗಿದೆ. ಸಿನಿಮಾ ತೆಗೀಯೋರಿಗೆ ಯಾವಾಗ ಅಳಿಸಬೇಕು, ಯಾವಾಗ ಹೊದೆಸಬೇಕು ಅನ್ನೋದು ಗೊತ್ತಿರ್ತದೆ. ಯಾರೇ ಏನೇ ಹೇಳಿಕೆ ನೀಡಿದ್ರೂ ಅದು ಬರೀ ರಾಜಕೀಯ ಹೇಳಿಕೆ ಮಾತ್ರ. ಆದರೆ ನಾವು ವೈಯಕ್ತಿಕ ನಿಂದನೆ ಮಾಡಲ್ಲ. ನಮಗೂ ಜವಾಬ್ದಾರಿ ಇದೆ.’

ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಅನ್ನೋ ಅಶೋಕ್ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿ, ‘ಅಶೋಕ್ ಅವರಿಗೆ, ಮಂತ್ರಿ ಮಂಡಲದ ಒಕ್ಕಲಿಗ ಸಚಿವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ನೇರ ಫೈಟ್ ಅವರವರಿಗೆ ಇರಲಿ. ನೂರಿ ಕುಸ್ತಿ ಮಾಡ್ತಾರಲ್ಲ. ನೂರಿ ಕುಸ್ತಿ ಏನು ಅಂತಾ ಅವರನ್ನೇ ಕೇಳಿ ಹೇಳ್ತಾರೆ ಎಂದರು.

Leave a Reply