26 C
Bangalore, IN
Tuesday, December 12, 2017

ಡಿಜಿಟಲ್ ಕನ್ನಡ ವೆಬ್ಸೈಟ್ ಹಾಗು ಆಪ್ ಗಳಲ್ಲಿ ಜಾಹಿರಾತು ನೀಡಿ

ಡಿಜಿಟಲ್ ಕನ್ನಡ ಕ್ಕೆ ಜಾಹೀರಾತು ನೀಡಬೇಕೇಕೆ ಎಂಬುದಕ್ಕೆ ಉತ್ತರ ಸರಳವಾಗಿದೆ. ಡಿಜಿಟಲ್ ಜಗತ್ತಿನ ನಮ್ಮ ಗೌರವಾನ್ವಿತ ಓದುಗರು ಮತ್ತು ನಿಮ್ಮ ಮೌಲ್ಯಯುತ ಗ್ರಾಹಕರು ಇಬ್ಬರೂ ಒಂದೇ. ಹೊಸ ಉತ್ಪನ್ನ- ಅನುಭವಗಳಿಗೆ ತೆರೆದುಕೊಳ್ಳುವ ತವಕ ಮತ್ತು ಖರೀದಿ ಸಾಮರ್ಥ್ಯ ಒಗ್ಗೂಡಿರುವುದು ಈ ಸಮೂಹದಲ್ಲೇ. ಅಂತರ್ಜಾಲದಲ್ಲಿ ಆಕರ್ಷಕವಾದುದನ್ನು, ತಮಗೆ ಉಪಯೋಗವಾಗುವುದನ್ನು ಹುಡುಕಿ, ಕ್ಲಿಕ್ಕಿಸಿ, ಖರೀದಿಯ ಆರ್ಡರ್ ಕೊಡೋರು ಇವರೇ. ನಮ್ಮ ವೆಬ್ ಸೈಟ್ ಸಹ ಬ್ರಾಂಡ್ ಪ್ರದರ್ಶನಕ್ಕೆ ಎಲ್ಲೂ ಕುಂದುಂಟಾಗದಂತೆ ರೂಪುಗೊಂಡಿದೆ. ಬಹುತೇಕ ಸುದ್ದಿ ಜಾಲತಾಣಗಳಲ್ಲಿ ಹತ್ತೆಂಟು ಜಾಹೀರಾತುಗಳನ್ನು ಒಮ್ಮೆಗೇ ನುಗ್ಗಿಸಿ ಕಿರಿಕಿರಿ ಅನುಭವ ನೀಡಲಾಗುತ್ತಿದೆ. ಇದು ಸುದ್ದಿತಾಣದ ಬ್ರಾಂಡ್ ಗೂ ಒಳ್ಳೆಯದಲ್ಲ ಹಾಗೂ ಜಾಹೀರಾತುದಾರರಿಗೂ ನೆರವಾಗುವುದಿಲ್ಲ ಎಂಬ ಸೂಕ್ಷ್ಮವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಹೀಗಾಗಿಯೇ ಕೆಲವೇ ಉತ್ಪನ್ನಗಳೊಂದಿಗೆ ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಳ್ಳುವುದರತ್ತ ನಮ್ಮ ಆಸಕ್ತಿ. ಆಗ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡುವವರ ಮನದಲ್ಲಿ ಜಾಹೀರಾತು ಉತ್ಪನ್ನದ ಬ್ರಾಂಡ್ ಸಹ ಅಚ್ಚೊತ್ತುತ್ತದೆ.

ಜಾಹೀರಾತುದಾರರು ಸಂಪರ್ಕಿಸಬೇಕಾದ ಮಿಂಚಂಚೆ.

advertise@digitalkannada.com