ನ.24ರವರೆಗೆ ನ್ಯಾಯಾಂಗ ಬಂಧನದಲ್ಲಿ ಸಂಪತ್ ರಾಜ್

ಡಿಜಿಟಲ್ ಕನ್ನಡ ಟೀಮ್:

ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರ ನ್ಯಾಯಾಂಗ ಬಂಧನ ನ.24ರವರೆಗೆ ವಿಸ್ತರಣೆ ಮಾಡಲಾಗಿದೆ.

ಸಂಪತ್ ರಾಜ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಲಾಗಿದೆ. ಮಂಗಳವಾರದವರೆಗೂ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ಅವರನ್ನು ವಿಚಾರಣೆ ನಡೆಸಲು ಅವಕಾಶ ಕೊಡುವಂತೆ ಎನ್​ಐಎ ಮಾಡಿದ ಮನವಿಗೆ ಕೋರ್ಟ್ ಸ್ಪಂದಿಸಿದ್ದು, ಎರಡು ದಿನ ಅವರ ವಿಚಾರಣೆಗೆ ಅನುಮತಿ ನೀಡಿದೆ. ನವೆಂಬರ್ 23 ಮತ್ತು 24ರಂದು ಪರಪ್ಪನ ಅಗ್ರಹಾರ ಜೈಲಿನಲ್ಲೇ ಎನ್​ಐಎಯಿಂದ ಸಂಪತ್ ರಾಜ್ ವಿಚಾರಣೆ ನಡೆಯಲಿದೆ.

Leave a Reply