ಕೇಂದ್ರ ಸರ್ಕಾರದಿಂದ ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆ

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಸಮಸ್ಯೆಯಿಂದ ಭಾರತ ಚೇತರಿಕೆ ಕಾಣುತ್ತಿರುವ ಲಕ್ಷಣ ಗೋಚರಿಸಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆ ಘೋಷಣೆ ಮಾಡಿದೆ.

ಗುರುವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಮಾಡಿದ ಘೋಷಣೆಗಳ ಮುಖ್ಯಅಂಶ ಹೀಗಿವೆ…

* ಕಳೆದ ಮಾರ್ಚ್​ ತಿಂಗಳಿನಿಂದ ಸೆಪ್ಟೆಂಬರ್​ವರೆಗೆ ಉದ್ಯೋಗ ಕಳೆದುಕೊಂಡ, ತಿಂಗಳಿಗೆ 15 ಸಾವಿರ ರೂ.ಗೂ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೂ ಇಪಿಎಫ್​ ಸೌಲಭ್ಯ ಸಿಗಲಿದೆ.

* ಇಪಿಎಫ್​ಓನಲ್ಲಿ ರಿಜಿಸ್ಟರ್​ ಆಗಿರುವ ಕಂಪನಿಯ ಹೊಸ ಉದ್ಯೋಗಿಗಳಿಗೆ ಪಿಎಫ್​ ಸಬ್ಸಿಡಿ.

* 1,000 ಅಥವಾ ಅದಕ್ಕಿಂತ ಕಡಿಮೆ ನೌಕರರಿರುವ ಕಂಪನಿಗಳಿಗೆ ಮುಂದಿನ 2 ವರ್ಷಗಳ ಕಾಲ ಪಿಎಫ್​ ಸಬ್ಸಿಡಿ ಸಿಗಲಿದೆ. ಶೇ. 12ರಷ್ಟು ಕಂಪನಿ ಮತ್ತು ಶೇ. 12ರಷ್ಟು ಉದ್ಯೋಗಿಯ ಪಿಎಫ್​ ಮೊತ್ತವನ್ನು ಸರ್ಕಾರವೇ ಭರಿಸಲಿದೆ.

* 2021ರ ಮಾರ್ಚ್​ ವೇಳೆಗೆ ಎಂಎಸ್​ಎಂಐ ಕ್ಷೇತ್ರಗಳ ಪುನಶ್ಚೇತನಕ್ಕಾಗಿ ಸಾಲ ಗ್ಯಾರಂಟಿ ವಿಸ್ತರಣೆ.

* ಮೊಬೈಲ್ ಉತ್ಪಾದನೆ, ಔಷಧ ಉತ್ಪಾದನೆ ಮತ್ತಿತರ 10 ಕ್ಷೇತ್ರಗಳಿಗೆ ಪಿಎಲ್​ಐಎಸ್​ ಯೋಜನೆ.

* NABARD ಮೂಲಕ ಹೆಚ್ಚುವರಿ ತುರ್ತು ಕೆಲಸಕ್ಕೆ ಬಂಡವಾಳ ನಿಧಿಯಿಂದ ರೈತರಿಗೆ 25,000 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ.

* ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 2.5 ಕೋಟಿ ರೈತರಿಗೆ ರೈತರಿಗೆ 1.4 ಲಕ್ಷ ಕೋಟಿ ರೂ. ವಿತರಿಸಲಾಗಿದೆ.

Leave a Reply